ಜಿಯೋಫೋನ್ 2 ಮಾರುಕಟ್ಟೆಗೆ ದೇಶದ ಇಂಟರ್‌ನೆಟ್ ಕ್ಷೇತ್ರದಲ್ಲಿ ದೊಡ್ಡ ಅಲೆ ಎಬ್ಬಿಸಿರುವ ಜಿಯೋ ಇದೀಗ ಮತ್ತೊಂದು ಸಿಹಿ ಸುದ್ದಿ ಹೊತ್ತು ತಂದಿದೆ. ಈ ಹಿಂದೆ ಅಗ್ಗದ ದರಕ್ಕೆ ಮೊಬೈಲ್ ನೀಡಿದ್ದ ಜಿಯೋ ಈಗ ‘ಜಿಯೋಫೋನ್‌2’ ಹೆಸರಿನಲ್ಲಿ ಮತ್ತೊಂದು ಕಡಿಮೆ ಬೆಲೆಯ ಮೊಬೈಲ್ ನೀಡಲು ಮುಂದೆ ಬಂದಿದೆ. ಆಗಸ್ಟ್ 16ರಿಂದ 2999 ರು. ಬೆಲೆಯ ಜಿಯೋಫೋನ್ 2 ಬುಕ್ಕಿಂಗ್ ಆರಂಭವಾಗಿದ್ದು, ಜಿಯೊ ಅಧಿಕೃತ ವೆಬ್‌ಸೈಟ್ (ಜಿಯೊ ಡಾಟ್ ಕಾಮ್) ನಲ್ಲಿ ಮೊಬೈಲ್ ಲಭ್ಯ. ಫೇಸ್‌ಬುಕ್, ಯೂಟ್ಯೂಬ್ ಸೇವೆಗಳು ಈ ಮೊಬೈಲ್‌ನಲ್ಲಿ ಸಿಗಲಿದ್ದು, ಸದ್ಯದಲ್ಲಿಯೇ ವಾಟ್ಸಪ್ ಸೇವೆಯೂ ಕೂಡ ದೊರೆಯಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಜುಲೈನಲ್ಲಿ ನಡೆದ 41ನೇ ವಾರ್ಷಿಕ ಮಹಾಸಭೆಯಲ್ಲಿ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಜಿಯೋಗಿಗಾಫೈಬರ್ ಸೇವೆ ಹಾಗೂ ಜಿಯೋ ಫೋನ್ 2 ಬಿಡುಗಡೆ ಬಗ್ಗೆ ಪ್ರಕಟಿಸಿದ್ದರು. ಇದನ್ನೂ ಓದಿ:ಜಿಯೋಫೋನ್ 2 ಬಿಡುಗಡೆ; ನೂತನ ಫೋನ್‌ನಲ್ಲಿ ಏನೆಲ್ಲಾ ಫೀಚರ್ಸ್ ಇದೆ?