ಕಡಿಮೆ ಬೆಲೆ, ಗರಿಷ್ಠ ಸುರಕ್ಷತೆ- ಭಾರತದಲ್ಲಿದೆ 5 ಸೇಫೆಸ್ಟ್ ಬೈಕ್ ! ಭಾರತದ ಬೈಕ್ ಮಾರುಕಟ್ಟೆಗೆ ಪ್ರತಿ ದಿನ ಹೊಸ ಹೊಸ ಬೈಕ್‌ಗಳು ಬಿಡುಗಡೆಯಾಗುತ್ತಿದೆ. ಇದರಲ್ಲಿ ಗರಿಷ್ಠ ಸುರಕ್ಷತೆಯ ಬೈಕ್‌ಗಳಿಗೆ ಹೆಚ್ಚಿನ ಬೆಲೆ ನೀಡಬೇಕಾಗುತ್ತೆ. ಆದರೆ ಕಡಿಮೆ ಬೆಲೆಗೆ ಗರಿಷ್ಠ ಸುರಕ್ಷತೆ ನೀಡೋ 5 ಬೈಕ್‌ಗಳ ಮಾಹಿತಿ ಇಲ್ಲಿದೆ. ಬೆಂಗಳೂರು(ಅ.02):ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಬಹುತೇಕ ಬೈಕ್‌ಗಳು ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್() ಹಾಗೂ ಕಂಬೈನಡ್ ಬ್ರೇಕಿಂಗ್ ಸಿಸ್ಟಮ್ ಸೌಲಭ್ಯ ಹೊಂದಿರುತ್ತೆ. ಈ ಮೂಲಕ ಬೈಕ್ ಸವಾರರಿಗೆ ಹೆಚ್ಚಿನ ಸುರಕ್ಷತೆಯನ್ನ ಒದಗಿಸುತ್ತದೆ. ನೂತನ ತಂತ್ರಜ್ಞಾನಗಳನ್ನ ಅಳವಡಿಸಿಕೊಂಡು ಹಲವು ಬೈಕ್‌ಗಳು ಭಾರತದಲ್ಲಿ ಬಿಡುಗಡೆಯಾಗಿದೆ. ಭಾರತದಲ್ಲಿ ಸೇಫೆಸ್ಟ್ ಬೈಕ್‌ಗಳು ಹಲವಿದೆ. ಆದರೆ 1 ಲಕ್ಷ ರೂಪಾಯಿ ಒಳಗೆ ಖರೀದಿಸಬಹುದಾದ ಸೇಫ್ ಬೈಕ್‌ಗಳ ವಿವರ ಇಲ್ಲಿದೆ. ಸುಜುಕಿ ಜಿಕ್ಸರ್ ಬೆಲೆ: 87,664 (ಎಕ್ಸ್ ಶೋ ರೂಂ, ದೆಹಲಿ)ಇಂಜಿನ್: 155ಸಿಸಿ ಸಿಂಗಲ್ ಸಿಲಿಂಡರ್ಎಬಿಎಸ್ ಸೌಲಭ್ಯ ಹೊಂದಿದೆ ಹೊಂಡಾ ಸಿಬಿ ಹಾರ್ನೆಟ್ 160R ಬೆಲೆ: 91,143 (ಎಕ್ಸ್ ಶೋ ರೂಂ, ದೆಹಲಿ)ಎಬಿಎಸ್ ಸೌಲಭ್ಯ ಹೊಂದಿದೆ ಟಿವಿಎಸ್ ರೆಡಿಯಾನ್ ಬೆಲೆ: 48,400 (ಎಕ್ಸ್ ಶೋ ರೂಂ, ದೆಹಲಿ)ಸಿಂಕ್ ಬ್ರೇಕಿಂಗ್ ಸಿಸ್ಟಮ್ಇಂಜಿನ್: 109.7 ಸಿಸಿ ಹೀರೋ ಎಕ್ಸ್ಟ್ರೀಮ್ 200R ಬೆಲೆ: 89,900 (ಎಕ್ಸ್ ಶೋ ರೂಂ, ದೆಹಲಿ)ಇಂಜಿನ್: 199.6 ಸಿಂಗಲ್ ಸಿಲಿಂಡರ್ಎಬಿಎಸ್ ಬ್ರೇಕ್ ತಂತ್ರಜ್ಞಾನ ಹೊಂದಿದೆ ಸುಜುಕಿ ಇಂಟ್ರುಡರ್ 150 ಬೆಲೆ: 99,995 (ಎಕ್ಸ್ ಶೋ ರೂಂ, ದೆಹಲಿ)ಇಂಜಿನ್: 155 ಸಿಸಿ