10 ಲಕ್ಷಕ್ಕಿಂತ ಕಡಿಮೆ ಬೆಲೆ- ಇಲ್ಲಿದೆ ಹೊಂದಿರೋ 7 ಕಾರುಗಳು! ಕಾರು ಖರೀದಿಸುವರು ವಿನ್ಯಾಸ, ಬಣ್ಣ, ಇಂಜಿನ ಸಾಮರ್ಥ್ಯ ನೋಡಿದರೆ ಸಾಲದು. ಜೊತೆಗೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಬಿಎಸ್ ಬ್ರೇಕ್ ಜೊತೆಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ () ತಂತ್ರಜ್ಞಾನ ಅಷ್ಟೇ ಮುಖ್ಯ. ಈ ತಂತ್ರಜ್ಞಾನ ಹೊಂದಿರುವ 10 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರು ಕಾರುಗಳ ವಿವರ ಇಲ್ಲಿದೆ. ಬೆಂಗಳೂರು(ಅ.01):ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ತಂತ್ರಜ್ಞಾನ ಸುರಕ್ಷತಾ ದೃಷ್ಟಿಯಿಂದ ಅತೀ ಮುಖ್ಯ. ಭಾರತದಲ್ಲೀಗ ಕಾರಿನ ಸುರಕ್ಷತಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ನೂತನ ಕಾರುಗಳು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ () ತಂತ್ರಜ್ಞಾನ ಹೊಂದಿದೆ. ತಕ್ಷಣ ಬ್ರೇಕ್ ಹಾಕಿದಾಗ ಕಾರು ಸ್ಕಿಡ್ ಆಗದಂತೆ ಹಾಗೂ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ನೀಡುವ ತಂತ್ರಜ್ಞಾನ ಎಲ್ಲಾ ಕಾರುಗಳಲ್ಲಿ ಲಭ್ಯವಿಲ್. ಭಾರತದಲ್ಲಿರುವ 10 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ ತಂತ್ರಜ್ಞಾನದ ಕಾರುಗಳ ವಿವರ ಇಲ್ಲಿದೆ. ಮಾರುತಿ ಸುಜುಕಿ ಸಿಯಾಜ್ವೇರಿಯೆಂಟ್: 1.5 ಡೆಲ್ಟಾಬೆಲೆ: 9.8 ಲಕ್ಷ(ಎಕ್ಸ್ ಶೋ ರೂಂ) ಫೋರ್ಡ್ ಇಕೋ ಸ್ಪೋರ್ಟ್ವೇರಿಯೆಂಟ್: 1.5 ಟ್ರೆಂಡ್ +ಬೆಲೆ: 9.75 ಲಕ್ಷ(ಎಕ್ಸ್ ಶೋ ರೂಂ) ಫೋಕ್ಸ್‌ವ್ಯಾಗನ್ ಪೋಲೋವೇರಿಯೆಂಟ್: ಪೋಲೋ ಜಿಟಿಬೆಲೆ: 9.33 ಲಕ್ಷ(ಎಕ್ಸ್ ಶೋ ರೂಂ) ಫೋಕ್ಸ್‌ವ್ಯಾಗನ್ ಎಮೋವೇರಿಯೆಂಟ್: ಎಮೋ 1.5 ಟಿಡಿಐ ಕಂರ್ಫಟ್‌ಲೈನ್ ಪ್ಲಸ್ಬೆಲೆ: 9.21 ಲಕ್ಷ(ಎಕ್ಸ್ ಶೋ ರೂಂ) ಫೋರ್ಡ್ ಆಸ್ಪೈರ್ವೇರಿಯೆಂಟ್: ಆಸ್ಪೈರ್ 1.5 ಟೈಟಾನಿಯಂಬೆಲೆ: 8.78 ಲಕ್ಷ(ಎಕ್ಸ್ ಶೋ ರೂಂ) ಫೋರ್ಡ್ ಫಿಗೋವೇರಿಯೆಂಟ್: ಫಿಗೋ 1.5 ಟೈಟಾನಿಯಂಬೆಲೆ: 8.25 ಲಕ್ಷ(ಎಕ್ಸ್ ಶೋ ರೂಂ) ಫೋರ್ಡ್ ಫಿಗೋ ಫ್ರೀಸ್ಟೈಲ್ವೇರಿಯೆಂಟ್: ಫ್ರೀಸ್ಟೈಲ್ 1.2 ಟೈಟಾನಿಯಂಬೆಲೆ: 7.41 ಲಕ್ಷ(ಎಕ್ಸ್ ಶೋ ರೂಂ)