ನೂತನ ವಿಮೆ ನಿಯಮ: ಹೊಂಡಾ ಬೈಕ್,ಸ್ಕೂಟರ್ ಬೆಲೆ ಪರಿಷ್ಕರಣೆ ವಾಹನಗಳಿಗೆ ನೂತನ ವಿಮೆ ಪಾಲಿಸಿ ಜಾರಿಗೆ ಬಂದಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಕಾರುಗಳಿಗೆ 3 ವರ್ಷ ಹಾಗೂ ಬೈಕ್,ಸ್ಕೂಟರ್‌ಗಳಿಗೆ 5 ವರ್ಷದ ನೂತನ ಇನ್ಶುರೆನ್ಸ್ ನಿಯಮ ಜಾರಿಗೆ ಬಂದಿದೆ. ಹೀಗಾಗಿ ಹೊಂಡಾ ತನ್ನ ಬೈಕ್ ಹಾಗೂ ಸ್ಕೂಟರ್‌ಗಳ ಬೆಲೆ ಪರಿಷ್ಕರಿಸಿದೆ. ಇಲ್ಲಿದೆ ಹೊಂಡಾ ಸಂಸ್ಥೆಯ ನೂತನ ಬೆಲೆ. ಬೆಂಗಳೂರು(ಸೆ.08)ಸುಪ್ರೀಂ ಕೋರ್ಟ್ ಆದೇಶದಂತೆ ನೂತನ ವಾಹನ ವಿಮೆ ಯೋಜನೆ ಜಾರಿಗೆ ಬಂದಿದೆ. ವಾಹನಗಳ ಒಂದು ವರ್ಷದ ವಿಮೆ ಬದಲು ಇದೀಗ ಕಾರುಗಳಿಗೆ 3 ವರ್ಷಗಳ ಇನ್ಶುರೆನ್ಸ್ ಹಾಗೂ ಬೈಕ್,ಸ್ಕೂಟರ್‌ಗಳಿಗೆ 5 ವರ್ಷದ ವಿಮೆ ಯೋಜನೆ ಜಾರಿಗೆ ಬಂದಿದೆ. ನೂತನ ಇನ್ಶುರೆನ್ಸ್ ಪಾಲಿಸಿ ಪ್ರಕಾರ ಹೊಂಡಾ ಮೋಟಾರು ಸಂಸ್ಥೆ ವಾಹನಗಳ ದರ ಪರಿಷ್ಕರಿಸಿದೆ. ನೂತನ ನಿಮಯದಿಂದಾಗಿ ಬೈಕ್ ಹಾಗೂ ಸ್ಕೂಟರ್‌ ಬೆಲೆ ಹೆಚ್ಚಾಗಿದೆ. ಇಲ್ಲಿದೆ ಹೊಂಡಾ ಸ್ಕೂಟರ್‌ಗಳ ಪರಿಷ್ಕರಣೆ ದರ ಇಲ್ಲಿದೆ ಹೊಂಡಾ ಬೈಕ್ ಪರಿಷ್ಕರಣೆ ದರ