2.2 ಬಿಲಿಯನ್ ಫೇಸ್ಬುಕ್ ಖಾತೆ ಡಿಲೀಟ್! ನಿಯಮ ಮೀರಿದ್ರೆ ಇದೇ ಗತಿ! ಹೆಚ್ಚುತ್ತಿರುವ ನಕಲಿ ಖಾತೆಗಳ ಹಾವಳಿ; ನಕಲಿ ಖಾತೆ ರಚನೆಯ ಹಿಂದೆ ದುರುದ್ದೇಶ; ಅಂತಹ ಖಾತೆಗಳ ಗುರುತಿಸುವಿಕೆಗೆ ಆಧುನಿಕ ತಂತ್ರಜ್ಞಾನ ಜನಪ್ರಿಯ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಸುಮಾರು 2.2 ಬಿಲಿಯನ್ ಖಾತೆಗಳನ್ನು ಅಳಿಸಿ ಹಾಕಿದೆ. ಕಳೆದ ಆರು ತಿಂಗಳುಗಳಿಂದ ನಕಲಿ ಖಾತೆಗಳನ್ನು ಸೃಷ್ಟಿಸಿ, ನಿಂದಿಸುವ ಚಾಳಿ ಹೆಚ್ಚಾಗಿರುವ ಹಿನ್ನಲೆಯಲ್ಲಿ, ಈ ಕ್ರಮವನ್ನು ತೆಗೆದುಕೊಂಡಿದೆ. 2019ರ ಮೊದಲ ತ್ರೈಮಾಸಿಕ ಅವಧಿಯಲ್ಲಿ 2.2 ಬಿಲಿಯನ್ ಖಾತೆಗಳನ್ನು ತೆಗೆದುಹಾಕಿದೆ. ಅಕ್ಟೋಬರ್- ಡಿಸೆಂಬರ್ ತ್ರೈಮಾಸಿಕ ಅವಧಿಯಲ್ಲಿ ಸುಮಾರು 1.2 ಬಿಲಿಯನ್ ಖಾತೆಗಳನ್ನು ನಿಷ್ಕ್ರಿಯಗೊಳಿಸಿತ್ತು. ಕಳೆದ ವಾರ ಬಿಡುಗಡೆಯಾದ ಈ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಗಳನ್ನು ಉಲ್ಲಂಘಿಸುವ ಖಾತೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವನ್ನು ತೆಗೆದುಕೊಳ್ಳುತ್ತದೆ. ಇದನ್ನೂ ಓದಿ |ಟಾಪ್‌ 9 ಅಪಾಯಕಾರಿ ಸೋಶಿಯಲ್‌ ಆ್ಯಪ್‌ಗಳು! ವಿಶೇಷವಾಗಿ ಕೆಂಬ್ರಿಡ್ಜ್ ಅನಾಲಿಟಿಕಾ ವಿವಾದದ ಬಳಿಕ ನಕಲಿ ಖಾತೆ ಹಾಗೂ ನಿಯಮ ಉಲ್ಲಂಘನೆಯ ವಿರುದ್ಧ ಸಮರ ಸಾರಿದೆ. ಅಂದಾಜಿನ ಪ್ರಕಾರ ಒಟ್ಟು ಖಾತೆಗಳ ಪೈಕಿ 5 ಶೇ. ಖಾತೆಗಳು ನಕಲಿಯಾಗಿವೆ. ಇಂತಹ ಖಾತೆಗಳು ಸೃಷ್ಟಿಯಾದ ಕೆಲವೇ ನಿಮಿಷದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಗುರುತಿಸಲಾಗುತ್ತದೆ. ಬಳಿಕ ಅವುಗಳನ್ನು ಅಳಿಸಿಹಾಕಲಾಗುತ್ತದೆ.