ಪ್ರತೀ ಭಾರತೀಯರೂ ಡೌನ್’ಲೋಡ್ ಮಾಡಿಕೊಳ್ಳಲೇಬೇಕಾದ ಸರ್ಕಾರಿ ಮೊಬೈಲ್ ಆ್ಯಪ್‌’ಗಳಿವು ಪ್ರತೀ ಭಾರತೀಯರೂ ಡೌನ್’ಲೋಡ್ ಮಾಡಿಕೊಳ್ಳಲೇಬೇಕಾದ ಸರ್ಕಾರಿ ಮೊಬೈಲ್ ಆ್ಯಪ್‌’ಗಳಿವು *ಉಮಂಗ್ ಆ್ಯಪ್‌: ಸರ್ಕಾರದ ಎಲ್ಲಾ ಸೇವೆಗಳ ಬಗ್ಗೆಯೂ ಈ ಒಂದೇ ಆ್ಯಪ್‌ ಸಂಪೂರ್ಣವಾಗಿ ಸಹಕಾರಿಯಾಗಬಲ್ಲುದು * ಎಂ ಪಾಸ್ಪೋರ್ಟ್ ಆ್ಯಪ್‌ ಪಾಸ್ಪೋರ್ಟ್ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಈ ಆ್ಯಪ್‌ ಮೂಲಕ ಪಡೆದು ಕೊಳ್ಳಬಹುದುದಾಗಿದೆ. * ಎಂ ಆಧಾರ್ ಇದು ಕೇವಲ ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ದೊರೆಯುವಂತದ್ದಾಗಿದೆ. *ಪೋಸ್ಟ್ ಇನ್’ಫೋ ಇದು ಭಾರತೀಯ ಅಂಚೆ ಇಲಾಖೆಗೆ ಸಂಬಂಧಪಟ್ಟಂತಹ ಮೊಬೈಲ್ ಆ್ಯಪ್‌ ಆಗಿದೆ. *ಮೈ ಗವರ್ನಮೆಂಟ್ ಸರ್ಕಾರಿ ಯೋಜನೆಗಳಲ್ಲಿ ಪಾಲ್ಗೊಳ್ಳಲು ಹಾಗೂ ತಮ್ಮ ಐಡಿಯಾಗಳನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲು ಇರುವಂತಹ ಆ್ಯಪ್‌ ಇದಾಗಿದೆ. *ಮೈ ಸ್ಪೀಡ್ ಇದರಲ್ಲಿ ಡೇಟಾ ಸ್ಪೀಡ್ ಸೇರಿದಂತೆ ಟ್ರಾಯ್’ನ ವಿವಿಧ ರೀತಿಯಾದ ಮಾಹಿತಿ ಪಡೆದುಕೊಳ್ಳಲು ಇದು ಅನುಕೂಲಕರವಾದ ಆ್ಯಪ್‌ ಆಗಿದೆ. *ಮೊಬೈಲ್ ಸೆಕ್ಯುರಿಟಿ ಸಲ್ಯೂಷನ್ ಮೊಬೈಲ್ ಭದ್ರತೆಗೆ ಸಂಬಂಧಿಸಿದ ಆ್ಯಪ್‌ ಇದಾಗಿದೆ. *ಸ್ವಚ್ಛ ಭಾರತ ಅಭಿಯಾನ ಸ್ವಚ್ಛತೆಗೆ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಳ್ಳಲು ಇರುವಂತಹ ಆ್ಯಪ್‌ ಇದಾಗಿದೆ. *ಭೀಮ್ ಇದು ಹಣವನ್ನು ವರ್ಗಾವಣೆ ಮಾಡಲು ಸಹಕಾರಿಯಾಗುವಂತಹ ಸರ್ಕಾರದ ಅತ್ಯಂತ ನಂಬಿಕೆಗೆ ಅರ್ಹವಾದ ಆ್ಯಪ್‌ ಆಗಿದೆ *ಐಆರ್’ಸಿಟಿಸಿ ಭಾರತೀಯ ರೈಲ್ವೆ ಇಲಾಖೆಗೆ ಸಂಬಂಧಿಸಿದ ಪ್ರಮುಖ ಆ್ಯಪ್‌ ಇದಾಗಿದೆ. *ಜಿಎಸ್’ಟಿ ರೇಟ್ ಫೈಂಡರ್ ಕೇಂದ್ರ ತೆರಿಗೆ ಇಲಾಖೆಯ ಆ್ಯಪ್‌ ಇದಾಗಿದೆ. ಯಾವ ವಸ್ತುವಿಗೆ ಎಷ್ಟು ಜಿಎಸ್’ಟಿ ಎನ್ನುವ ವಿಚಾರವನ್ನು ತಿಳಿಯಬಹುದಾಗಿದೆ. *ಆಯ್’ಕರ್ ಸೇತು ಇದರಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಳ್ಳಲು ಸಹಕರಿಸುತ್ತದೆ