ಡಿಸ್ಪ್ಲೆಯಲ್ಲೂ ಹೊಸತನ, ದರದಲ್ಲೂ ಓಕೆಯಣ್ಣಾ! ಇದು Motorolaದ ಭಾರತದ ಮೊಬೈಲ್ ಮಾರುಕಟ್ಟೆಗೆ ಹೊಸ ಸ್ಮಾರ್ಟ್ ಫೋನ್ ಕಾಲಿಟ್ಟಿದೆ. ಹೊಸತೆಂದರೆ, ಬರೇ ಮಾಡೆಲ್ ಹೊಸತಲ್ಲ, ತಂತ್ರಜ್ಞಾನ ಕೂಡಾ ಹೊಸತು. ಇದೇ ಮೊದಲ ಬಾರಿಗೆ 21:9 ಆ್ಯಸ್ಪೆಕ್ಟ್ ರೇಶ್ಯೋ ಇರುವ ಫೋನ್ ಬಿಡುಗಡೆಯಾಗಿದೆ. ಇಲ್ಲಿದೆ ಫೀಚರ್ಸ್ ಮತ್ತು ಬೆಲೆ. ಒಡೆತನದ ಮೊಬೈಲ್ ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಮೊಬೈಲ್ ಕ್ಷೇತ್ರದಲ್ಲಿ ಮೊದಲ 21:9 ಆ್ಯಸ್ಪೆಕ್ಟ್ ರೇಶ್ಯೋ ಹೊಂದಿರುವುದು ಸ್ಮಾರ್ಟ್‌ಫೋನ್ ಹೆಗ್ಗಳಿಕೆ. ಪಂಚ್‌ಹೋಲ್ ಕ್ಯಾಮೆರಾ ಮತ್ತು ಸಿನಿಮಾ ವಿಷನ್ ಡಿಸ್ಪ್ಲೇ ಹೊಂದಿರುವ ಈ ಫೋನ್ 4GB ಮತ್ತು 128GB ವೇರಿಯಂಟ್‌ ಮತ್ತು ಬಣ್ಣಗಳಲ್ಲಿ ಲಭ್ಯವಿದೆ. ಮೈಕ್ರೊ ಮೂಲಕ ಸ್ಟೋರೆಜನ್ನು 512 GBವರೆಗೆ ವಿಸ್ತರಿಸಬಹುದು. ಇದನ್ನೂ ಓದಿ |ಹೊಸ ಉದ್ಯಮಕ್ಕೆ ಕೈ ಹಾಕಿದ ಫೇಸ್ಬುಕ್! ನಿಮಗೇನು ಲಾಭ? 9609 - ಚಿಪ್‌ಸೆಟ್ ಒಳಗೊಂಡಿರುವ ಈ ಫೋನ್ 9 ಆಪರೇಟಿಂಗ್ ಸಿಸ್ಟಮ್ ಹಾಗೂ ಹೈಬ್ರಿಡ್ ಡ್ಯುಯಲ್ ಸಿಮ್ ಸೌಲಭ್ಯ ಹೊಂದಿದೆ. ಹಿಂಬದಿ 48MP + 5MP ಸಾಮರ್ಥ್ಯದ ಎರಡು ಕ್ಯಾಮೆರಾ ಸೆಟಪ್ ಹೊಂದಿದ್ದು, 25 ಸೆಲ್ಫೀ ಕ್ಯಾಮೆರಾ ಹೊಂದಿದೆ. 3500 ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಟರ್ಬೋಪವರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಭಾರತದಲ್ಲಿ ಇದರ ಬೆಲೆ 19,999 ಆಗಿದೆ.ಮುಂದಿನ ವಾರದಲ್ಲಿ ಇದು ಆನ್ ಲೈನ್ ಮೂಲಕ ಖರೀದಿಗೆ ಲಭ್ಯವಾಗಲಿದೆ.