ಟಾಟಾ ಮೋಟಾರ್ಸ್ &Dಗೆ ಖರ್ಚು ಮಾಡೋ ಹಣವೆಷ್ಟು? ವಿಶ್ವದಲ್ಲಿರೋ ಪ್ರತಿಷ್ಠಿತ ಕಂಪೆನಿಗಳು ಸಂಶೋಧನೆ ಹಾಗೂ ಅಭಿವೃದ್ಧಿ( &)ಗಾಗಿ ವಿಶೇಷ ತಂಡವನ್ನ ನೇಮಕ ಮಾಡಿಕೊಂಡಿರುತ್ತೆ. ಇದಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಮೀಸಲಿಡುತ್ತೆ. ಇದೀಗ & ಗಾಗಿ ಗರಿಷ್ಠ ಖರ್ಚು ಮಾಡೋ ಸಂಸ್ಥೆಗಳ ಪಟ್ಟಿ ಬಿಡುಗಡೆಯಾಗಿದೆ. ಇಲ್ಲಿದೆ ಲಿಸ್ಟ್. ನವದೆಹಲಿ(ಸೆ.26):ಸಂಶೋಧನೆ ಹಾಗೂ ಅಭಿವೃದ್ದಿಗಾಗಿ( &) ಪ್ರತಿ ಕಂಪೆನಿಗಳು ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತೆ. ಇದೀಗ ರಿಚರ್ಸ್ ಹಾಗೂ ಡೆವೆಲಪ್‌ಮೆಂಟ್‌ಗಾಗಿ ಗರಿಷ್ಠ ಖರ್ಚು ಮಾಡೋ ವಿಶ್ವದ 100 ಕಂಪೆನಿಗಳ ಹೆಸರು ಪ್ರಕಟಗೊಂಡಿದೆ. ಇದರಲ್ಲಿ ಭಾರತದ ಟಾಟಾ ಮೋಟಾರ್ಸ್ 13ನೇ ಸ್ಥಾನ ಪಡೆದಿದೆ. &Dಗೆ ಗರಿಷ್ಠ ಖರ್ಚು ಮಾಡೋ 100 ಕಂಪೆನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತದ ಕಂಪೆನಿ ಟಾಟಾ ಮೋಟಾರ್ಸ್. ಟಾಟಾ ಮೋಟಾರ್ಸ್ 2017-18ರ ಸಾಲಿನಲ್ಲಿ ರಿಚರ್ಸ್ ಹಾಗೂ ಡೆವೆಲಪ್‌ಮೆಂಟ್‌ಗಾಗಿ ಬರೋಬ್ಬರಿ 2397.5 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಟಾಟಾ ಮೋಟಾರ್ಸ್ ಜೊತೆಗಿನ ಒಪ್ಪಂದದ ಸಂಸ್ಥೆಗಳಾದ ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್‌ಗಳ ಒಟ್ಟು ಖರ್ಚು 19,444 ಕೋಟಿ ರೂಪಾಯಿ. ಇದು 2017-18ರ ಸಾಲಿನಲ್ಲಿ ಟಾಟಾ ಮೋಟಾರ್ಸ್ ರಿಚರ್ಸ್ ಹಾಗೂ ಡೆವೆಲಪ್‌ಮೆಂಟ್‌ಗಾಗಿ ಮಾಡಿದ ಒಟ್ಟು ಖರ್ಚುು. ಈ ಲಿಸ್ಟ್‌ನಲ್ಲಿ ಸ್ಥಾನ ಪಡೆದ ಭಾರತದ ಇತರ 9 ಕಂಪೆನಿಗಳು ಖರ್ಚು ಮಾಡೋ ಒಟ್ಟು ಮೊತ್ತಕ್ಕಿಂತ ಟಾಟಾ ಸಂಸ್ಥೆ ಖರ್ಚು ಮಾಡೋ ಮೊತ್ತ ಹೆಚ್ಚಿದೆ. ಭಾರತ ಮಹೀಂದ್ರ & ಮಹೀಂದ್ರ ಕಂಪೆನಿ 2017-18ರ ಸಾಲಿನಲ್ಲಿ ರಿಚರ್ಸ್ ಹಾಗೂ ಡೆವೆಲಪ್‌ಮೆಂಟ್‌ಗಾಗಿ 1999.1 ಕೋಟಿ ಖರ್ಚು ಮಾಡುತ್ತಿದೆ. ಈ ಮೂಲಕ ಮಹೀಂದ್ರ 114ನೇ ಸ್ಥಾನ ಪಡೆದಿದೆ. ಇನ್ನು ಮಾರುತಿ ಸುಜುಕಿ ಸಂಸ್ಥೆ 227ನೇ ಸ್ಥಾನ ಪಡೆದಿದೆ. ಮಾರುತಿ ಸುಜುಕಿ 831.6 ಕೋಟಿ ರೂಪಾಯಿ ಖರ್ಚು ಮಾಡಿದೆ.