ಮೊದಲ ಬಾರಿಗೆ ಈ ವ್ಯವಸ್ಥೆ ಹೊಂದಿದ ಐ ಫೋನ್ ಬಿಡುಗಡೆ ಮೊದಲ ಬಾರಿಗೆ ಈ ಹೊಸ ವ್ಯವಸ್ಥೆ ಹೊಂದಿದ ಐ ಫೋನ್ ಗಳನ್ನು ಆ್ಯಪಲ್ ಸಂಸ್ಥೆ ಬಿಡುಗಡೆ ಮಾಡಿದೆ. 2 ಸಿಮ್ ಅಳವಡಿಸುವ ವ್ಯವಸ್ಥೆಯನ್ನು ಮೊದಲ ಬಾರಿಗೆ ಪರಿಚಯಿಸಲಾಗಿದೆ. ಎರಡು ಸಿಮ್‌ಗಲ್ಲಿ ಒಂದು ನ್ಯಾನೋ ಸಿಮ್ ಹಾಗೂ ಇ- ಸಿಮ್‌ಗೆ ಜಾಗ ನೀಡಲಾಗಿದೆ. ವಾಷಿಂಗ್ಟನ್:ಆ್ಯಪಲ್ ಕಂಪನಿ ಹೊಸದಾಗಿ ಐಫೋನ್ ಎಕ್ಸ್ ಆರ್, ಐಫೋನ್ ಎಕ್ಸ್ ಎಸ್ ಹಾಗೂ ಐಫೋನ್ ಎಸ್‌ಎಕ್ಸ್ ಮ್ಯಾಕ್ಸ್ ಹೆಸರಿನ 3 ಮೊಬೈಲ್ ಬಿಡುಗಡೆ ಮಾಡಿದೆ. ಐಫೋನ್ ಎಕ್ಸ್‌ಎಸ್ ಮತ್ತು ಐಫೋನ್ ಎಸ್ ಎಕ್ಸ್ ಮ್ಯಾಕ್ಸ್ ಫೋನ್‌ಗಳಲ್ಲಿ 2 ಸಿಮ್ ಅಳವಡಿಸುವ ವ್ಯವಸ್ಥೆಯನ್ನು ಮೊದಲ ಬಾರಿಗೆ ಪರಿಚಯಿಸಲಾಗಿದೆ. ಎರಡು ಸಿಮ್‌ಗಲ್ಲಿ ಒಂದು ನ್ಯಾನೋ ಸಿಮ್ ಹಾಗೂ ಇ- ಸಿಮ್‌ಗೆ ಜಾಗ ನೀಡಲಾಗಿದೆ. ಐಫೋನ್ ಎಕ್ಸ್‌ಎಸ್ ಗೆ ಭಾರತದಲ್ಲಿ 99,900 ರು. ಹಾಗೂ ಐಫೋನ್ ಎಕ್ಸ್ ಎಸ್ ಮ್ಯಾಕ್ಸ್‌ಗೆ 1,09,900 ರು. ದರ ಇದೆ.