2018: ಈ ವರ್ಷದ ಅಗ್ಗದ 10 ಸ್ಮಾರ್ಟ್‌ಫೋನ್‌ಗಳು 2018ರಲ್ಲಿ ಚೀನಾದಲ್ಲಿ ಸ್ಮಾರ್ಟ್‌ಫೋನ್ ಮಾರಾಟ ಪ್ರಮಾಣ ಇಳಿಕೆಯಾಗಿದ್ದರೆ, ಅಮೆರಿಕಾ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ಆದರೆ ಭಾರತದಲ್ಲಿ 2017ರಲ್ಲಿ 134 ಮಿಲಿಯನ್ ಯೂನಿಟ್ಸ್ ಸ್ಮಾರ್ಟ್‌ಫೋನ್ ಮಾರಾಟವಾಗಿದ್ದರೆ, ಆ ಸಂಖ್ಯೆ 2018ರಲ್ಲಿ 150 ಮಿಲಿಯನ್‌ಗೇರಿದೆ. ಮುಂದಿನ ವರ್ಷವೂ ಅದರಲ್ಲಿ 12% ಏರಿಕೆಯಾಗಿ 160 ಮಿಲಿಯನ್‌ಗೆ ತಲುಪಬಹುದೆಂದು ಮಾರುಕಟ್ಟೆ ಅಧ್ಯಯನಗಳು ಅಂದಾಜಿಸಿವೆ. ಮೊಬೈಲ್ ಕಂಪನಿಗಳಿಗೆ ಭಾರತ ಪ್ರಮುಖ ಮಾರುಕಟ್ಟೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಸುಮಾರು 50 ಕೋಟಿ ಮಂದಿ ಇಂಟರ್ನೆಟ್ ಸಂಪರ್ಕದಲ್ಲಿದ್ದಾರೆ. ಹಾಗೂ, ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ 450 ಮಿಲಿಯನ್ ದಾಟಿದೆ. ಸಾಮಾನ್ಯ ಮೊಬೈಲ್ ಫೋನ್‌ನಿಂದ ಹಿಡಿದು ದುಬಾರಿ ಐ-ಫೋನ್‌ಗಳವರೆಗೂ ಭಾರತದಲ್ಲಿ ಭಾರೀ ಬೇಡಿಕೆಯಿದೆ. ಈ ಹಿನ್ನೆಲೆಯಲ್ಲಿ ಡಜನ್ ಗಟ್ಟಲೇ ಮೊಬೈಲ್ ಫೋನ್ ತಯಾರಕರು ಒಂದರ ಹಿಂದೆ ಒಂದು ಹೊಸ ಮಾದರಿಯ ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತಾರೆ. ಮೊಬೈಲ್ ಯುಗ ಆರಂಭವಾದಾಗ ಮೊಮೈಲ್ ಖರೀದಿಸುವುದು ಸುಲಭವಾಗಿತ್ತು. ಬೆರಳಣಿಕೆಯಷ್ಟಿದ್ದ ಮಾದರಿಗಳಲ್ಲಿ ತಮಗೆ ಬೇಕಾದ ಮೊಬೈಲನ್ನು ಆಯ್ಕೆ ಮಾಡಬಹುದಿತ್ತು. ಆದರೆ ಮೊಬೈಲ್ ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ, ಮಾರುಕಟ್ಟೆ ವಿಸ್ತರಿಸಿದಂತೆ ಲೆಕ್ಕವಿಲ್ಲದಷ್ಟು ಮೊಬೈಲ್‌ಗಳು ಸ್ಟೋರ್‌ಗಳಿಗೆ ಹರಿದು ಬಂದಿವೆ. ಒಂದು ಮೊಬೖಲ್ ಖರೀದಿಸಬೇಕಾದರೆ ಸರಿಸುಮಾರು ಪಿಎಚ್‌ಡಿ ಸಂಶೋಧನೆ ನಡೆಸುವ ಅನುಭವ. ತಯಾರಕ ಕಂಪನಿ, ವಿನ್ಯಾಸ, ಹಾರ್ಡ್‌ವೇರ್, ಸಾಫ್ಟ್‌ವೇರ್, ಮತ್ತು ಬೆಲೆ.... ಹೀಗೆ ಖರೀದಿಯ ಮಾನದಂಡ ಬದಲಾಗುತ್ತದೆ. ಇದನ್ನೂ ಓದಿ:ವರ್ಷದಲ್ಲಿ ಕೈ ಸೇರಿದ ಬಜೆಟ್‌ಗೆ ತಕ್ಕ 5 ಗ್ಯಾಜೆಟ್‌ಗಳು 2018 ವರ್ಷದಲ್ಲಿ ಭಾರತದ ಮಾರುಕಟ್ಟೆಗೆ ನೂರಾರು ಮೊಬೈಲ್‌ಗಳು ಕಾಲಿಟ್ಟಿವೆ. ಅವುಗಳ ಪೈಕಿ ಕೈಗೆಟಕುವ ದರದ ಮೊಬೈಲ್‌ಗಳಾವು? ಇಲ್ಲಿದೆ ಪಟ್ಟಿ... 5 M1 A1 6 2018 ಇದನ್ನೂ ಓದಿ:ವಿಶ್ವದ ಮೊದಲ 5G ಪೋನ್‌ನ ಡೆಮೋ ಕೊಟ್ಟ ! ಹೇಗಿದೆ ನೋಡಿ... 1 P20 G6 5 Y2 9