ನಿದ್ರೆಗೆ ಭಂಗ ತರೋ ಆ್ಯಪ್ಸ್ ಗೊತ್ತು, ಜೋಗುಳ ಹಾಡಿ ಮಲಗಿಸೋ ಆ್ಯಪ್ಸ್? ಸಾಮಾನ್ಯವಾಗಿ ನಮ್ಮ ಏಕಾಗ್ರತೆಗೆ ಭಂಗ ತರುವ ಮೊಬೈಲ್ ಫೋನ್, ಸರಿಯಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆಂದರೆ ಅದು ಗುಡ್ ನ್ಯೂಸ್ ಅಲ್ಲದೆ ಬೇರೇನು? ಹೌದು, ಈ ಕೆಲ ಅಪ್ಲಿಕೇಶನ್‌ಗಳು ನಿಮ್ಮ ನಿದ್ರಾಸಮಸ್ಯೆಗಳಿಗೆ ಪರಿಹಾರವಾಗಬಲ್ಲವು. ಸಾಮಾನ್ಯವಾಗಿ ಮನುಷ್ಯರಿಗೆ ಪ್ರತಿ ರಾತ್ರಿ ನಿರಂತರ 8 ಗಂಟೆಗಳ ನಿದ್ರೆ ಅವಶ್ಯಕ. ನಿದ್ರೆ ಸರಿಯಾಗಲಿಲ್ಲವೆಂದರೆ ಮರು ಬೆಳಗಿನ ಯಾವ ಕಾರ್ಯಗಳೂ ಸರಾಗವಾಗಿ ಸಾಗದು. ನಿದ್ರಾಹೀನತೆಯು ಬಹುದೊಡ್ಡ ಸಮಸ್ಯೆಯಾಗಿದ್ದು, ಅದಕ್ಕೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳುವುದು ಅಗತ್ಯ. ಇದೀಗ ನಿಮ್ಮ ನಿದ್ದೆಗೆಡಿಸುವ ಮೊಬೈಲ್ ಫೋನನ್ನೇ ಉತ್ತಮ ನಿದ್ದೆ ಪಡೆಯಲು ಬಳಸಿಕೊಳ್ಳಬಹುದು. ಹೇಗೆಂದಿರಾ? ಈ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಬಳಸಿ ನೋಡಿ.1.ನಾಯ್ಸ್ಲಿ()ಈ ಆ್ಯಪ್‌ನಲ್ಲಿ ಸ್ಲೀಪ್ ಸೌಂಡ್‌ಟ್ರ್ಯಾಕ್‌ಗಳಿದ್ದು, ನಿಮಗೆ ಸರಿ ಹೊಂದುವುದನ್ನು ಆಯ್ಕೆ ಮಾಡಿಕೊಳ್ಳಿ.- ಗಾಳಿಯ ಸದ್ದು, ಅಲೆಗಳ ಸದ್ದು, ಕೆಫೆಯ ಗಜಿಬಿಜಿ ಹೀಗೆ ಮುಂತಾದ ಸೌಂಡ್‌ಟ್ರ್ಯಾಕ್‌ಗಳು ಇದರಲ್ಲಿವೆ. ಇವುಗಳಲ್ಲಿ ನಿಮಗೆ ನಿದ್ದೆಗೆ ಅನುಕೂಲಕರ ಎಂಬಂಥದನ್ನು ಆರಿಸಿಕೊಳ್ಳಬಹುದು. ಇಲ್ಲವೇ, ಎರಡು ಮೂರು ಶಬ್ದಗಳನ್ನು ಮಿಕ್ಸ್ ಮಾಡಿ ನಿಮ್ಮದೇ ಆದ ಸೌಂಡ್‌ಟ್ರ್ಯಾಕ್‌ ಸೃಷ್ಟಿಸಿಕೊಳ್ಳಬಹುದು.- ಲೂಪ್ ಫೀಚರ್ ಇದ್ದು, ಎಷ್ಟು ಬಾರಿ ಸದ್ದು ರಿಪೀಟ್ ಆಗಬೇಕೆಂದು ಬಯಸುವಿರೋ ಅಷ್ಟು ಬಾರಿಗೆ ಸೆಟಿಂಗ್ಸ್ ಮಾಡಿಕೊಳ್ಳಬಹುದು.