ಮಾರುತಿ ಸುಜುಕಿ ಸ್ವಿಫ್ಟ್ ಲಿಮಿಟೆಡ್ ಎಡಿಶನ್ ಕಾರು-ಬೆಲೆ ಕೇವಲ 4.99 ಲಕ್ಷ ಮಾರುತಿ ಸ್ಪಿಫ್ಟ್ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಕಡಿಮೆ ಬೆಲೆ ಹಾಗೂ ಗರಿಷ್ಠ ಫೀಚರ್ಸ್‌ನೊಂದಿಗೆ ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆ ಮಾಡಲಾಗಿದೆ. ಇಲ್ಲಿದೆ ಮಾರುತಿ ಸುಜುಕಿ ಸ್ಪಿಫ್ಟ್ ಲಿಮಿಟೆಡ್ ಎಡಿಶನ್ ಕಾರಿನ ವಿಶೇಷತೆ. ಬೆಂಗಳೂರು(ಸೆ.23):ಮಾರುತು ಸುಜುಕಿ ಸಂಸ್ಥೆಯ ನೂತನ ಸಿಫ್ಟ್ ಕಾರಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಇದರ ಬೆನ್ನಲ್ಲೇ ಹಬ್ಬದ ಪ್ರಯುಕ್ತ ಮಾರುತಿ ಸುಜುಕಿ ಲಿಮಿಟೆಡ್ ಎಡಿಶನ್ ಸ್ಪಿಫ್ಟ್ ಕಾರು ಬಿಡುಗಡೆ ಮಾಡಿದೆ. ಲಿಮಿಟೆಡ್ ಎಡಿಶನ್ ಸ್ಪಿಫ್ಟ್ ಕಾರಿನ ಬೆಲೆ 4.99 ಲಕ್ಷ (ದೆಹಲಿ ಎಕ್ಸ್ ಶೋ ರೂಂ). ಹಾಗೂ ವೇರಿಯೆಂಟ್‌ಗಳಲ್ಲಿ ಲಭ್ಯವಿರುವ ಲಿಮಿಟೆಡ್ ಎಡಿಶನ್ ಕಾರಿನಲ್ಲಿ ಗರಿಷ್ಠ ಫೀಚರ್ಸ್ ಸೇರಿಸಲಾಗಿದೆ. ಬ್ಲೂಟೂಥ್ ಸ್ಟೀರಿಯೋ ಹಾಗೂ 2 ಸ್ಪೀಕರ್, ಬ್ಲಾಕ್ ಪೈಂಟೆಡ್ ವೀಲ್ ಕವರ್, ಫ್ರಂಟ್ ಪವರ್ ವಿಂಡೋ, ಎಬಿಎಸ್, ಫ್ರಂಟ್ ಏರ್‌ಬ್ಯಾಗ್ಸ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯ ಹೊಂದಿದೆ. ಲಿಮಿಟೆಡ್ ಎಡಿಶನ್ ಕಾರಿನ ಇಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 1.2 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಇಂಜಿನ್ ಹೊಂದಿದೆ. 5 ಸ್ಪೀಡ್ ಮ್ಯಾನ್ಯುಯೆಲ್ ಗೇರ್‌ಬಾಕ್ಸ್ ಹೊಂದಿದೆ.