48 ಮೆಗಾಪಿಕ್ಸೆಲ್ 7S ಭಾರತಕ್ಕೆ ಎಂಟ್ರಿ ದಿನಾಂಕ ಫಿಕ್ಸ್! ಭಾರತದ ಮಾರುಕಟ್ಟೆಗೆ ಹೆಚ್ಚೆಚ್ಚು ಮೆಗಾಪಿಕ್ಸಲ್ ಕ್ಯಾಮೆರಾವುಳ್ಳ ಸ್ಮಾರ್ಟ್‌ಫೋನನ್‌ ಎಂಟ್ರಿಯ ಸರಣಿ ಮುಂದುವರಿದಿದೆ. 48 ಮೆಗಾಪಿಕ್ಸೆಲ್ ಕ್ಯಾಮೆರಾ ಮೂಲಕ ಸದ್ದು ಮಾಡಿದ್ದ , ಈಗ ಮತ್ತೊಂದು ಫೋನ್ ಬಿಡುಗಡೆ ಮಾಡಲು ಸಿದ್ಧವಾಗಿದೆ. 48 ಮೆಗಾಪಿಕ್ಸೆಲ್ ಕ್ಯಾಮೆರಾ ಮೂಲಕ ಭಾರೀ ಸುದ್ದಿ ಮಾಡಿರುವ ಕಂಪನಿಯ 7S ಕೊನೆಗೂ ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದೆ. ಕಳೆದ ಫೆಬ್ರವರಿಯಲ್ಲಿ 48 ಮೆಗಾ ಪಿಕ್ಸೆಲ್ ಕ್ಯಾಮೆರಾವುಳ್ಳ 7 Proವನ್ನು ಬಿಡುಗಡೆ ಮಾಡಿತ್ತು. ಮೊತ್ತ ಮೊದಲಬಾರಿಗೆ ಇಷ್ಟೊಂದು ಮೆಗಾ ಪಿಕ್ಸೆಲ್ ಸಾಮರ್ಥ್ಯದ ಫೋನ್, ಮೊಬೈಲ್ ಮತ್ತು ಫೋಟೋ ಪ್ರಿಯರಲ್ಲಿ ಸಂಚಲನ ಹುಟ್ಟು ಹಾಕಿತ್ತು. ಇದನ್ನೂ ಓದಿ |ಕೊನೆಗೂ 48 ಮೆಗಾಪಿಕ್ಸೆಲ್ ಕ್ಯಾಮೆರಾದ 7 ಬಿಡುಗಡೆ; ಹೆಂಗೈತೆ? ಎಷ್ಟು ರೊಕ್ಕಾ ? 7S ಸ್ಮಾರ್ಟ್‌ಫೋನ್ 7 ರೀತಿಯಲ್ಲಿ ಡ್ಯುಯಲ್ ಕ್ಯಾಮೆರಾ ಹೊಂದಿದೆಯೆನ್ನಲಾಗುತ್ತಿದೆ. 7S ಬಗ್ಗೆ ಹೆಚ್ಚಿನ ಗುಟ್ಟನ್ನು ಕಂಪನಿಯು ಇನ್ನೂ ಬಿಟ್ಟುಕೊಟ್ಟಿಲ್ಲ. ಮುಖ್ಯಸ್ಥ ಮನು ಕುಮಾರ್ ಜೈನ್ ಹೊಸ ಫೋನ್ ಬಿಡುಗಡೆ ದಿನಾಂಕವನ್ನು ಟ್ವೀಟ್ ಮಾಡಿದ್ದು, ಮೇ 20ರಂದು 7S ಮಾರುಕಟ್ಟೆಗೆ ಪದಾರ್ಪಣೆ ಮಾಡಲಿದೆ. ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.