ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ 6T; ಮುಗಿಬಿದ್ದ ಗ್ರಾಹಕರು ಮೊಬೈಲ್‌ ಪ್ರಿಯರಿಗೆ ಭಾರೀ ನಿರೀಕ್ಷೆ ಹುಟ್ಟಿಸಿರುವ 6T ಪಾಪ್‌ಅಪ್ ಈವೆಂಟ್, ಆನ್‌ಲೈನ್, ಆಫ್‌ಲೈನ್‌ಲ್ಲೂ ಲಭ್ಯ ಹೊಸ ಫೋನ್‌ನಲ್ಲೇನಿದೆ? ಏನಿಲ್ಲ? ಇಲ್ಲಿದೆ ಪುಲ್ ಡೀಟೆಲ್ಸ್... ಬೆಂಗಳೂರು(ನ.02):ಶುಕ್ರವಾರದಿಂದ ಭಾರತದ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ 6T ಮೊಬೈಲ್ ಮಾರಾಟ ಆರಂಭವಾಗಿದೆ. ಇನ್-ಡಿಸ್ಪ್‌ಲೇ ಫಿಂಗರ್‌ಪ್ರಿಂಟ್ ಫೀಚರ್ ಇರೋ ಈ ಸ್ಮಾರ್ಟ್‌ಫೋನ್‌ ಬಿಡುಗಡೆಗಾಗಿ ಮೊಬೈಲ್‌ಪ್ರಿಯರು ಕಾತರದಿಂದ ಕಾಯುತ್ತಿದ್ದರು. ಇದೀಗ ಬೆಂಗಳೂರು ಸೇರಿದಂತೆ ದೇಶದ 8 ನಗರಗಳಲ್ಲಿ ಈ ಫೋನ್ ಆಯೋಜಿಸಿರುವ ಪಾಪ್‌ಅಪ್ ಈವೆಂಟ್‌ಗಳಲ್ಲಿ ಲಭ್ಯವಿದ್ದು, ಮೊಬೈಲ್‌ ಪ್ರಿಯರು ಮುಗಿಬಿದ್ದಿದ್ದಾರೆ. ಪಾಪ್‌ಅಪ್ ಈವೆಂಟ್‌ಗಳಲ್ಲಿ ಗ್ರಾಹಕರು ಫೋನನ್ನು ಅಲ್ಲೇ ಪರೀಕ್ಷಿಸಿ ಕೊಂಡುಕೊಳ್ಳಬಹುದಾಗಿದೆ. ಎಲ್ಲಿ ಖರೀದಿಸಬಹುದು:ರಿಲಾಯನ್ಸ್ ಡಿಜಿಟಲ್, ಕ್ರೋಮಾ ಸ್ಟೋರ್‌ನಂತಹ ಆಫ್‌ಲೈನ್ ಮಳಿಗೆಗಳಲ್ಲೂ ಅಲ್ಲದೇ, ಈ ಫೋನ್ ಅಮೆಜಾನ್, ಒನ್‌ಪ್ಲಸ್‌ನಲ್ಲಿ ಆನ್‌ಲೈನ್‌ನಲ್ಲೂ ಖರೀದಿಸಬಹುದಾಗಿದೆ. ಬೆಲೆ: 6T ಮೂರು ನಮೂನೆಗಳಲ್ಲಿ ಲಭ್ಯವಿದ್ದು ಅವುಗಳ ಬೆಲೆ ಹೀಗಿದೆ:6GB+128GBಯ 6T ಫೋನ್‌ ಬೆಲೆ ₹37,9998GB+128GBಯ 6T ಫೋನ್ ಬೆಲೆ ₹41,9998GB+256GBಯ 6T ಫೋನ್ ಬೆಲೆ ₹45,999 ಹಿಂದಿನ ವಿನ್ಯಾಸಕ್ಕೆ ಹೋಲಿಸಿದಾಗ ಹೊಸ 6Tನಲ್ಲಿ ಗಮನಾರ್ಹ ಬದಲಾವಣೆಗಲಾಗಿವೆ. ಆಪಲ್, ಸ್ಯಾಮ್‌ಸಂಗ್‌ ನಂತಹ ಮೊಬೈಲ್ ದಿಗ್ಗಜರು ಹೆಡ್‌ಫೋನ್‌ ಜ್ಯಾಕ್‌ಗೆ ತಿಲಾಂಜಲಿಯಿಟ್ಟ ಬಳಿಕ, 6T ಯು ಕೂಡಾ ಈಗ ಅದೇ ಸಾಲಿಗೆ ಸೇರಿಕೊಂಡಿದೆ. ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ತಂತ್ರಜ್ಞಾನವನ್ನು ಹೊಂದಿರುವ 6Tಯು, ಅನ್‌ಲಾಕ್ ಮಾಡಲು ಅತೀ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಎಂದು ಕಂಪನಿಯು ಹೇಳಿದೆ. ಅನ್‌ಲಾಕ್ ಮಾಡಲು ಬರೋಬ್ಬರಿ 0.34 ಸೆಕಂಡ್‌ಗಳು ಸಾಕು! 6Tಯು 6.41 ಇಂಚಿನ ಆಪ್ಟಿಕ್ ತಂತ್ರಜ್ಞಾನಾಧರಿತ ಡಿಸ್ಪ್ಲೇ ಹಾಗೂ ಆಸ್ಪೆಕ್ಟ್ ರೇಶ್ಯೂ 19.5:9 ಹೊಂದಿದೆ. ಅತ್ಯಾಧುನಿಕ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 6 ನಿಂದ ಸ್ಕ್ರೀನ್‌ ತಯಾರಿಸಲ್ಪಟ್ಟಿದ್ದು, ಸುರಕ್ಷತೆಯನ್ನು ಖಾತ್ರಿಪಡಿಸಲಾಗಿದೆ. ಅಲ್ಲದೇ ಆಂಟಿ ಗ್ಲೇರ್ ಫೀಚರ್‌ನ್ನು ಕೂಡಾ ಒಳಗೊಂಡಿದೆ. ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್‌ 845 ಪ್ರೊಸೆಸರ್ ಹೊಂದಿರುವ 6T, 6GB ಮತ್ತು 8GB ಹಾಗೂ 128GB ಮತ್ತು 256GB ಇಂಟರ್ನಲ್ ಸ್ಟೋರೆಜ್‌ ನಮೂನೆಗಳಲ್ಲಿ ಲಭ್ಯವಿದೆ. ಭಾರತದಲ್ಲಿ 3 ಬಳಿಕ 9 ತಂತ್ರಾಶವನ್ನು ಬಳಸಿದ ಹೆಗ್ಗಳಿಕೆ 6Tದ್ದಾಗಿದೆ. 3,700 ಬ್ಯಾಟರಿ ಸಾಮರ್ಥ್ಯ ಹೊಂದಿರುವ 6T, ಹಳೆಯ OnePlusಗೆ ಹೋಲಿಸಿದರೆ 20% ಹೆಚ್ಚು ಸಾಮರ್ಥ್ಯ ಹೊಂದಿದೆ. 6Tಯ ಕ್ಯಾಮೆರಾದಲ್ಲೂ ಅತ್ಯಾಧುನಿಕ ತಂತ್ರಜ್ಞಾನವನ್ನೇ ಬಳಸಲಾಗಿದೆ. ಮಂದ ಬೆಳಕು ಹಾಗೂ ಹೆಚ್ಚು ಸದ್ದಿರುವಲ್ಲೂ ಉತ್ಕರ್ಷ ಗುಣಮಟ್ಟದ ಫೋಟೋ ಹಾಗೂ ವಿಡಿಯೋ ತೆಗೆಯಲು ಸಹಕಾರಿಯಾಗುವಂತೆ ಕ್ಯಾಮೆರಾವನ್ನು ವಿನ್ಯಾಸಗೊಳಿಸಲಾಗಿದೆ.