ಬೆಂಗಳೂರು ಟೆಕ್ ಕಂಪನಿಯಿಂದ ಎಲೆಕ್ಟ್ರಿಕ್ ಬೈಕ್ ಬೆಂಗಳೂರು ಮೂಲದ ಟೆಕ್ ಸ್ಟಾರ್ಟ್ ಅಪ್ ಕಂಪನಿಯೊಂದು ಎಲೆಕ್ಟ್ರಿಕ್ ಬೈಕ್ ವೊಂದನ್ನು ನಿರ್ಮಿಸುತ್ತಿದೆ. ಒಂದು ಸಲ ರಿಚಾರ್ಜ್ ಮಾಡಿದರೆ 500 ಕಿ.ಮೀ ಓಡಬಲ್ಲ ಸಾಮರ್ಥ್ಯ ಈ ಬೈಕ್ ಇರಲಿದೆ. ಬೆಂಗಳೂರು (ಮೇ.27):ಬೆಂಗಳೂರು ಮೂಲದ ಟೆಕ್ ಸ್ಟಾರ್ಟ್ ಅಪ್ ಕಂಪನಿಯೊಂದು ಎಲೆಕ್ಟ್ರಿಕ್ ಬೈಕ್ ವೊಂದನ್ನು ನಿರ್ಮಿಸುತ್ತಿದೆ. ಒಂದು ಸಲ ರಿಚಾರ್ಜ್ ಮಾಡಿದರೆ 500 ಕಿ.ಮೀ ಓಡಬಲ್ಲ ಸಾಮರ್ಥ್ಯ ಈ ಬೈಕ್ ಇರಲಿದೆ. ಹೌದು ಬೆಂಗಳೂರು ಮೂಲದ ಮ್ಯಾನಕಾಮೆ ಇಪಿ-1 ಎಂಬ ಟೆಕ್ ಸ್ಟಾರ್ಟ್ ಅಪ್ ಕಂಪನಿ ಈ ಬೈಕ್ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದು, ಗಂಟೆಗೆ 250 ಕಿ.ಮೀ ದೂರ ಚಲಿಸಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ತಿಳಿಸಿದೆ. ಅಲ್ಲದೇ ಈ ಬೈಕ್ ನಿರ್ಮಾಣ ಕಾರ್ಯಕ್ಕೆ ಸಾವರ್ವಜನಿಕರಿಂದ ದೇಣಿಗೆ ಕೂಡ ಸಂಗ್ರಹಿಸುತ್ತಿದೆ. 18.4 ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಕಡಿಮೆ ವಿದ್ಯುತ್ ಬಳಕೆಯಾಗಲಿದೆ ಎನ್ನಲಾಗಿದೆ. ಈಗಾಗಲೇ ಬೈಕ್ ನಿರ್ಮಾಣ ಕಾರ್ಯ ಮುಂದುವರೆದಿದ್ದು, ಶೀಘ್ರದಲ್ಲೇ ಮೊದಲ ಭಾರತೀಯ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಗೆ ಅಪ್ಪಳಿಸಲಿದೆ. ಈ ಎಲೆಕ್ಟ್ರಿಕ್ ಬೈಕ್ ಕುರಿತು ಇನ್ನಷ್ಟು ಮಾಹಿತಿಗಳು ಹೊರಬೀಳಬೇಕಿದ್ದು, ಮ್ಯಾನಕಾಮೆ ಕಂಪನಿ ಈ ಬೈಕ್ ತಂತ್ರಜ್ಞಾನದ ಕುರಿತು ಮತ್ತಷ್ಟು ಮಾಹಿತಿ ನೀಡಲಿದೆ.