ಐಫೋನ್ ಎಕ್ಸ್ ಹೆಚ್ಚು ಮಾರಾಟವಾದಷ್ಟೂ ಅದರ ಪ್ರತಿಸ್ಪರ್ಧಿ ಸ್ಯಾಮ್ಸಂಗ್'ಗೆ ಆಗುತ್ತೆ ಲಾಭ..! ಹೇಗೆ ಗೊತ್ತಾ? ಪ್ರತಿಸ್ಪರ್ಧಿ ಸಂಸ್ಥೆಯ ಫೋನ್ ಮಾರಾಟವಾದರೆ ಸ್ಯಾಮ್ಸಂಗ್'ಗೆ ಹೇಗೆ ಲಾಭವಾಗುತ್ತೆ? ವಾಸ್ತವವಾಗಿ, ಐಫೋನ್ ಎಕ್ಸ್ ಫೋನ್'ನ ಕೆಲ ಪ್ರಮುಖ ಬಿಡಿಭಾಗಗಳನ್ನು ತಯಾರಿಸಿ ಸರಬರಾಜು ಮಾಡುತ್ತಿರುವುದು ಸ್ಯಾಮ್ಸಂಗ್ ಸಂಸ್ಥೆಯೇ. ಐಫೋಣ್ ಎಕ್ಸ್'ನಲ್ಲಿರುವ ಪ್ಯಾನೆಲ್ಸ್, ಫ್ಲ್ಯಾಷ್ ಮತ್ತು ಚಿಪ್'ಗಳು ಸ್ಯಾಮ್ಸಂಗ್'ನವೆಯೇ. ನವದೆಹಲಿ(ಅ. 03):ಆ್ಯಪಲ್ ಸಂಸ್ಥೆಯ ಬಹುನಿರೀಕ್ಷಿತ ಐಫೋನ್ ಎಕ್ಸ್ ಫೋನ್ ಇನ್ನೇನು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಸ್ಯಾಮ್ಸಂಗ್ ಸಂಸ್ಥೆಯ ಗೆಲಾಕ್ಸಿ ಎಸ್8 ಸ್ಮಾರ್ಟ್'ಫೋನ್ ಕೂಡ ಸ್ಪರ್ಧೆಗಿಳಿದಿದೆ. ಆದರೆ, ಐಫೋನ್ ಎಕ್ಸ್ ಸ್ಮಾರ್ಟ್'ಫೋನ್ ಹೆಚ್ಚೆಚ್ಚು ಮಾರಾಟವಾದಷ್ಟೂ ಸ್ಯಾಮ್ಸಂಗ್ ಲಾಭ ಪಡೆಯುತ್ತದೆ. ಗೆಲಾಕ್ಸಿ ಎಸ್8 ಹೆಚ್ಚು ಮಾರಾಟವಾಗದಿದ್ದರೂ ಪರವಾಗಿಲ್ಲ ಐಫೋನ್ ಎಕ್ಸ್ ಮಾರಾಟವಾಗಲಿ ಎಂದು ಸ್ಯಾಮ್ಸಂಗ್ ಒಳಗೊಳಗೇ ಹಾರೈಸಿಕೊಳ್ಳುತ್ತಿದೆ. ಸ್ಮಾರ್ಟ್'ಫೋನ್ ಪೈಪೋಟಿಯಲ್ಲಿ ಸ್ಯಾಮ್ಸಂಗ್ ಸದ್ಯಕ್ಕೆ ಸೇಫಾಗಿದೆ. ಆದರೆ, ಪ್ರತಿಸ್ಪರ್ಧಿ ಸಂಸ್ಥೆಯ ಫೋನ್ ಮಾರಾಟವಾದರೆ ಸ್ಯಾಮ್ಸಂಗ್'ಗೆ ಹೇಗೆ ಲಾಭವಾಗುತ್ತೆ? ವಾಸ್ತವವಾಗಿ, ಐಫೋನ್ ಎಕ್ಸ್ ಫೋನ್'ನ ಕೆಲ ಪ್ರಮುಖ ಬಿಡಿಭಾಗಗಳನ್ನು ತಯಾರಿಸಿ ಸರಬರಾಜು ಮಾಡುತ್ತಿರುವುದು ಸ್ಯಾಮ್ಸಂಗ್ ಸಂಸ್ಥೆಯೇ. ಐಫೋಣ್ ಎಕ್ಸ್'ನಲ್ಲಿರುವ ಪ್ಯಾನೆಲ್ಸ್, ಫ್ಲ್ಯಾಷ್ ಮತ್ತು ಚಿಪ್'ಗಳು ಸ್ಯಾಮ್ಸಂಗ್'ನವೆಯೇ. ಈ ಬಿಡಿಭಾಗಗಳು ಸ್ವಲ್ಪ ದುಬಾರಿಯೇ. ಐಫೋನ್ ಎಕ್ಸ್'ನ ಒಂದು ಫೋನ್ ಮಾರಾಟವಾದರೆ ಸ್ಯಾಮ್ಸಂಗ್'ಗೆ 110 ಡಾಲರ್(ಸುಮಾರು 7 ಸಾವಿರ ರೂ.) ಹಣ ಸಿಗುತ್ತದೆ. ಐಫೋನ್ ಎಕ್ಸ್'ನ ಅಂದಾಜು ಬೆಲೆ ಸುಮಾರು 65 ಸಾವಿರ ರೂಪಾಯಿ ಇದೆ. ಆ್ಯಪಲ್'ಗೆ ಬೇರೆ ಯಾರು ಸಿಗಲಿಲ್ವಾ?