Mix3:ವಿಶ್ವದ ಮೊದಲ 5G,10GB ಮೊಬೈಲ್ ಬಿಡುಗಡೆ! ಕ್ಸಿಯೋಮಿ ಮಿ ಮಿಕ್ಸ್3 ಫೋನ್ ಬಿಡುಗಡೆಗೆ ಕ್ಸಿಯೋಮಿ ಸಜ್ಜಾಗಿದೆ. ವಿಶ್ವದ ಮೊದಲ 5 ಜಿ ಸ್ಪೀಡ್ ಹಾಗೂ 10 ಜಿಬಿ ಮೊಬೈಲ್ ಬಿಡುಗಡೆ ಮಾಡುತ್ತಿದೆ. ಈ ಫೋನ್ ಇತರ ಮಾಹಿತಿ ಇಲ್ಲಿದೆ. ಬೀಜಿಂಗ್(ಅ.17):ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನ ಆಕ್ರಮಿಸಿಕೊಂಡಿರುವ ಕ್ಸಿಯೋಮಿ ಇದೀಗ ಅತ್ಯಾಧುನಿಕ್ ತಂತ್ರಜ್ಞಾನ ಹಾಗೂ ಗರಿಷ್ಠ ಹೊಂದಿರುವ ಫೋನ್ ಬಿಡುಗಡೆ ಮಾಡಲಿದೆ. ಸದ್ಯ ಎಲ್ಲಾ ಫೋನ್‌ಗಳು 4ಜಿ ಸಪೋರ್ಟೆಡ್. ಆದರೆ ಕ್ಸಿಯೋಮಿ ಬಿಡುಗಡೆ ಮಾಡಲಿರುವ ನೂತನ Mix3 ಫೋನ್, ವಿಶ್ವದ ಮೊದಲ 5G ಸ್ಪೀಡ್ ಹಾಗೂ 10GB ಮೊಬೈಲ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಕ್ಟೋಬರ್ 25 ರಂದು ಚೀನಾದ ಬೀಜಿಂಗ್‌ನಲ್ಲಿ Mix3 ಫೋನ್ ಬಿಡುಗಡೆಯಾಗಲಿದೆ. ಅಷ್ಟೇ ವೇಗದಲ್ಲಿ ಈ ನೂತನ ಫೋನ್ ಭಾರತಕ್ಕೂ ಪ್ರವೇಶಿಲಿದೆ. ಸದ್ಯ 8ಜಿಬಿ ಮೊಬೈಲ್‌ಗಳು ಮಾರುಕಟ್ಟೆಯಲ್ಲಿದೆ. ಆದರೆ ಇದೀಗ 10 ಜಿಬಿ ಪರಿಚಯಿಸಲಾಗುತ್ತಿದೆ. ಜೊತೆಗೆ ಸ್ನಾಪ್‌ಡ್ರಾಗನ್ 845 ಚಿಪ್ ಹಾಗೂ 5ಜಿ ಸ್ಪೀಡ್ ಮೊಬೈಲ್ ಹೊಸ ಕ್ರಾಂತಿ ಮಾಡಲಿದೆ ಅನ್ನೋದು ಕ್ಸಿಯೋಮಿ ವಿಶ್ವಾಸ. ಆದರೆ ಇದರ ಬೆಲೆ ಹಾಗೂ ಇತರ ಮಾಹಿತಿಯನ್ನ ಕಂಪನಿ ಬಹಿರಂಗ ಪಡಿಸಿಲ್ಲ.