ಅತಿ ಹೆಚ್ಚು ರೇಡಿಯೇಷನ್ ಹೊಂದಿರುವ ಫೋನ್ ಲಿಸ್ಟ್ ಔಟ್: ನಿಮ್ಮದು ಯಾವುದು? ಜರ್ಮನ್ ಸಂಸ್ಥೆಯೊಂದು ಅಪಾಯಕಾರಿ ರೇಡಿಯೇಷನ್ ಬಿಡುಗಡೆಗೊಳಿಸುವ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಬಹಿರಂಗಗೊಳಿಸಿದ್ದು, ಇದು ಬಹುತೇಕ ಬಳಕೆದಾರರನ್ನು ಆತಂಕಕ್ಕೀಡು ಮಾಡಿದೆ. ಹೌದು ಈ ಪಟ್ಟಿಯಲ್ಲಿ ಇತ್ತೀಚೆಗೆ ಅತಿ ಹೆಚ್ಚು ಮಾರಾಟವಾಗುವ ಫೋನ್‌ಗಳ ಹೆಸರು ಇರುವುದು ಈ ಆತಂಕವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಇಂದಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಅತ್ಯವಶ್ಯಕ ವಸ್ತುಗಳಲ್ಲಿ ಒಂದಾಗಿದೆ. ಇದರ ಸಹಾಯದಿಂದ ನಮ್ಮ ಹಲವಾರು ಕೆಲಸಗಳು ಸುಲಭವಾಗಿ ನಡೆಯುತ್ತವೆ. ಇನ್ನು ಪೋನ್ ಹಳೆಯದಾಯ್ತು ಎಂದು ಹೊಸ ಫೋನ್ ಖರೀದಿಸುವಾಗ ತಪ್ಪದೇ ಫೀಚರ್‌ಗಳನ್ನು ನೋಡುತ್ತೇವೆ. ಇದರಲ್ಲಿರುವ ಕ್ಯಾಮರಾ ಹೇಗಿದೆ? ಸೌಂಡ್ ಕ್ವಾಲಿಟಿ ಚೆನ್ನಗಿದೆಯಾ? ಇಂಟರ್ನೆಟ್ ಸ್ಪೀಡ್ ಎಷ್ಟಿದೆ? ಮೆಮೊರಿ ಎಷ್ಟು ನೀಡುತ್ತಾರೆ? ಇವೆಲ್ಲದರ ಮೇಲೆ ಹೆಚ್ಚಿನ ಗಮನ ನೀಡುತ್ತೇವೆ. ಆದರೀಗ ಇವೆಲ್ಲವನ್ನು ಹೊರತುಪಡಿಸಿ ಮತ್ತೊಂದು ವಿಚಾರವನ್ನೂ ಗಂಭೀರವಾಗಿ ಪರಿಗಣಿಸಬೇಕಿದೆ. ಸದ್ಯ ಪಟ್ಟಿಯೊಂದು ಬಿಡುಗಡೆಯಾಗಿದ್ದು, ಇದರಲ್ಲಿ ಯಾವ ಸ್ಮಾರ್ಟ್‌ಫೋನ್ ಅತಿ ಹೆಚ್ಚು ರೇಡಿಯೇಷನ್ ಬಿಡುಗಡೆ ಮಾಡುತ್ತದೆ ಎಂಬುವುದು ಬಹಿರಂಗಗೊಂಡಿದೆ. ಅಮೇಜಾನ್ ಮುಖ್ಯಸ್ಥನ ಫೋನ್ ಹ್ಯಾಕ್ ಮಾಡಿದ ಸೌದಿ ದೊರೆ ರೇಡಿಯೇಷನ್ ಎಂಬುವುದು ಸಾಮಾನ್ಯವಾಗಿ ಎಲ್ಲಾ ಸ್ಮಾರ್ಟ್‌ಫೋನ್ಗಳಲ್ಲಿ ಇರುತ್ತದೆ. ಆದರೀಗ ಜರ್ಮನ್ ಫೆಡರಲ್ ಆಫೀಸ್ ಆಫ್ ರೇಡಿಯೇಷನ್ ಪ್ರೊಟೆಕ್ಷನ್ ಸಂಸ್ಥೆಯು ಅತ್ಯಂತ ಹೆಚ್ಚು ರೇಡಿಯೇಷನ್ ಬಿಡುಗಡೆಗೊಳಿಸುವ ಸ್ಮಾರ್ಟ್‌ಫೋನ್ಗಳ ಪಟ್ಟಿ ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಕ್ಸಿಯೋಮಿ ಹಾಗೂ ವನ್ ಪ್ಲಸ್‌ನ ಸ್ಮಾರ್ಟ್‌ಫೋನ್ ಉಳಿದೆಲ್ಲ ಫೋನ್‌ಗಳಿಂಗಿಂತ ಮುಂಚೂಣಿಯಲ್ಲಿವೆ. ಒಟ್ಟು 16 ಫೋನ್‌ಗಳ ಪಟ್ಟಿ ಇಲ್ಲಿದೆ. 1. A12. 5T3. 34. 6T5. U12 Life6. 37. 3 XL8. 59. 710. XZ1 Compact11. 12/12+12. 313. 614. 815. Note16 7 ಈ 16 ಫೋನ್‌ಗಳು ಅತಿ ಹೆಚ್ಚು ಅಪಾಯಕಾರಿ ರೇಡಿಯೇಷನ್ ಬಿಡುಗಡೆಗೊಳಿಸುತ್ತದೆ. ಆದರೆ ಇತ್ತೀಚೆಗೆ ಈ ಸ್ಮಾರ್ಟ್‌ಫೋನ್‌ಗಳೇ ಅತಿ ಹೆಚ್ಚು ಮಾರಾಟವಾಗುತ್ತಿವೆ ಎಂಬುವುದು ಆತಂಕಕಾರಿ ವಿಚಾರವಾಗಿದೆ.ನೆಟ್ ಸುರಕ್ಷತೆ: ಈ ಐದು ಅಂಶಗಳನ್ನು ಮರೆಯದಿರಿ ಹಾಗಾದ್ರೆ ಕಡಿಮೆ ರೇಡಿಯೇಷನ್ ಇರುವ ಫೋನ್‌ಗಳು ಯಾವುವು? ಇಲ್ಲಿದೆ 16 ಸ್ಮಾರ್ಟ್‌ಫೋನ್‌ಗಳ ಲಿಸ್ಟ್. 1. 82. Elite3. G74. A85. S8+6. S7 Edge7. U11 Life8. Q6/Q6+9. S9+10. g5 plus11. Z12. J6+13. A61014. J4+15. S816. V9 ಹಾಗಾದ್ರೆ ನಿಮ್ಮ ಫೋನ್ ಯಾವುದು ಎಂದು ತಿಳಿದು ಅಪಾಯಕಾರಿ ರೇಡಿಯೇಷನ್‌ನಿಂದ ದೂರವಿರಿ.