ದೀಪಾವಳಿ ಹಬ್ಬಕ್ಕೆ ಹ್ಯುಂಡೈ-ಹೊಂಡಾ ಕಾರುಗಳಿಗೆ 1.5 ಲಕ್ಷ ಡಿಸ್ಕೌಂಟ್ ಆಫರ್! ದೀಪಾವಳಿ ಹಬ್ಬದ ಪ್ರಯುಕ್ತ ಇದೀಗ ಹ್ಯುಂಡೈ ಹಾಗೂ ಹೊಂಡಾ ಕಾರುಗಳಿಗೆ ಬರೋಬ್ಬರಿ 1.5 ಲಕ್ಷ ರೂಪಾಯಿ ಕ್ಯಾಶ್ ಡಿಸ್ಕೌಂಟ್ ಆಫರ್ ನೀಡಿದೆ. ಇಲ್ಲಿದೆ ಹ್ಯುಂಡೈ ಹಾಗೂ ಹೊಂಡಾ ಕಾರಿನ ಆಫರ್ ವಿವರ. ಬೆಂಗಳೂರು(ಅ.05):ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳಿಗಾಗಿ ಹ್ಯುಂಡೈ ಹಾಗೂ ಹೊಂಡಾ ಕಾರು ಭರ್ಜರಿ ಆಫರ್ ನೀಡಿದೆ. ಹ್ಯುಂಡೈ ಕಾರುಗಳಿಗೆ ಗರಿಷ್ಠ 90,000 ರೂಪಾಯಿ ರೂಪಾಯಿ ಕ್ಯಾಶ್ ಡಿಸ್ಕೌಂಟ್ ನೀಡಿದರೆ, ಹೊಂಡಾ ಬರೋಬ್ಬರಿ 1.5 ಲಕ್ಷ ರೂಪಾಯಿ ಕ್ಯಾಶ್ ಡಿಸ್ಕೌಂಟ್ ನೀಡಿದೆ. ಹ್ಯುಂಡೈ ಐ10 ಕಾರಿಗೆ ಗರಿಷ್ಠ ಡಿಸ್ಕೌಂಟ್ ನೀಡಿದೆ. ಕ್ಯಾಶ್ ಡಿಸ್ಕೌಂಟ್ 90,000 , 40,000 ಎಕ್ಸ್‌ಚೇಂಜ್ ಬೋನಸ್ ಹಾಗೂ 5,000 ರೂಪಾಯಿ ಹೆಚ್ಚುವರಿ ಡಿಸ್ಕೌಂಟ್ ಕೂಡ ನೀಡಿದೆ. ಈ ಮೂಲಕ ಐ10 ಕಾರಿಗೆ 1.35 ಲಕ್ಷ ಡಿಸ್ಕೌಂಟ್ ಆಫರ್ ನೀಡಿದೆ. ಹ್ಯುಂಡೈ ಕಾರಿನ ಡಿಸ್ಕೌಂಟ್ ಆಫರ್ ವಿವರ: ಹೊಂಡಾ ಕಾರು ಸಂಸ್ಥೆ ಕೂಡ ಆಫರ್ ಮೇಲೆ ಆಫರ್ ನೀಡಿದೆ. ಹೊಂಡಾ ಸಿಆರ್‌ವಿ ಕಾರಿಗೆ ಗರಿಷ್ಠ 1.5 ಲಕ್ಷ ರೂಪಾಯಿ ಕ್ಯಾಶ್ ಡಿಸ್ಕೌಂಟ್ ನೀಡಿದೆ. ಇನ್ನು ಹೊಂಡಾ ಬ್ರಿಯೋ ಕಾರಿಗೆ 19,000 ರೂಪಾಯಿ ಕ್ಯಾಶ್ ಡಿಸ್ಕೌಂಟ್ ನೀಡಿದೆ. ಇನ್ನುಳಿದ ಹೊಂಡಾ ಕಾರುಗಳಿಗೆ ಕ್ಯಾಶ್ ಡಿಸ್ಕೌಂಟ್ ಬದಲು ಎಕ್ಸ್‌ಚೇಂಜ್ ಬೋನಸ್ ನೀಡಿದೆ. ಹೊಂಡಾ ಕಾರಿನ ಡಿಸ್ಕೌಂಟ್ ಆಫರ್ ವಿವರ