ಮೊಬೈಲ್ ಪ್ರಿಯರಿಗೆ ಸಿಹಿಸುದ್ದಿ, ಮಾರುಕಟ್ಟೆಗೆ ಬಂತು A70; ಬೆಲೆ, ಹೇಗಿದೆ? Samsungನ ಬಹುನಿರೀಕ್ಷಿತ A70 ಭಾರತೀಯ ಮೊಬೈಲ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಏನೇನಿದೆ ಈ ಫೋನ್‌ನಲ್ಲಿ? ಬೆಲೆ ಎಷ್ಟು? ಇಲ್ಲಿದೆ ವಿವರ... ಮೊಬೈಲ್ ಪ್ರಿಯರ ಬಹುನಿರೀಕ್ಷಿತ A70ಯು ಕೊನೆಗೂ ಮಾರುಕಟ್ಟೆಗೆ ಪದಾರ್ಪಣೆ ಮಾಡಿದೆ.. A70 ಹಾಗೂ A80 ಈ ತಿಂಗಳಿನ ಆರಂಭದಲ್ಲಿ ಬ್ಯಾಂಕಾಕ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದುವು. ಈಗ ಭಾರತದ ಮಾರುಕಟ್ಟೆಯಲ್ಲೂ A70 ಲಭ್ಯವಿದೆ. ಇದನ್ನೂ ಓದಿ:ಈಗ​ಲೂ ಲಕ್ಷಾಂತರ ಜನ​ರ ನೆಚ್ಚಿನ ರಹಸ್ಯ ಪಾಸ್‌​ವ​ರ್ಡ್‌ ಇದು! - ಪರದೆ ಹೊಂದಿರುವ A70 ಹಿಂಭಾಗದಲ್ಲಿ 3 ಕ್ಯಾಮೆರಾಗಳನ್ನು ಮತ್ತು 32 ಮೆಗಾ ಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಹೊಂದಿದೆ. ಫಿಂಗರ್ ಪ್ರಿಂಟ್ ಸೆನ್ಸರ್ ಹೊಂದಿರುವ ಈ ಫೋನ್ 6GB ಹಾಗೂ 128GB [ಇನ್ ಬಿಲ್ಟ್] ಸ್ಟೋರೆಜ್ ಸಾಮರ್ಥ್ಯ ಹೊಂದಿದೆ. ಮೈಕ್ರೋ ಕಾರ್ಡ್ ಮೂಲಕ ಇದನ್ನು 512 ವರೆಗೂ ವಿಸ್ತರಿಸಬಹುದು. ಡ್ಯುಯಲ್ ಸಿಮ್ ಕಾರ್ಡ್, , 6.7 (1080x2400 ) ಇಂಚಿನ ಪರದೆ, 20:9 ಆ್ಯಸ್ಪೆಕ್ಟ್ ಅನುಪಾತ, 675 ಪ್ರೊಸೆಸರ್, 6GB RAMನ್ನು ಹೊಂದಿದೆ. ಸೂಪರ್ ಫಾಸ್ಟ್ ಚಾರ್ಜಿಂಗ್ ಗೆ ಪೂರಕವಾದ 4500mAh ಬ್ಯಾಟರಿಯನ್ನು Samsungನ ಹೊಸ ಫೋನ್ ಹೊಂದಿದೆ. ಅಂದ ಹಾಗೇ ಇದರ ಬೆಲೆ ಎಷ್ಟೆಂಬುದು ತಿಳಿಯುವ ಕುತೂಹಲವೇ? ಈಗ ಮಾರುಕಟ್ಟೆಯಲ್ಲಿ A70 ಯ ಬೆಲೆ 28,990. A80 ಭಾರತದಲ್ಲಿ ಮೇ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಇದನ್ನೂ ಓದಿ: ಬೆನ್ನಲ್ಲೇ ಮತ್ತೊಂದು ಜನಪ್ರಿಯ ಆ್ಯಪ್ ಬ್ಯಾನ್?