ಸಂಚಲನ ಹುಟ್ಟಿಸಿದೆ 6 ; ಹೇಗಿದೆ? ಏನಿದೆ? ಇಲ್ಲಿದೆ ಫುಲ್ ಡೀಟೆಲ್ಸ್ ಕೈಗೆಟಕುವ ದರದಲ್ಲಿ ಉತ್ತಮ ಗುಣಮಟ್ಟದ ಮೊಬೈಲ್‌ಗಳನ್ನು ತಯಾರಿಸುವ ಹೆಗ್ಗಳಿಕೆ ಶ್ಯೋಮಿ ಕಂಪನಿಯದ್ದು. 3, 5 ಗಳಂತಹ ಸೂಪರ್‌ ಹಿಟ್ ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ನೀಡಿದ ಶ್ಯೋಮಿ ಈಗ 6 Proನ್ನು ಬಿಡುಗಡೆ ಮಾಡಿದೆ. ಹೇಗಿದೆ ಆ ಫೋನ್? ನೋಡೋಣ ಈ ಸ್ಟೋರಿಯಲ್ಲಿ... 2016 ರಲ್ಲಿ 3 ಮೊಬೈಲನ್ನು ಬಿಡುಗಡೆ ಮಾಡಿದ್ದೇ ತಡ, ಶ್ಯೋಮಿ ಬ್ರ್ಯಾಂಡ್ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಜನಪ್ರಿಯವಾಯಿತು. ವಿಶ್ವಾಸಾರ್ಹ ಹಾರ್ಡ್‌ವೇರ್, ಸೂಕ್ತ ಬೆಲೆ ಹಾಗೂ ಹೊಸ ಫೀಚರ್‌ಗಳಿಂದಾಗಿ ಶ್ಯೋಮಿ ಮೊಬೈಲ್ ಪ್ರಿಯರ ಮನಗೆದ್ದಿದೆ.. 20,000 ರೂ. ಗಿಂತ ಕಡಿಮೆ ಬೆಲೆಯ ಫೋನ್‌ಗಳ ಪೈಕಿ ಶ್ಯೋಮಿಯ 5 ಗೆ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಇದೀಗ ಬಿಡುಗಡೆಯಾಗಿರುವ 6 ಕೂಡಾ ಅಂತಹದ್ದೇ ನಿರೀಕ್ಷೆಗಳನ್ನು ಮೊಬೈಲ್ ಪ್ರಿಯರಲ್ಲಿ ಹುಟ್ಟುಹಾಕಿದೆ. ಇದನ್ನೂ ಓದಿ:5G, ಬರೋಬ್ಬರಿ 6 ಕ್ಯಾಮೆರಾ! ಮಾರುಕಟ್ಟೆಗೆ ಲಗ್ಗೆಯಿಡಲಿರುವ ಯಾವುದೀ ಮೊಬೈಲ್? ನ.22 ಬಿಡುಗಡೆಯಾಗಿರುವ 6 ಎರಡು ಆವೃತ್ತಿಗಳಲ್ಲಿ ಲಭ್ಯವಿದೆ. 4GB ಮತ್ತು 64GB ಸ್ಟೋರೆಜ್ ಸಾಮರ್ಥ್ಯವಿರುವ ಫೋನ್ ರೂ.13,999 ಗೆ ಲಭ್ಯವಿದ್ದರೆ, 6GB ಮತ್ತು 64GB ಸ್ಟೋರೆಜ್ ಇರುವ ಫೋನ್ 15,999ಕ್ಕೆ ಲಭ್ಯವಿದೆ. ಎಂದಿನಂತೆ 6 ಕೂಡಾ, ಫ್ಲಿಪ್‌ಕಾರ್ಟ್, . ಹಾಗೂ ಶ್ಯೋಮಿ ಸ್ಟೋರ್‌ಗಳಲ್ಲಿ ಲಭ್ಯವಿದ್ದು, ಕೆಂಪು, ನೀಲಿ, ಕಪ್ಪು ಮತ್ತು ರೋಸ್ ಗೋಲ್ಡ್ ಬಣ್ಣಗಳಲ್ಲಿ ಸಿಗುತ್ತದೆ. 6 ಬಹುತೇಕ 5 Proನಂತಿದ್ದು, ಕ್ಯಾಮೆರಾ ವಿಷಯದಲ್ಲಿ ಹೆಚ್ಚಿನ ಭಿನ್ನತೆಯಿದೆ. ಕ್ಯಾಮೆರಾಗಳೇ ಈ ಫೋನ್‌ ಬೆಲೆಗೆ ತಕ್ಕಂತಿದೆ. ವಿನ್ಯಾಸದಲ್ಲೂ ಈ ಎರಡು ಫೋನ್‌ಗಳು ಬಹಳಷ್ಟು ಸಾಮ್ಯತೆಗಳನ್ನು ಹೊಂದಿದೆ. ಈ ಎರಡೂ ಪೋನ್‌ಗಳನ್ನು ಜತೆಗಿಟ್ಟರೆ ಅವುಗಳಲ್ಲಿ 6 ಯಾವುದು 5 ಯಾವುದು ಎಂದು ಗುರುತಿಸುವುದು ಕಷ್ಟ. 6 ಫೀಚರ್ಸ್‌ಗಳು: 6 ನಲ್ಲಿ ಓಟ್ಟು ನಾಲ್ಕು ಕ್ಯಾಮೆರಗಳಿದ್ದು, ಎರಡು ಮುಂಭಾಗದಲ್ಲಿ, ಎರಡು ಹಿಂಭಾಗದಲ್ಲಿವೆ. 6.2 ಇಂಚು ಫುಲ್ ಎಚ್‌ಡಿ ನಾಟ್ಚ್‌ಡ್ ಡಿಸ್ಪ್ಲೇ ಹೊಂದಿದ್ದು, ಡ್ಯುಯೆಲ್ ವೋಲ್ಟ್ ತಂತ್ರಜ್ಞಾನ ಹೊಂದಿದೆ. 10 ಆಧಾರಿತ 8.1 ಸಾಫ್ಟ್‌ವೇರ್‌ನ್ನು ಈ ಫೋನ್ ಹೊಂದಿದೆ. 636 ಪ್ರೊಸೆಸರ್ ಹಾಗೂ 4000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಫಿಂಗರ್ ಪ್ರಿಂಟ್ ಅನ್‌ಲಾಕ್ ಸೌಲಭ್ಯ ಹೊಂದಿರುವ ಈ ಫೋನ್ ಫೇಸ್ ಅನ್‌ಲಾಕ್ ತಂತ್ರಜ್ಞಾನವನ್ನೂ ಹೊಂದಿದೆ. ಏನೇ ಹೇಳಿ, ಕ್ಯಾಮೆರಾದ ಗುಣಮಟ್ಟದ ಬಗ್ಗೆ ಬೇರೆ ಮಾತಿಲ್ಲ ಎಂದು ವಿಶ್ಲೇಷಕರ ಅಭಿಪ್ರಾಯ. ಹಿಂಭಾಗದಲ್ಲಿ 12MP + 5MP ಕ್ಯಾಮೆರಾಗಳಿದ್ದು, ಮಂದ ಬೆಳಕಿನಲ್ಲೂ ಸ್ಪಷ್ಟವಾದ ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯವಿದೆ. ಮುಂಭಾಗದ ಮುಖ್ಯ ಕ್ಯಾಮೆರಾ 20MP ಇದ್ದು, ಇನ್ನೊಂದು 2MP ಇದೆ.