- ಈ ಬ್ಯಾಕ್‌ಗ್ರೌಂಡ್ ಸದ್ದು ನಿಮ್ಮನ್ನು ರಿಲ್ಯಾಕ್ಸ್ ಮಾಡಿ ನಿದ್ದೆಗೆ ತಳ್ಳುತ್ತದೆ.- ಟೈಮರ್ ಇದ್ದು, ಎಷ್ಟು ಹೊತ್ತು ಬೇಕೋ ಅಷ್ಟು ಹೊತ್ತಿನ ಟೈಮರ್ ಸೆಟ್ ಮಾಡಿಕೊಳ್ಳಬಹುದು. ಇದರಿಂದ ಇಡೀ ರಾತ್ರಿ ಸುಮ್ಮನೆ ಟ್ರ್ಯಾಕ್ ಆನ್ ಇರುವುದನ್ನು ತಪ್ಪಿಸಬಹುದು. ಟಾಪ್‌ 9 ಅಪಾಯಕಾರಿ ಸೋಶಿಯಲ್‌ ಆ್ಯಪ್‌ಗಳು!2.ಝಿಜ್ ()ಇದೊಂದು ಜನಪ್ರಿಯ ಸ್ಲೀಪ್ ಆ್ಯಪ್ ಆಗಿದ್ದು, ಒಂದೇ ಬಟನ್‌ನ ಸಹಾಯದಿಂದ ನಿದ್ರೆಗೆ ಜಾರಿಸುತ್ತದೆ.- ಸೌಂಡ್ ಸೀಕ್ಸೆನ್ಸ್ ಬಳಸಿ ನಿಮ್ಮನ್ನು ನಿದ್ರಾಸಮಸ್ಯೆಯಿಂದ ಹೊರತರುತ್ತದೆ.- ಟೈಮರ್ ಬಳಸಿ ಬೇಕೆಂದಷ್ಟು ಹೊತ್ತು ಡ್ರೀಮ್‌ಸ್ಕೇಪ್ ಪ್ಲೇ ಮಾಡಬಹುದು. ಡ್ರೀಮ್‌ಸ್ಕೇಪ್‌ನಲ್ಲಿ ವಿವಿಧ ಸೌಂಡ್ ಎಫೆಕ್ಟ್‌ಗಳು, ವಾಯ್ಸ್ ಓವರ್‌ಗಳು ಹಾಗೂ ಮ್ಯೂಸಿಕ್ ಇರುತ್ತದೆ.- ಪ್ರತಿ ರಾತ್ರಿ ಬೇರೆ ಬೇರೆ ಡ್ರೀಮ್‌ಸ್ಕೇಪ್ ಆಫರ್ ನೀಡುತ್ತದೆ.- ಸ್ಲೀಪ್ ಮೊಡ್ಯೂಲ್, ಫೋಕಸ್ ಮೊಡ್ಯೂಲ್, ನ್ಯಾಪ್ ಮೊಡ್ಯೂಲ್ ಎಂದು ನಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳಬಹುದು. ಬದುಕು ಬದಲಿಸಬಲ್ಲ ಫಿಟ್‌ನೆಸ್ ಆ್ಯಪ್ಸ್!3.ಹೆಡ್‌ಸ್ಪೇಸ್ಇದೊಂದು ಜನಪ್ರಿಯ ಮೆಡಿಟೇಶನ್ ಆ್ಯಪ್ ಆಗಿದ್ದು, ಬಹಳಷ್ಟು ಜನರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.- ಇದರಲ್ಲಿ ಧ್ಯಾನ ಮಾಡಲು ಸೂಕ್ತ ಗೈಡ್‌ಲೈನ್ಸ್‌ಗಳಿದ್ದು, ಇವುಗಳನ್ನು ಮನಸ್ಸನ್ನು ರಿಲ್ಯಾಕ್ಸ್ ಮಾಡಿ ನಿದ್ದೆ ಶಾಂತವಾಗಿ ನಿದ್ರಿಸಲು ಸಹಾಯ ಮಾಡುತ್ತವೆ.- ದಿನವಿಡೀ ಮೈಂಡ್‌ಫುಲ್ ಆಗಿರಲು ಈ ಆ್ಯಪ್ ರಿಮೈಂಡರ್‌ಗಳನ್ನು ಕಳುಹಿಸುತ್ತಲೇ ಇರುತ್ತಾದ್ದರಿಂದ, ಮೈ ಮರೆತಾಗ ಎಚ್ಚರಗೊಳ್ಳಬಹುದು.- ಒತ್ತಡ, ಆತಂಕ, ಸುಸ್ತು ಇತರೆ ಸಮಸ್ಯೆಗಳನ್ನು ಎದುರಿಸಲು ಬೇರೆ ಬೇರೆ ರೀತಿಯ ಕೋರ್ಸ್‌ಗಳನ್ನು ನೀಡುತ್ತದೆ.