ಸ್ಟಾರ್ ಸ್ಪೋರ್ಟ್ಸ್ ಜೊತೆ ಜಿಯೋ ಟಿವಿ ಒಪ್ಪಂದ- ಇನ್ಮುಂದೆ ಪಂದ್ಯ ಫ್ರೀ ಐಪಿಎಲ್ ಟೂರ್ನಿ, ಟೀಂ ಇಂಡಿಯಾ ಕ್ರಿಕೆಟ್ ಪಂದ್ಯಗಳನ್ನ ಉಚಿತವಾಗಿ ನೇರಪ್ರಸಾರ ಮಾಡಲು ರಿಲಾಯನ್ಸ್ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಸ್ಟಾರ್ ಸ್ಪೋರ್ಟ್ ಜೊತೆ ಒಪ್ಪಂದ ಮಾಡಿಕೊಂಡಿರುವ ರಿಲಾಯನ್ಸ್ ಪಂದ್ಯಗಳನ್ನ ಫ್ರೀಯಾಗಿ ಪ್ರಸಾರ ಮಾಡಲಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ. ಮುಂಬೈ(ಸೆ.22):ಟೀಂ ಇಂಡಿಯಾ ಪಂದ್ಯಗಳನ್ನ ಇನ್ಮುಂದೆ ಫ್ರೀಯಾಗಿ ನೋಡಬಹುದು. ಕಾರಣ ಭಾರತದ ಪಂದ್ಯಗಳು ಜಿಯೋ ಟಿವಿಯಲ್ಲಿ ನೇರಪ್ರಸಾರವಾಗಲಿದೆ. ಮಹತ್ವದ ಬೆಳವಣಿಗೆಯಲ್ಲಿ ಏಷ್ಯಾಖಂಡದ ಅತೀ ದೊಡ್ಡ ಕ್ರೀಡಾ ವಾಹಿನಿ ಸ್ಟಾರ್ ಸ್ಪೋರ್ಟ್ಸ್ ಜೊತೆ ಜಿಯೋ ಟಿವಿ ಒಪ್ಪಂದ ಮಾಡಿಕೊಂಡಿದೆ. #| 5- . & : @@@../nB6PjRXgRk ಸ್ಟಾರ್ ಸ್ಪೋರ್ಟ್ಸ್ ಈಗಾಗಲೇ ಹಾಟ್ ಸ್ಟಾರ್ ಮೂಲಕ ಪಂದ್ಯಗಳನ್ನ ನೇರಪ್ರಸಾರ ಮಾಡುತ್ತಿದೆ. ಇನ್ಮುಂದೆ ಜಿಯೋ ಟಿವಿ ಕೂಡ ಕ್ರಿಕೆಟ್ ಪಂದ್ಯಗಳನ್ನ ನೇರಪ್ರಸಾರ ಮಾಡಲಿದೆ. ಮುಂದಿನ 5 ವರ್ಷಗಳ ಅವಧಿ ವರೆಗೆ ಸ್ಟಾರ್ ಸ್ಪೋರ್ಟ್ಸ್ ಜೊತೆ ರಿಲಾಯನ್ಸ್ ಇಂಡಸ್ಟ್ರಿ ಒಪ್ಪಂದ ಮಾಡಿಕೊಂಡಿದೆ. ಟೆಸ್ಟ್, ಏಕದಿನ, ಟಿ20 ಪಂದ್ಯಗಳ ಜೊತೆಗೆ ದೇಸಿ ಕ್ರಿಕೆಟ್ ಕೂಡ ಜಿಯೋ ಟಿವಿಯಲ್ಲಿ ನೇರಪ್ರಸಾರವಾಗಲಿದೆ. ವಿಶೇಷ ಅಂದರೆ ಐಪಿಎಲ್ ಕೂಡ ಜಿಯೋ ಟಿವಿಯಲ್ಲಿ ನೇರಪ್ರಸಾರವಾಗಲಿದೆ. ಇಷ್ಟೇ ಅಲ್ಲ ಎಲ್ಲವೂ ಉಚಿತವಾಗಿದೆ.