ಬಿಎಸ್‌ಎನ್‌ಎಲ್‌ನಿಂದ ನಿಂದ ಭರ್ಜರಿ ಈದ್ ಆಫರ್ ಈದ್ ಉಲ್ ಫಿತರ್ ಹಬ್ಬದ ಅಂಗವಾಗಿ ಬಿಎಸ್‌ಎನ್‌ಎಲ್ ವತಿಯಿಂದ ಗ್ರಾಹಕರಿಗೆ 786 ರು. ವಿಶೇಷ ರೀಚಾರ್ಜ್ ಕೊಡುಗೆ ನೀಡಲಾಗಿದೆ. ಬೆಂಗಳೂರು:ಈದ್ ಉಲ್ ಫಿತರ್ ಹಬ್ಬದ ಅಂಗವಾಗಿ ಬಿಎಸ್‌ಎನ್‌ಎಲ್ ವತಿಯಿಂದ ಗ್ರಾಹಕರಿಗೆ ವಿಶೇಷ ರೀಚಾರ್ಜ್ ಕೊಡುಗೆ ನೀಡಲಾಗಿದೆ. ಬಿಎಸ್‌ಎನ್‌ಎಲ್ ಪ್ರೀಪೇಯ್ಡ್ ಗ್ರಾಹಕರು 786 ರು.ಗೆ ರೀಚಾರ್ಜ್ ಮಾಡಿಸಿಕೊಂಡರೆ ಅನ್‌ಲಿಮಿಟೆಡ್ ಕರೆಗಳು, ಪ್ರತಿದಿನ 2 ಜಿ.ಬಿ ಡಾಟಾ, 100 ಎಸ್ ಎಂಎಸ್, 150 ದಿನ ವ್ಯಾಲಿಡಿಟಿ ಪಡೆಯಬಹುದು. ಇದು ಸೀಮಿತ ಅವಧಿಯ ಕೊಡುಗೆಯಾಗಿದ್ದು, ಜೂ 26 ವರೆಗೆ ಮಾತ್ರ ಲಭ್ಯವಿದೆ. ಕೊಡುಗೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಎಸ್ಎನ್ಎಲ್ ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ ಎಂದು ಬಿಎಸ್‌ಎನ್‌ಎಲ್ ಮುಖ್ಯ ಮಹಾ ಪ್ರಬಂಧಕ ಆರ್.ಮಣಿ ತಿಳಿಸಿದ್ದಾರೆ.