ಬರೋಬ್ಬರಿ ₹101 ಪಾವತಿಸಿ, ಸ್ಮಾರ್ಟ್‌ಫೋನ್ ನಿಮ್ಮದಾಗಿಸಿಕೊಳ್ಳಿ ಮೊಬೈಲ್ ಖರೀದಿಸಬೇಕು... ಆದ್ರೆ ಕೈಯಲ್ಲಿ ದುಡ್ಡಿಲ್ಲ. ಏನ್ಮಾಡೋದು ಅಂತ ಚಿಂತೆಯೇ? ಹಾಗಾದ್ರೆ ವಿವೋ ಮೊಬೈಲ್ ಕಂಪನಿಯ ಈ ಯೋಜನೆಯಿಂದ ಪ್ರಯೋಜನ ಪಡೆಯಬಹುದು! ಬೆಂಗಳೂರು: ಹೌದು, ನೀವು ಸರಿಯಾಗಿಯೇ ಓದಿದ್ದೀರಿ. ಇಂಡಿಯಾ ಮೊಬೈಲ್ ಕಂಪನಿಯು ಕ್ರಿಸ್ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ‘ , ’ ಆಫರ್ ಗೆ ಚಾಲನೆ ನೀಡಿದೆ. ಡಿ. 20ಕ್ಕೆ ಆರಂಭವಾಗಿರುವ ಈ ಆಫರ್ ಜ.31ರವರೆಗೆ [41 ದಿನಗಳ] ಮುಂದುವರೆಯಲಿದೆ. ಈ ಸ್ಕೀಮ್ ಪ್ರಕಾರ ₹10,000 ಮೇಲ್ಪಟ್ಟ ಫೋನ್ ಖರೀದಿಸಿದರೆ, ಕೇವಲ ₹101 ಪಾವತಿಸಿದರೆ ಸಾಕು. ಬಳಿಕ 6 ತಿಂಗಳುಗಳ ಕಂತುಗಲ್ಲಿ ಉಳಿದ ಮೊತ್ತವನ್ನು ಪಾವತಿಸಬೇಕು. ಬಜಾಜ್ ಫೈನಾನ್ಸ್ ಮೂಲಕ ಉಳಿದ ಮೊತ್ತವನ್ನು ಸಮಾನ ಕಂತುಗಳಲ್ಲಿ ಪಾವತಿಸುವ ಸೌಲಭ್ಯವಿದೆ. ಇದನ್ನೂ ಓದಿ: 2018: ಈ ವರ್ಷದ ಅಗ್ಗದ 10 ಸ್ಮಾರ್ಟ್‌ಫೋನ್‌ಗಳು ದೇಶಾದ್ಯಂತ ಇರುವ 45000, ಮಾನ್ಯತೆ ಸ್ಟೋರ್‌ಗಳಲ್ಲಿ ಈ ಯೋಜನೆ ಲಭ್ಯವಿದೆ. ಸ್ಟೋರ್‌ಗೆ ಭೇಟಿ ನೀಡುವಾಗ ದಾಖಲೆಗಳನ್ನು [ ಕಾರ್ಡ್, ವೋಟರ್ ಐಡಿ ಕಾರ್ಡ್, ಆಧಾರ್ ಕಾರ್ಡ್ ಇತ್ಯಾದಿ] ಕೊಂಡೊಯ್ಯಿರಿ. ಸ್ಟೋರ್‌ನಲ್ಲಿ ನಿಮಗೆ ಬೇಕಾದ ಪೋನನ್ನು ಆಯ್ದುಕೊಳ್ಳಿರಿ. ₹101 ಪಾವತಿಸಿ, ನಿಮ್ಮ ದಾಖಲೆಗಳನ್ನು ಸಲ್ಲಿಸಿ ಈ ಆಫರ್‌ನ ಸದುಪಯೋಗ ಪಡೆದುಕೊಳ್ಳಿ. ಇದನ್ನೂ ಓದಿ:OnePlusನ ಮೊದಲ 5G ಸ್ಮಾರ್ಟ್‌ಫೋನ್ ಫೋಟೋ ಲೀಕ್! ಹೀಗಿದೆ ' 7' ಭಾರತದ ಮೊಬೈಲ್ ಮಾರುಕಟ್ಟೆಗೆ 2014ರಲ್ಲಿ ಪದಾರ್ಪಣೆ ಮಾಡಿದ , ವಿಶಿಷ್ಟವಾದ ಕ್ಯಾಮೆರಾ ಮತ್ತು ಮ್ಯೂಸಿಕ್ ಫೀಚರ್‌ಗಳಿಗೆ ಪ್ರಸಿದ್ಧವಾಗಿದೆ. ಭಾರತದಲ್ಲೇ ಸಿದ್ಧವಾಗುವ ಈ ಫೋನ್ ದೇಶಾದ್ಯಂತ ಲಭ್ಯವಿದ್ದು, ಸುಮಾರು 550 ಸರ್ವಿಸ್ ಸೆಂಟರ್‌ಗಳನ್ನು ಹೊಂದಿದೆ.