ಆಯತಾಕಾರದ ಐಸ್: ನೋಡಲು ತುಂಬಾ ನೈಸ್! ಅಂಟಾರ್ಟಿಕ್ ಧ್ರುವ ಪ್ರದೇಶದಲ್ಲೊಂದು ವಿಸ್ಮಯಕಾರಿ ಮಂಜುಗಡ್ಡೆ! ನಾಸಾ ವಿಜ್ಞಾನಿಗಳಿಗೆ ಸೆರೆ ಸಿಕ್ಕ ಆಯತಾಕಾರದಲ್ಲಿರುವ ಮಂಜುಗಡ್ಡೆ! ಬೃಹತ್ ಲಾರ್ಸೆನ್ ಸಿ ಮಂಜುಗಡ್ಡೆಯ ಒಡೆದ ಭಾಗ! ಸಮುದ್ರದಲ್ಲಿ ಏಕಾಂಗಿಯಾಗಿ ಸಂಚರಿಸುತ್ತಿರುವ ಆಯತಾಕಾರದ ಮಂಜುಗಡ್ಡೆ ವಾಷಿಂಗ್ಟನ್(ಅ.24):‘ಖುದರತ್ ಕಾ ಕರೀಷ್ಮಾ’..ಅಂತಾರಲ್ಲಾ ಇದೇ ಇರಬೇಕು ನೋಡಿ. ಸಂಪೂರ್ಣವಾಗಿ ಮಂಜುಗಡ್ಡೆಗಳಿಂದ ಆವೃತ್ತವಾಗಿರುವ ಅಂಟಾರ್ಟಿಕ್ ಧ್ರುವ ಪ್ರದೇಶದಲ್ಲಿ ಅದೆಷ್ಟೋ ಕುತೂಹಲಕಾರಿ ಸಂಗತಿಗಳು ದೊರೆಯುತ್ತವೆ. ಅದರಂತೆ ನಾಸಾದ ಸಂಶೋಧನಾ ವಿಮಾನವೊಂದಕ್ಕೆ ಅಂಟಾರ್ಟಿಕ್ ಧ್ರುವ ಪ್ರದೇಶದಲ್ಲಿ ಆಯತಾಕಾರದ ಮಂಜುಗಡ್ಡೆಯೊಂದು ಸೆರೆ ಸಿಕ್ಕಿದೆ. ಸಮುದ್ರದಲ್ಲಿ ಏಕಾಂಗಿಯಾಗಿ ತೇಲುತ್ತಿದ್ದ ಈ ಆಯತಾಕಾರದ ಮಂಜಗಡ್ಡೆಯನ್ನು ನಾಸಾ ವಿಜ್ಞಾನಿಗಳು ಸೆರೆ ಹಿಡಿದಿದ್ದಾರೆ. ಲಾರ್ಸೆನ್ ಎಂಬ ಬೃಹತ್ ಮಂಜುಗಡ್ಡೆಯಿಂದ ಒಡೆದು ಬೇರ್ಪಟ್ಟಿರುವ ಈ ಮಂಜುಗಡ್ಡೆಯ ಭಾಗ ನಿರ್ದಿಷ್ಟವಾಗಿ ಆಯತಾಕಾರದಲ್ಲಿರುವುದು ವಿಜ್ಞಾನಿಗಳ ಕುತೂಹಲಕ್ಕೆ ಕಾರಣವಾಗಿದೆ. , ’ , #’ , . @' -8 . :://./kADuUL455Fpic../tm4Rydh8V3 ಅಂಟಾರ್ಟಿಕ್ ಧ್ರುವ ಪ್ರದೇಶದಲ್ಲಿ ಹಲವು ಬೃಹತ್ ಮಂಜುಗಡ್ಡೆಗಳಿದ್ದು, ಅದರಲ್ಲಿ ಲಾರ್ಸೆನ್ 1995 ರಲ್ಲಿ, ಲಾರ್ಸೆನ್ 2002 ರಲ್ಲಿ ಒಡೆದು ಹೋಳಾಗಿವೆ. ಇದೀಗ ಲಾರ್ಸೆನ್ ಕೂಡ ಹೋಳಾಗುವ ಹಂತ ತಲುಪಿದ್ದು, ಅದರ ಒಂದು ಭಾಗವೇ ಈ ಆಯತಾಕಾರದ ಮಂಜುಗಡ್ಡೆ ಎನ್ನಲಾಗಿದೆ. ಲಾರ್ಸೆನ್ ಸಿ ಮಂಜುಗಡ್ಡೆ ಬರೋಬ್ಬರಿ 2,780 ಚ.ಕಿ.ಮೀ ವಿಸ್ತಾರವಾಗಿದ್ದು, ಮೇರಿಲ್ಯಾಂಡ್ ಗಿಂತ ದೊಡ್ಡದಾಗಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ ಈ ಮಂಜುಗಡ್ಡೆಯೂ ಕರಗುತ್ತಿದ್ದು, ಚೂರುಗಳ ರೂಪದಲ್ಲಿ ಒಡೆದು ಹೋಳಾಗುತ್ತಿದೆ ಎನ್ನಲಾಗಿದೆ.