ಕಾಂಗ್ರೆಸ್ ಆಯ್ತು ಈಗ ‘ನಮೋ ಆ್ಯಪ್​​’ ಪೇಜ್ ಗಳ ಮೇಲೆ ಸರ್ಜಿಕಲ್​ ಸ್ಟ್ರೈಕ್ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಫೇಸ್ ಬುಕ್, ಕಾಂಗ್ರೆಸ್​​​ ಖಾತೆಗಳ ಮೇಲೆ ಸರ್ಜಿಕಲ್​ ಸ್ಟ್ರೈಕ್ ನಡೆಸಿದ ಬೆನ್ನಲ್ಲೇ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ‘ನಮೋ ಆ್ಯಪ್​​’ಗೆ ಸಂಬಂಧಿಸಿದ ಪೇಜ್ ಗಳನ್ನ ಫಿನಿಶ್ ಮಾಡಿದೆ. ನವದೆಹಲಿ, [ಏ01]:ದೇಶದಲ್ಲಿ ಲೋಕಸಭೆ ಚುನಾವಣೆಯ ಬಿಸಿ ಜೋರಾಗಿದೆ. ಅದರಲ್ಲೂ ಫೇಸ್​ಬುಕ್​, ಟ್ವಿಟರ್​, ವಾಟ್ಸಾಪ್​​ನಲ್ಲಿ ಚುನಾವಣದ ಕಾವು ದಿನದಿಂದ ದಿನಕ್ಕೆ ರಂಗೇರಿದೆ. ಬಹುಮಖ್ಯವಾಗಿ ಸಾಮಾಜಿಕ ಜಾಲತಾಣಗಳ ಪ್ರಮುಖ ವೇದಿಕೆಯಾಗಿರುವ ಫೇಸ್​​ಬುಕ್​​ನಲ್ಲಿ ಪ್ರಚಾರದ ಅಬ್ಬರ, ಆರೋಪ, ಪ್ರತ್ಯಾರೋಪಗಳ ಭರಾಟೆ ಜೋರಾಗಿದೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ವಿರುದ್ಧ ಟೀಕಾಪ್ರಹಾರ ಮಾಡುವುದಕ್ಕೆ ಫೇಸ್​ಬುಕ್​ ಕೆಲವು ಖಾತೆಗಳ ಮೇಲೆ ಸರ್ಜಿಕಲ್​ ಸ್ಟ್ರೈಕ್​ ನಡೆಸಿದೆ. ಕಾಂಗ್ರೆಸ್’ನ 687 ಪೇಜ್ ಡಿಲೀಟ್ ಮಾಡಿದ ಫೇಸ್’ಬುಕ್! ಕಾಂಗ್ರೆಸ್’ನ ಐಟಿ ಸೆಲ್’ನೊಂದಿಗೆ ಗುರುತಿಸಿಕೊಂಡಿದ್ದ 687 ಪೇಜ್ ಹಾಗೂ ಖಾತೆಗಳನ್ನು ಫಿನಿಶ್ ಮಾಡಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ‘ನಮೋ ಆ್ಯಪ್​​’ಗೆ ಸಂಬಂಧಿಸಿದ ಒಟ್ಟು 15 ಫೇಸ್​ಬುಕ್​ ಪೇಜ್​​ಗಳಿಗೆ ಕತ್ತರಿ ಬಿದ್ದಿದೆ. : 15 , ’ ../rCwnA2Jpnu ಫೇಸ್​ಬುಕ್​ ಮೊದಲು ಪಾಕಿಸ್ತಾನ ಸೇನೆಗೆ ಸಂಬಂಧಿಸಿದ ಕೆಲ ಖಾತೆಗಳನ್ನೂ ರಿಮೂವ್ ಮಾಡಿತ್ತು. ಇದೀಗ ನಮೋ ಆ್ಯಪ್​ ಮೇಲೆ ಕಣ್ಣಿಟ್ಟಿರುವ ಫೇಸ್​ಬುಕ್​​, ಸಿಲ್ವರ್​ ಐಟಿ ಸಂಸ್ಥೆಗೆ ಸಂಬಂಧಿಸಿದ 15 ಫೇಸ್​ಬುಕ್​ ಪೇಜ್​ಗಳನ್ನ ಡಿಲೀಟ್ ಮಾಡಿದೆ.