ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S4: ಹೇಳಲು ಟ್ಯಾಬ್, ಆದ್ರೆ ಕಂಪ್ಯೂಟರ್‌ಗಿಂತ ಕಮ್ಮಿಯಿಲ್ಲ! ಸ್ಯಾಮ್‌ಸಂಗ್ ಕಂಪನಿಯು ಗ್ಯಾಲಕ್ಸಿ ಟ್ಯಾಬ್ ಎಸ್‌4 ಎಂಬ ಹೊಸ ಟ್ಯಾಬ್ ಬಿಡುಗಡೆ ಮಾಡಿದೆ. ಇದು ಆಫೀಸ್‌ಗೆ ಹೋಗುವವರಿಗೆ ಮತ್ತಷ್ಟು ಸುಲಭ ಹಾಗೂ ಬಹಳ ಉಪಯುಕ್ತವಾಗಲಿದೆ. ಸ್ಯಾಮ್‌ಸಂಗ್ ಕಂಪನಿಯು ಬಿಡುಗಡೆ ಮಾಡಿರುವ ಗ್ಯಾಲಕ್ಸಿ ಟ್ಯಾಬ್ ಎಸ್‌4 ಮೂಲಕ ಮನೆಯಿಂದ ಕಚೇರಿಗೆ ಹೋಗುವಾಗಲೂ ಕೆಲಸ ಮಾಡಬಹುದು. ಗ್ಯಾಲೆಕ್ಸಿ ಎಸ್‌4 ಟ್ಯಾಬ್ ನೋಡಲು ಕಂಪ್ಯೂಟರ್ ರೀತಿಯೇ ಇದ್ದು, ಎರಡು ರೀತಿಯ ಕೀಬೋರ್ಡ್ ವ್ಯವಸ್ಥೆ ಇದರಲ್ಲಿದೆ. ಟ್ಯಾಬ್‌ನಲ್ಲಿ ಕೀಬೋರ್ಡ್ ಬೇಡದವರು ಎಚ್ ಡಿಎಂಐ ಅಡಾಪ್ಟರ್ ಮೂಲಕ ಬಳಸಬಹುದು. ಹಲವಾರು ರೀತಿಯ ಆ್ಯಪ್‌ಗಳನ್ನು ನೀವು ಫುಲ್ ಸ್ಕ್ರೀನ್‌ನಲ್ಲೇ ನೋಡಬಹುದಾಗಿದೆ. ಇದು ಬಹಳ ಹಗುರವಾಗಿದ್ದು, ಎಲ್ಲಿ ಬೇಕಾದರೂ ನಿಮ್ಮೊಡನೆ ಕೊಂಡೊಯ್ಯಬಹುದು. ಜೊತೆಗೆ ಕಂಪ್ಯೂಟರ್‌ನ ಡೆಸ್ಕ್‌ಟಾಪ್‌ನಲ್ಲಿ ಕೆಲಸ ಮಾಡಿದಂತೆ ಅನುಭವವಾಗುತ್ತದೆ.