: ಹಳೆಯ ಸ್ಮಾರ್ಟ್‌ಫೋನ್‌ ಕೊಡಿ ಸಾಕು, ಅತೀ ಕಡಿಮೆ ಬೆಲೆಗೆ ಸಿಗುತ್ತೆ ಐಫೋನ್‌ ಐಫೋನ್‌ ಕೊಳ್ಳೋಕೆ ಯಾರಿಗೆ ತಾನೇ ಆಸೆ ಇರೋಲ್ಲ ಹೇಳಿ. ಆದ್ರೆ ಸಿಕ್ಕಾಪಟ್ಟೆ ಕಾಸ್ಟ್ಲೀ ಅನ್ನೋ ಕಾರಣಕ್ಕೆ ಬಹುತೇಕರು ಐಫೋನ್ ಖರೀದಿಸೋದನ್ನು ಅವಾತಯ್ಡ್ ಮಾಡುತ್ತಾರೆ. ಆದ್ರೆ ಫ್ಲಿಪ್‌ಕಾರ್ಟ್‌ ವಿಂಟರ್‌ ಸೇಲ್‌ನಲ್ಲಿ ಐಫೋನ್ ನಿಮ್ಗೆ ಅತೀ ಕಡಿಮೆ ಬೆಲೆಗೆ ಸಿಗ್ತಿದೆ. ಆ್ಯಪಲ್ ಐಫೋನ್‌ 13, ಫ್ಲಿಪ್‌ಕಾರ್ಟ್ ವಿಂಟರ್ ಸೇಲ್‌ನಲ್ಲಿ ಭಾರಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ಆ್ಯಪಲ್ ಐಫೋನ್‌ 13 ಈಗ ಆ್ಯಪಲ್ ಅಧಿಕೃತ ಅಂಗಡಿಯಲ್ಲಿ ಲಭ್ಯವಿರುವ ಅಗ್ಗದ ಮೊಬೈಲ್‌ ಆಗಿದೆ. ಆದರೆ 2021ರಲ್ಲಿ 79,900 ರೂ.ಗಳ ಆರಂಭಿಕ ಬೆಲೆಯಲ್ಲಿ ಇದರ ಮಾರಾಟವನ್ನು ಪ್ರಾರಂಭಿಸಲಾಯಿತು. ಪ್ರಸ್ತುತ ಇದು ಆಪಲ್ ಸ್ಟೋರ್‌ನಲ್ಲಿ 59,900 ರೂ.ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಆದರೆ ಸದ್ಯ ನೀವು ಆ್ಯಪಲ್ ಐಫೋನ್‌ 13ನ್ನು ಫ್ಲಿಪ್‌ಕಾರ್ಟ್‌ನಿಂದ 19,400 ರೂಪಾಯಿಗಳ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಆ್ಯಪಲ್ ಐಫೋನ್‌ 13ನ್ನು ಫ್ಲಿಪ್‌ಕಾರ್ಟ್‌ನಲ್ಲಿ 1000 ರೂಪಾಯಿಗಳ ರಿಯಾಯಿತಿಯ ನಂತರ 58,900 ರೂಪಾಯಿಗಳಿಗೆ ನೀಡಲಾಗುತ್ತಿದೆ. ಮಾತ್ರವಲ್ಲ, ಇದರ ಜೊತೆಗೆ ಖರೀದಿದಾರರು ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 2000 ರೂ. ಡಿಸ್ಕೌಂಟ್ ಪಡೆಯಬಹುದು. ಆ್ಯಪಲ್ ಐಫೋನ್‌ 13ರ ಬೆಲೆಯನ್ನು 56,900 ರೂ.ಗೆ ಇಳಿಸಿದೆ. ಇದಲ್ಲದೇ, ಖರೀದಿದಾರರು ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ 37,500 ರೂ.ವರೆಗೆ ರಿಯಾಯಿತಿ ಪಡೆಯಬಹುದು. ಇನ್ಮುಂದೆ ಕರ್ನಾಟಕದಲ್ಲೇ ತಯಾರಾಗುತ್ತೆ ಆ್ಯಪಲ್ ಫೋನ್‌: ಭಾರತದ ಮೊದಲ ಸ್ವದೇಶಿ ಐಫೋನ್ ತಯಾರಕರಾದ ಟಾಟಾ ಗ್ರೂಪ್‌! ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಜಸ್ಟ್‌ 19,400 ರೂ. ಗೆ ಐಫೋನ್ ಲಭ್ಯಎಲ್ಲಾ ಕೊಡುಗೆಗಳು ಮತ್ತು ಬ್ಯಾಂಕ್ ರಿಯಾಯಿತಿಯ ನಂತರ, ಖರೀದಿದಾರರು ಆ್ಯಪಲ್ ಐಫೋನ್‌ 13 ಅನ್ನು ಫ್ಲಿಪ್‌ಕಾರ್ಟ್ ಮಾರಾಟದಿಂದ ಕೇವಲ 19,400 ರೂ.ಗಳಲ್ಲಿ ಪಡೆಯಬಹುದು. ಆ್ಯಪಲ್ ಐಫೋನ್‌ 13 ಆಪಲ್ 14 ನಂತೆಯೇ ಹೆಚ್ಚಿನ ಸ್ಪೆಕ್ಸ್ ಅನ್ನು ಕಡಿಮೆ ಬೆಲೆಗೆ ನೀಡುತ್ತದೆ. ನೀವು 13 ಗಿಂತ ಬಜೆಟ್‌ನಲ್ಲಿ ಪ್ರೀಮಿಯಂ ಅನ್ನು ಖರೀದಿಸಲು ಯೋಜಿಸುತ್ತಿದ್ದರೆ ಫ್ಲಿಪ್‌ಕಾರ್ಟ್ ವಿಂಟರ್ ಸೇಲ್‌ ಮಾರಾಟದಲ್ಲಿ ಆ್ಯಪಲ್ ಐಫೋನ್‌ 13 ಇದುವರೆಗೆ ಕಡಿಮೆ ಬೆಲೆಗೆ ಲಭ್ಯವಿದೆ. ಯಾವುದೇ ಸ್ಮಾರ್ಟ್‌ಫೋನ್‌ನಲ್ಲಿಲ್ಲದ ಈ 9 ವೈಶಿಷ್ಟ್ಯಗಳು ಐಫೋನ್‌ 15ನಲ್ಲಿದೆ ನೋಡಿ! ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಆ್ಯಪಲ್ ಐಫೋನ್‌ 13ಆ್ಯಪಲ್ ಐಫೋನ್‌ 15 ಬಿಡುಗಡೆಯೊಂದಿಗೆ, ಆ್ಯಪಲ್ ಐಫೋನ್‌ 13ರ ಬೆಲೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗಿದೆ. ಇದು ಹಿಂದೆಂದಿಗಿಂತಲೂ ಅಗ್ಗವಾಗಿದೆ. ಆ್ಯಪಲ್ ಐಫೋನ್‌ 13, 4K ರೆಕಾರ್ಡಿಂಗ್ ಜೊತೆಗೆ 12MP ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ನೈಟ್ ಮೋಡ್‌ನೊಂದಿಗೆ 12MP ಫ್ರಂಟ್ ಕ್ಯಾಮೆರಾವನ್ನು ಸಹ ಹೊಂದಿದೆ. ಮೊಬೈಲ್‌ 17 ಗಂಟೆಗಳ ವರೆಗೆ ವೀಡಿಯೊ ಪ್ಲೇಬ್ಯಾಕ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಕಳೆದ ವರ್ಷದ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಆ್ಯಪಲ್ ಐಫೋನ್‌ 13, ಉತ್ತಮ ಮಾರಾಟವಾದ ಮೊಬೈಲ್ ಆಗಿದೆ. ಮಾತ್ರವಲ್ಲ, ಆ್ಯಪಲ್ ಐಫೋನ್‌ 13 ಇಲ್ಲಿಯವರೆಗೆ ಹೆಚ್ಚು ಮಾರಾಟವಾದ ಐಫೋನ್ ಮಾದರಿಗಳಲ್ಲಿ ಒಂದಾಗಿದೆ.