- ಸ್ಕ್ರೀನ್ ಡಿಮ್ ಆಗಿದ್ದು, ಬಟನ್‌ಗಳು ಬಳಸಲು ಸುಲಭವಾಗಿವೆ.4.ಸ್ಲೀಪ್ ಸೈಕಲ್ಈ ಆ್ಯಪ್ ನಿಮ್ಮ ನಿದ್ರಾ ವಿನ್ಯಾಸವನ್ನು ರೆಕಾರ್ಡ್ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಡೀಪ್ ಸ್ಲೀಪ್‌ನಿಂದ ಹೊರ ಬಂದಾಗ ಅಲಾರ್ಮ್ ಬಾರಿಸಿ ಎಚ್ಚರಿಸುತ್ತದೆ.- ಲೈಟರ್ ಸ್ಲೀಪ್ ಸ್ಟೇಜ್‌ನಲ್ಲಿರುವಾಗ ಅಲಾರಾಂ ಬಾರಿಸಿ ಎಬ್ಬಿಸುತ್ತದೆ.- ನಿಮ್ಮ ಫೋನನ್ನು ಹತ್ತಿರದಲ್ಲಿಟ್ಟುಕೊಂಡರೆ ಸಾಕು, ನಿಮ್ಮ ನಿದ್ರಾವಿನ್ಯಾಸವನ್ನು ಟ್ರ್ಯಾಕ್ ಮಾಡುತ್ತದೆ.5.ಕಾಮ್ಮಲಗುವಾಗ ಕತೆ ಕೇಳಿದರೆ ನಿದ್ದೆ ಬರುತ್ತದೆ ಎನ್ನುವವರು ನೀವಾದರೆ, ಈ ಆ್ಯಪ್ ನಿಮಗೆ ಹೆಚ್ಚು ಸೂಕ್ತ.- ಮಕ್ಕಳಿಗೆ ಹಾಗೂ ದೊಡ್ಡವರಿಗೆ ಮಲಗುವ ಸಮಯದಲ್ಲಿ ಕತೆ ಹೇಳುತ್ತದೆ.- ಬಹಳ ಶಾಂತ, ಸಮಾಧಾನಕರ ದನಿಯಲ್ಲಿ ಕತೆ ಹೇಳಲಾಗುತ್ತದೆ.- ಧ್ಯಾನ, ರಿಲ್ಯಾಕ್ಸಿಂಗ್ ಮ್ಯೂಸಿಕ್, ಉಸಿರಾಟದ ಪಾಠಗಳು ಸೇರಿ ಹಲವು ಇತರೆ ಲಾಭಗಳನ್ನೂ ಇದೇ ಆ್ಯಪ್‌ನಿಂದ ಪಡೆಯಬಹುದು.6.ರುಂಟಾಸ್ಟಿಕ್ ಸ್ಲೀಪ್ ಬೆಟರ್ನಿಮ್ಮ ನಿದ್ದೆಯ ಬಗೆಗೆ ನಿಮಗೆ ಸ್ಪಷ್ಟತೆ ಕೊಡುವ ಆ್ಯಪ್ ಇದು.- ಫೋನನ್ನು ಫ್ಲೈಟ್ ಮೋಡ್‌ನಲ್ಲಿಟ್ಟಾಗಲೂ ನಿಮ್ಮ ನಿದ್ರಾ ವಿನ್ಯಾಸವನ್ನು ದಾಖಲಿಸಬಲ್ಲದು.- ನಿಮ್ಮ ಪ್ರತಿದಿನದ ಹವ್ಯಾಸಗಳನ್ನು ಇದರಲ್ಲಿ ದಾಖಲಿಸಬಹುದು. ಇದು ನಿಮ್ಮ ನಿದ್ದೆಗೆ ಯಾವುದು ಅಡಚಣೆ ತರುತ್ತಿದೆ ಎಂದು ತಿಳಿಸುತ್ತದೆ.- ಡ್ರೀಮ್ ಜರ್ನಲ್ ನಿರ್ವಹಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ನಿಮ್ಮ ಕನಸುಗಳ ಬಗ್ಗೆ ಅರ್ಥ ಮಾಡಿಕೊಂಡು ಅವು ನಿದ್ರೆಗೆ ಅಡ್ಡಿ ಉಂಟು ಮಾಡುತ್ತಿವೆಯೇ ಎಂದು ತಿಳಿಯಬಹುದು.