ಇಂಟರ್‌ನೆಟ್ ಶಟ್‌ಡೌನ್: ನೀವೇನು ಮಾಡ್ಬೇಕು? ಮುಂದಿನ 48 ಗಂಟೆಗಳ ಕಾಲ ಇಂಟರ್‌ನೆಟ್ ಸೇವೆ ಅಲಭ್ಯವಾಗಲಿದೆ. ಇಂಟರ್‌ನೆಟ್ ಸೇವೆಯಿಂದ ನಿಮ್ಮ ದಿನ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಅಡಚಣೆಯಾಗಲಿದೆ. ಈ ಸಮಸ್ಯೆಯಿಂದ ಪಾರಾಗಲು ನಿವೇನು ಮಾಡ್ಬೇಕು? ಇಲ್ಲಿದೆ. ಬೆಂಗಳೂರು(ಅ.12):ಇಂಟರ್‌ನೆಟ್ ಇಲ್ಲದೇ ಬದುಕಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಬ್ಯಾಂಕ್ ವ್ಯವಹಾರ, ಬಿಲ್ ಪಾವತಿ, ಟಿಕೆಟ್ ಬುಕ್ಕಿಂಗ್, ಟಾಕ್ಸಿ ಬುಕ್ಕಿಂಗ್, ವ್ಯಾಟ್ಸಾಪ್, ಫೇಸ್‌ಬುಕ್.. ಹೀಗೆ ನಮ್ಮ ದಿನ ನಿತ್ಯದ ಬಳಕೆ ಒಂದಾ-ಎರಡಾ? ಇದೀಗ ಇದೇ ಇಂಟರ್‌ನೆಟ್ 48 ಗಂಟೆ ಕಾಲ ಇರಲ್ಲ ಅಂದ್ರೆ ದಿಕ್ಕೇ ತೋಚದಂತಾಗುವುದು ನಿಜ. ಹಾಗಂತ ಆಕಾಶ ಕಳಚಿ ಬಿದ್ದವರ ಹಾಗೇ ಇರಬೇಕಿಲ್ಲ. ನೆಟ್ ಸೇವೆ ಅಲಭ್ಯತೆಯಿಂದ ಪಾರಾಗಲು ಹಲವು ಸೂತ್ರಗಳಿವೆ. ಈ ಅಂಶಗಳನ್ನ ಗಮನಿಸಿದರೆ, ಇಂಟರ್‌ನೆಟ್ ಸೇವೆ ಅಲಭ್ಯತೆ ನಿಮ್ಮನ್ನ ಹೆಚ್ಚಾಗಿ ಕಾಡುವುದಿಲ್ಲ. ಇದನ್ನೂ ಓದಿ: ನೆಟ್ ಬಳಕೆದಾರರಿಗೆ ಶಾಕ್- ಇನ್ನೆರಡು ದಿನ ಇರಲ್ಲ ಇಂಟರ್‌ನೆಟ್! ಮುಂದಿನ 48 ಗಂಟೆಗಳ ಕಾಲ ಜಾಗತಿಗವಾಗಿ ಇಂಟರ್‌ನೆಟ್ ಅಲಭ್ಯವಾಗಲಿದೆ. ಮೈಂಟೇನೆನ್ಸ್ ಕಾರಣದಿಂದ ಇನ್ನೆರಡು ದಿನ ಇಂಟರ್‌ನೆಟ್ ಸೇವೆ ಏರುಪೇರಾಗಲಿದೆ ಎಂದು ಕಮ್ಯೂನಿಕೇಶನ್ ರೆಗ್ಯೂಲೇಟರಿ ಅಥಾರಿಟಿ() ಹೇಳಿದೆ.