ದುಬಾರಿ ಐಫೋನ್ ಎಕ್ಸ್ ಮ್ಯಾಕ್ಸ್ ಬಿಡುಗಡೆ ಮಾಡಿದ ಆ್ಯಪಲ್! ಆ್ಯಪಲ್ ಕಂಪೆನಿಯ ಬಹುನಿರೀಕ್ಷಿತ ಮೂರು ಐ ಫೋನ್ ಬಿಡುಗಡೆ ಮಾಡಿದೆ. ಹೆಚ್ಚಿನ ಫೀಚರ್ಸ್, ಸುಧಾರಿತ ಬ್ಯಾಟರಿ ಹಾಗೂ ಆಕರ್ಷ ವಿನ್ಯಾಸದೊಂದಿಗೆ ಮೂರು ಐ ಫೋನ್‌ಗಳು ಮಾರುಕಟ್ಟೆ ಪ್ರವೇಶಿಸಿದೆ. ಈ ನೂತನ ಐ ಫೋನ್ ಬೆಲೆ ಹಾಗೂ ಇತರ ವಿವರ ಇಲ್ಲಿದೆ. ಕ್ಯಾಲಿಫೋರ್ನಿಯಾ(ಸೆ.13):ವಿಶ್ವದ ಪ್ರತಿಷ್ಠಿತ ಆ್ಯಪಲ್ ಕಂಪೆನಿ ನೂತನ ಐಫೋನ್ ಬಿಡುಗಡೆ ಮಾಡಿದೆ. ದುಬಾರಿ ಬೆಲೆಯ ಎಕ್ಸ್ ಮ್ಯಾಕ್ಸ್ ಐ-ಫೋನ್ ಇದೀಗ ಆ್ಯಪಲ್ ಗ್ರಾಹಕರನ್ನ ಮೋಡಿ ಮಾಡುತ್ತಿದೆ. - , , 4 .# ನೂತನ ಐಫೋನ್ ಎಕ್ಸ್ ಮ್ಯಾಕ್ಸ್ ಆರಂಭಿಕ ಬೆಲೆ 1.05 ಲಕ್ಷ ರೂಪಾಯಿ. ಎಕ್ಸ್ ಮ್ಯಾಕ್ಸ್ ಜೊತೆಗೆ ಆ್ಯಪಲ್ ಇನ್ನೆರಡು ಐಫೋನ್ ಬಿಡುಗಡೆ ಮಾಡಿದೆ. ಐಫೋನ್ ಎಕ್ಸ್ ಹಾಗೂ ಐಫೋನ್ ಆರ್ ಫೋನ್‌ಗಳು ಮಾರುಕಟ್ಟೆ ಪ್ರವೇಶಿಸಿದೆ. ://./Gnc56BYWhTvia@../ ನೂತನ ಐಫೋನ್ ಡಿಸೈನ್ ಕಳೆದ ವರ್ಷ ಬಿಡುಗಡೆಯಾದ ಐಫೋನ್ ಎಕ್ಸ್ ಮಾದರಿಯಲ್ಲಿದೆ. ಎಕ್ಸ್ ಮ್ಯಾಕ್ಸ್ ಫೋನ್ 64ಜಿಬಿ, 256 ಜಿಬಿ, ಹಾಗೂ 512 ಜಿಬಿ ಸ್ಟೋರೇಜ್ ಹೊಂದಿದೆ. 5.8 ಇಂಚಿನ ಐಫೋನ್ ಎಕ್ಸ್‌ಎಸ್ ಫೋನ್ ಬೆಲೆ 99,900 ರೂಪಾಯಿಗಳಿಂದ ಆರಂಭಗೊಳ್ಳಲಿದೆ. ಇನ್ನು 64ಜಿಬಿ, 256 ಜಿಬಿ, ಹಾಗೂ 512 ಜಿಬಿ ಸ್ಟೋರೇಜ್ ಹೊಂದಿದೆ. ಐಫೋನ್ ಎಕ್ಸ್ ಆರ್ ಬೆಲೆ 76,000 ರೂಪಾಯಿಂದ ಪ್ರಾರಂಭವಾಗಲಿದೆ. 64ಜಿಬಿ, 128ಜಿಬಿ ಮತ್ತು 256ಜಿಬಿ ಸ್ಟೋರೇಜ್ ಹೊಂದಿದೆ. ಈ ಮೂರು ಫೋನ್‌ಗಳಲ್ಲಿ ಒಎಲ್ಇಡಿ ಸ್ಕ್ರೀನ್, ಡ್ಯುಯೆಲ್ ರೇರ್ ಕ್ಯಾಮರ್ ಹಾಗೂ ಡ್ಯುಯೆಲ್ ಸಿಮ್ ಸೌಲಭ್ಯ ಹೊಂದಿದೆ. ಎ12 ಬಯೋನಿಕ್ ಪ್ರೊಸೆಸರ್, 12ಎಂಪಿ ರೇರ್ ಕ್ಯಾಮರ್ ಹಾಗೂ 7ಎಂಪಿ ಡೆಪ್ತ್ ಕ್ಯಾಮರ ಹೊಂದಿದೆ. ಹೆಚ್ಚುಕಾಲ ಚಾರ್ಜ್ ಇರಬಲ್ಲ ಸುಧಾರಿತ ಬ್ಯಾಟರಿ ಹೊಂದಿದೆ.