ಜುಲೈನಲ್ಲಿ ಗರಿಷ್ಠ ಮಾರಾಟವಾದ ಕಾರು ಪಟ್ಟಿ ಬಿಡುಗಡೆ! ಜುಲೈ ತಿಂಗಳಲ್ಲಿ ಭಾರತದಲ್ಲಿ ಗರಿಷ್ಠ ಮಾರಾಟವಾದ ಕಾರುಗಳ ಪಟ್ಟಿ ಬಿಡುಗಡೆಯಾಗಿದೆ. ಭಾರತದ ಬಹುತೇಕ ಕಡೆ ಗರಿಷ್ಠ ಪ್ರಮಾಣದ ಮಳೆಯಾದರೂ, ಕಾರು ಖರೀದಿಗೆ ಯಾವುದೇ ತೊಡಕಾಗಿಲ್ಲ. ಇಲ್ಲಿದೆ ಗರಿಷ್ಠ ಮಾರಾಟವಾದ ಕಾರಿನ ವಿವರ. ಬೆಂಗಳೂರು(ಆ.09):ಭಾರತದಲ್ಲಿ ಕಾರು ಮಾರಾಟ ದಾಖಲೆ ಪ್ರಮಾಣಕ್ಕೆ ಏರಿಕೆಯಾಗಿದೆ. ಕಳೆದ ಜುಲೈ ತಿಂಗಳಿನಲ್ಲಿ ಅತೀ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಮಾರುತಿ ಸುಜುಕಿ ಮೊದಲ ಸ್ಥಾನ ಅಲಂಕರಿಸಿದೆ. ಮಾರುತಿ ಸುಜುಕಿ ಸಂಸ್ಥೆಯ 6 ಕಾರುಗಳು ಮಾರಾಟದಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಜುಲೈನಲ್ಲಿ ಗರಿಷ್ಠ ಮಾರಾಟವಾದದ ಕಾರುಗಳ ಪೈಕಿ ಮಾರುತಿ ಸುಜುಕಿ ಡಿಸೈರ್ ಮೊದಲ ಸ್ಥಾನದಲ್ಲಿದೆ. ಜುಲೈ ತಿಂಗಳಲ್ಲಿ ಡಿಸೈರ್ ಕಾರು 25647 ಕಾರುಗಳು ಮಾರಾಟವಾಗಿದೆ. ಇನ್ನು 2ನೇ ಸ್ಥಾನವನ್ನ ಮಾರುತಿ ಸುಜುಕಿ ಆಲ್ಟೋ ಅಲಂಕರಿಸಿದೆ. ಆಲ್ಟೋ 23371 ಕಾರುಗಳು ಮಾರಾಟವಾಗಿದೆ. ಮಾರುತಿ ಸುಜುಕಿ ಸ್ವಿಫ್ಟ್, ಮಾರುತಿ ಬಲೆನೋ, ಮಾರುತಿ ವ್ಯಾಗ್ನರ್, ಮಾರುತಿ ವಿಟಾರ ಬ್ರೀಜಾ ನಂತರದ ಸ್ಥಾನ ಅಲಂಕರಿಸಿದೆ. ಈ ಮೂಲಕ ಆರಂಭಿಕ 6 ಸ್ಥಾನಗಲ್ಲಿ ಮಾರುತಿ ಸುಜುಕಿ ಕಾರುಗಳು ವಿರಾಜಮಾನವಾಗಿದೆ. 7ನೇ ಸ್ಥಾನವನ್ನ ಹ್ಯುಂಡೈ ಎಲೈಟ್ ಐ20 ಪಡೆದಿದೆ. ಜುಲೈನಲ್ಲಿ ಗರಿಷ್ಠ ಮಾರಾಟವಾದ ಕಾರು