ಪ್ರಧಾನಿ ಮೋದಿ ವೆಬ್‌ಸೈಟೇ ಅಸುರಕ್ಷಿತ! ದೇಶದ ಪ್ರಧಾನಿ ಮೋದಿಯವರ ವೆಬ್‌ಸೈಟ್ ಸುರಕ್ಷಿತವಾಗಿಲ್ಲ. ಹೀಗಂತ ಫ್ರೆಂಚ್‌ನ ಹ್ಯಾಕರ್ ಒಬ್ಬರು ಎಚ್ಚರಿಸಿದ್ದಾರೆ. ನವದೆಹಲಿ[ಜ.16]:ಪ್ರಧಾನಿ ನರೇಂದ್ರ ಮೋದಿಯವರ ವೆಬ್‌ಸೈಟ್ .. ಸುರಕ್ಷಿತವ್ಲಲವಂತೆ. ಹೀಗಂತ ಯಾರೋ ಹೇಳಿದ್ದಲ್ಲ, ಫ್ರಾನ್ಸ್ ನ ಸೆಕ್ಯುರಿಟಿ ರಿಸರ್ಚರ್ ಹಾಗೂ ಎಥಿಕಲ್ ಹ್ಯಾಕರ್ ಇಲಿಯಟ್ ಆ್ಯಂಡರ್ಸನ್ ಎಂಬರು ಮಾಹಿತಿ ನೀಡಿದ್ದಾರೆ. ಟ್ವೀಟ್ ಮಾಡುವ ಮೂಲಕ ಅವರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ಸ್ಕ್ರೀನ್‌ಶಾಟ್ ಒಂದನ್ನು ಶೇರ್ ಮಾಡಿರುವ ಇಲಿಯಟ್ 'ಹಾಯ್ @, ನಿಮ್ಮ ವೆಬ್‌ಸೈಟಿನಲ್ಲಿ ಭದ್ರತೆಯ ಕೊರತೆಯೊಂದು ಕಂಡು ಬಂದಿದೆ. ಅಪರಿಚಿತ ಮೂಲದಿಂದ ನನ್ನ ಹೆಸರಿನಲ್ಲಿ ನಿಮ್ಮ ವೆಬ್ ಸೈಟಿಗೆ ಫೈಲ್ ಒಂದನ್ನು ಅಪ್ಲೋಡ್ ಮಾಡಲಾಗಿದೆ. ಅವರ ಬಳಿ ನಿಮ್ಮ ಡೇಟಾಬೇಸ್ ನ ಸಂಪೂರ್ಣ ಮಾಹಿತಿ ಇದೆ. ನೀವು ಸಾಧ್ಯವಾದಷ್ಟು ಬೇಗ ನನ್ನನ್ನು ಸಂಪರ್ಕಿಸಿ ನಿಮ್ಮ ವೆಬ್ ಸೈಟ್ ನ್ನು ಸುರಕ್ಷಿತಗೊಳಿಸಬೇಕು' ಎಂದಿದ್ದಾರೆ. @, . . . !,../ ಇದಾದ ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಇಲಿಯಟ್ ://. ತಂಡವು ನನ್ನನ್ನು ಸಂಪರ್ಕಿಸಿದೆ. ಹಾಗೂ ವೆಬ್ ಸೈಟಿನಲ್ಲಿ ಕಂಡು ಬಂದ ಭದ್ರತಾ ಲೋಪವನ್ನು ಪರಿಹರಿಸುವ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ. ಇದಕ್ಕೂ ಮುನ್ನ ಇಲಿಯಟ್ ಆ್ಯಂಡರ್ಸನ್ ಭಾರತೀಯರ ಆಧಾರ್ ಸಂಖ್ಯೆಯ ಗೌಪ್ಯತೆ ಹಾಗೂ ಅದರ ಡೇಟಾಬೇಸ್ ಸುರಕ್ಷಿತವಾಗಿಲ್ಲ ಎಂದು ತಿಳಿಸಿದ್ದರು.