ಶೀಘ್ರದಲ್ಲೇ ಮಾರುತಿ ಸುಜುಕಿ ಸಣ್ಣ ಕಾರು ಬಿಡುಗಡೆ! ಮಾರುತಿ ಸುಜುಕಿ ಸಂಸ್ಥೆ ಇದೀಗ ಮೈಕ್ರೋ ಕಾರು ಬಿಡುಗಡೆಗೆ ಸಜ್ಜಾಗಿದೆ. ಕೇವಲ 5 ಲಕ್ಷ ರೂಪಾಯಿಯಿಂದ ಪ್ರಾರಂಭವಾಗಲಿರೋ ಈ ಕಾರು ಅತ್ಯಾಕರ್ಷಕ ಲುಕ್ ಹಾಗೂ ಬಲಿಷ್ಠ ಇಂಜಿನ್ ಹೊಂದಿದೆ. ಇಲ್ಲಿದೆ ಸಣ್ಣ ಕಾರಿನ ವಿಶೇಷತೆಗಳು. ಬೆಂಗಳೂರು(ಅ.01):ಭಾರತದ ಕಾರು ಮಾರುಕಟ್ಟೆಯನ್ನ ಆಕ್ರಮಿಸಿಕೊಂಡಿರುವ ಮಾರುತಿ ಸುಜುಕಿ ಇದೀಗ ನೂತನ ಕಾರು ಬಿಡುಗಡೆಗೆ ಸಜ್ಜಾಗಿದೆ. ಈ ಬಾರಿ ಸಣ್ಣ ಕಾರು ಬಿಡುಗಡೆ ಮಾಡಲು ರೆಡಿಯಾಗಿದೆ. ಈ ಮೂಲಕ ಮಹೀಂದ್ರ Kuv100 ಸೇರಿದಂತೆ ಇತರ ಸಣ್ಣ ಕಾರುಗಳಿಗೆ ಪೈಪೋಟಿ ನೀಡೋ ಲೆಕ್ಕಾಚಾರದಲ್ಲಿದೆ. ಮಾರುತಿ ಸುಜುಕಿ ಸಂಸ್ಥೆಯ ವಿಟಾರ ಬ್ರಿಜಾ ಕಾರು ಅತ್ಯಂತ ಜನಪ್ರಿಯ ಹಾಗೂ ಮಾರಾಟದಲ್ಲೂ ದಾಖಲೆ ಬರೆದ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾರಿನ ಯಶಸ್ಸಿನ ಬೆನ್ನಲ್ಲೇ ಮಾರುತಿ ಮುಂದಿನ ಪೀಳಿಗೆಯ ಕಾರು ಬಿಡುಗಡೆ ಮಾಡುತ್ತಿದೆ. 2018ರ ಆಟೋ ಎಕ್ಸ್‌ಪೋ ಮೇಳದಲ್ಲಿ ಮಾರುತಿ ಸುಜುಕಿ ಫ್ಯುಚರ್ ಎಸ್‌ಯುವಿ ಕಾರನ್ನ ಪ್ರದರ್ಶಿಸಿತ್ತು. ಇದೀಗ 2019ರ ಆರಂಭದಲ್ಲೇ ಈ ಮೈಕ್ರೋ ಕಾರು ಬಿಡುಗಡೆಯಾಗಲಿದೆ. ಮಾರುತಿ ಮೈಕ್ರೋ ಕಾರು ಇಗ್ನಿಸ್ ಕಾರಿನ ಗಾತ್ರದಲ್ಲಿರಲಿದೆ. ಆದರೆ ಕಾರಿನ ಇಂಜಿನ್ ಹಾಗೂ ಸಾಮರ್ಥ್ಯ ಹೊಂದಿರಲಿದೆ. ಜೊತೆಗೆ ಆಕರ್ಷಕ ವಿನ್ಯಾಸ ಹಾಗೂ ಅಗ್ರೆಸ್ಸೀವ್ ಲುಕ್ ಈ ಮೈಕ್ರೋ ಕಾರಿನ ವಿಶೇಷತೆ. 1.2 ಲೀಟರ್ ಪೆಟ್ರೋಲ್ ಇಂಜಿನ್ ಹೊಂದಿರುವ ಮೈಕ್ರೋ ಕಾರಿನ ಬೆಲೆ 5 ಲಕ್ಷದಿಂದ ಪ್ರಾರಂಭವಾಗಲಿದೆ.