ಭಾರತೀ ಏರ್‌ಟೆಲ್‌ನೊಂದಿಗೆ ಟಾಟಾ ಟೆಲಿಕಾಮ್ ವಿಲೀನ ಭಾರತೀ ಏರ್‌ಟೆಲ್‌ನೊಂದಿಗೆ ಟಾಟಾ ಟೆಲಿಕಾಮ್ ವಿಲೀನ ನವದೆಹಲಿ(ಅ.12):ಭಾರತದ ಅತಿದೊಡ್ಡ ಟೆಲಿಕಾಮ್ ಉದ್ಯಮವಾಗಿರುವ ಭಾರತೀ ಏರ್‌ಟೆಲ್‌ನೊಂದಿಗೆ ಟಾಟಾದ ಟೆಲಿಫೋನ್ ಸರ್ವೀಸಸ್ ಮತ್ತು ಟಾಟಾ ಟೆಲಿಸರ್ವೀಸಸ್ ಟೆಲಿಕಾಮ್ ವಿಲೀನವಾಗಲಿವೆ. ಈ ಹಿನ್ನೆಲೆಯಲ್ಲಿ ಟಾಟಾ ಟೆಲಿಸರ್ವೀಸಸ್ ಮತ್ತು ಟಾಟಾ ಟೆಲಿಸರ್ವೀಸಸ್ ಮಹಾರಾಷ್ಟ್ರದ ಸುಮಾರು 4 ಕೋಟಿ ಗ್ರಾಹಕರು ಮುಂದಿನ ದಿನಗಳಲ್ಲಿ ಏರ್‌ಟೆಲ್ ಗ್ರಾಹಕರಾಗಿ ಪರಿವರ್ತನೆಯಾಗಲಿದ್ದು, ವಿಶ್ವದ ಟೆಲಿಕಾಮ್ ಮಾರುಕಟ್ಟೆಯಲ್ಲಿ ಏರ್‌ಟೆಲ್ ಸಂಸ್ಥೆ ಮತ್ತಷ್ಟು ಬೃಹತ್ ಸಂಸ್ಥೆಯಾಗಲಿದೆ.