ಆ್ಯಪಲ್ ಸಂಸ್ಥೆ ತನ್ನ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಸ್ಯಾಮ್ಸಂಗ್'ನಿಂದ ತನ್ನ ಫೋನ್'ಗೆ ಬಿಡಿಭಾಗ ಯಾಕೆ ತರಿಸಿಕೊಳ್ಳುತ್ತದೆ? ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. 1.3 ಕೋಟಿ ಐಫೋನ್ ಎಕ್ಸ್ ಫೋನ್'ಗಳು ಮಾರಾಟವಾಗುವ ನಿರೀಕ್ಷೆ ಇದೆ. ವಾಸ್ತವವಾಗಿ, ಆ್ಯಪಲ್ ಸಂಸ್ಥೆ ಕೇಳುವ ಗುಣಮಟ್ಟಕ್ಕೆ ಮತ್ತು ಇಷ್ಟು ಪ್ರಮಾಣಕ್ಕೆ ಆ ಬಿಡಿಭಾಗಗಳನ್ನು ಸ್ಯಾಮ್ಸಂಗ್ ಬಿಟ್ಟರೆ ಬೇರಾವುದೇ ಸಂಸ್ಥೆಗಳಿಗೆ ಪೂರೈಸಲು ಆಗುವುದಿಲ್ಲ. ಹೀಗಾಗಿ, ಆ್ಯಪಲ್ ಸಂಸ್ಥೆ ಬೇರೆ ವಿಧಿಯಿಲ್ಲದೇ ಸ್ಯಾಮ್ಸಂಗ್'ಗೆ ಈ ಗುತ್ತಿಗೆ ನೀಡುವುದು ಅನಿವಾರ್ಯವಾಗಿದೆ. ಆ್ಯಪಲ್'ನ ಈ ಗುತ್ತಿಗೆಯಿಂದ ಸ್ಯಾಮ್ಸಂಗ್'ನ ಬಿಡಿಭಾಗ ಬ್ಯುಸಿನೆಸ್ ಗರಿಗೆದರಿದೆ. ಒಂದು ಅಂದಾಜಿನ ಪ್ರಕಾರ, ಐಫೋನ್ ಎಕ್ಸ್'ನ ಮಾರಾಟ ನಿರೀಕ್ಷಿತ ಪ್ರಮಾಣದಲ್ಲಿ ನಡೆದಲ್ಲಿ ಸ್ಯಾಮ್ಸಂಗ್'ಗೆ 1400 ಕೋಟಿ ಡಾಲರ್(ಸುಮಾರು 90 ಸಾವಿರ ಕೋಟಿ ರೂ.) ಲಾಭವಾಗುತ್ತದೆ. ಗೆಲಾಕ್ಸಿ ಎಸ್8 ಫೋನ್'ನ ಮಾರಾಟದ ಗುರಿ ಈಡೇರಿದರೂ ಸ್ಯಾಮ್ಸಂಗ್'ಗೆ ಈ ಪ್ರಮಾಣದ ಲಾಭ ಸಿಕ್ಕುವುದಿಲ್ಲ. ಹೀಗಾಗಿ, ಸ್ಯಾಮ್ಸಂಗ್ ಸಂಸ್ಥೆ ಸೇಫ್ ಗೇಮ್ ಆಡುತ್ತಿದೆ. ಆದರೆ, ವಿಶ್ಲೇಷಕರ ಪ್ರಕಾರ, ಸ್ಯಾಮ್ಸಂಗ್ ಹೆಚ್ಚು ದಿನ ನಿರಾಳವಾಗಿರಲು ಸಾಧ್ಯವಿಲ್ಲ. ಐಫೋನ್ ಬಿಡಿಭಾಗದ ತಯಾರಿಕೆಯು ದೊಡ್ಡ ಬ್ಯುಸಿನೆಸ್ ಆಗಿದ್ದರಿಂದ ಬೇರೆ ಸಂಸ್ಥೆಗಳು ಗುತ್ತಿಗೆ ಪಡೆಯಲು ಮುಂದಾಗುವ ನಿರೀಕ್ಷೆ ಇದೆ. ಎಲ್'ಜಿ ಸಂಸ್ಥೆ ಈಗಾಗಲೇ ತನ್ನ ತಯಾರಿಕಾ ಗುