‘ಗುರು’ವಿನ ಕೋಪ: ಭೀಕರ ಚಂಡಮಾರುತ ನೋಡಪ್ಪ! ಗುರು ಗ್ರಹದಲ್ಲಿ ಭೀಕರ ಚಂಡಮಾರುತ| ಗ್ರಹದ ದಕ್ಷಿಣ ಗೋಳಾರ್ಧದಲ್ಲಿ ಭೀಕರ ಚಂಡಮಾರುತ| ಭೀಕರ ಚಂಡಮಾರುತದ ಫೋಟೋ ಸೆರೆ ಹಿಡಿದ ನಾಸಾದ ಜುನೋ ನೌಕೆ| 5,000 ಮೈಲಿ ಪ್ರದೇಶವನ್ನು ಆವರಿಸಿರುವ ಚಂಡಮಾರುತ| ವಾಷಿಂಗ್ಟನ್(ಫೆ.03):ಗುರು ಗ್ರಹದ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಜುನೋ ನೌಕೆ, ಗ್ರಹದಲ್ಲಿ ಸಂಭವಿಸುವ ಭೀಕರ ಮತ್ತು ಬೃಹತ್ ಚಂಡಮಾರುತದ ಫೋಟೋವನ್ನು ಸೆರೆ ಹಿಡಿದಿದೆ. ಗುರು ಗ್ರಹದ ದಕ್ಷಿಣ ಗೋಳಾರ್ಧದಲ್ಲಿ ಈ ಬೃಹತ್ ಚಂಡಮಾರುತ ಸಂಭವಿಸಿದ್ದು, ಸುಮಾರು 5,000 ಮೈಲಿ ಪ್ರದೇಶವನ್ನು ಆವರಿಸಿದೆ ಎಂದು ನಾಸಾ ತಿಳಿಸಿದೆ. ’ ’ ? 🤔 ’ . @, 5,000 . 🌩️ :://./vxb4IGfyAUpic../ ಗುರು ಗ್ರಹದ ಕೆಂಪು ಕುಳಿ ಭಾಗದಲ್ಲಿ ನಿಯಮಿತವಾಗಿ ಚಂಡಮಾರುತಗಳು ಸಂಭವಿಸುತ್ತವೆ. ಅದರಂತೆ ಈ ಬಾರಿಯೂ ಚಂಡಮಾರುತ ಕಾಣಿಸಿಕೊಂಡಿದ್ದು, ಇದನ್ನು ಆನಿಮೇಶನ್ ರೂಪದಲ್ಲಿ ನಾಸಾ ಬಿಡುಗಡೆ ಮಾಡಿದೆ.