Oneplusಗೆ ಸಡ್ಡು ಹೊಡೆಯಲು ರೆಡಿ! ತನ್ನ 2 ಹೊಸ ನಮೂನೆಯ ಫೋನ್ ಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ Redmiಯು ಪೈಪೋಟಿಗಿಳಿದಿದೆ. ಹೊಸ ಫೋನ್ ಬಗ್ಗೆ ಸುಳಿವನ್ನು ಕೊಟ್ಟಿರುವುದು ಹೀಗೆ... 7 ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ 855 ಮೊಬೈಲ್‌ ಫ್ಲಾಟ್‌ಫಾರ್ಮ್ ಮತ್ತು 256GB ಸ್ಟೋರೇಜ್‌ನ ಫ್ಲಾಗ್‌ಶಿಪ್‌ ಫೋನ್‌ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಂತೆ, ಅದಕ್ಕೆ ಸಡ್ಡು ಹೊಡೆಯಲು ಸಜ್ಜಾಗಿದೆ. ಅಷ್ಟೇ ಅಲ್ಲ, ಅದನ್ನು ಉತ್ತರ ರೂಪದಲ್ಲಿ ಹೇಳಿಕೊಂಡಿದೆ. ಅಭಿನಂದನೆ , ನಿಮ್ಮ ಹೊಸ ಫ್ಲಾಗ್‌ಶಿಪ್‌ ಬಗ್ಗೆ ಕೇಳಿದೆವು. ಫ್ಲಾಗ್‌ಶಿಪ್‌ ಕಿಲ್ಲರ್‌ 2.0 ಸದ್ಯದಲ್ಲೇ ಬರಲಿದೆ ಎಂದು ಅದು ಉತ್ತರಿಸುವ ಮೂಲಕ K20 ಫೋನ್‌ ಭಾರತಕ್ಕೆ ಬರಲಿದೆ ಎಂಬ ಸೂಚನೆಯನ್ನೂ ಅದು ನೀಡಿದೆ. ಇದನ್ನೂ ಓದಿ |ಅಗ್ಗದ 7 ಫೋನ್ ಬಿಡುಗಡೆ; ಇಲ್ಲಿದೆ ವಿಶೇಷತೆ & ಬೆಲೆ| ತನ್ನ ಟ್ರೋಲ್‌ನಲ್ಲಿ ಮತ್ತು 2.0 ಅಕ್ಷರಗಳನ್ನು ಕೆಂಪಕ್ಷರದಲ್ಲಿ ಮುದ್ರಿಸುವ ಮೂಲಕ K20 ಫೋನ್‌ ಆಗಮನವನ್ನು ಹೇಳಿಕೊಂಡಿದೆ. ಇತ್ತೀಚೆಗೆ Xiaomiಯು Y3 ಮೊಬೈಲನ್ನು ಬಿಡುಗಡೆ ಮಾಡಿತ್ತು. ಈ ಫೋನಿನ 3GB ವೇರಿಯಂಟ್ ಫೋನಿನ ಬೆಲೆ ₹9999 ಹಾಗೂ 4GB ವೇರಿಯಂಟ್ ಫೋನಿನ ಬೆಲೆ ₹11999 ಆಗಿದೆ. ಕೆಂಪು, ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿರುವ ಈ ಫೋನ್, ಮೊದಲ ಅಮೇಜಾನ್ ಮಾರಾಟದಲ್ಲಿ ಬರೇ 12 ಸೆಕೆಂಡ್‌ಗಳಲ್ಲಿ ಸಂಪೂರ್ಣ ಸ್ಟಾಕ್ ಸೋಲ್ಡ್ ಔಟ್ ಆಗಿ ಸುದ್ದಿ ಮಾಡಿತ್ತು. (ಸಾಂದರ್ಭಿಕ ಚಿತ್ರ)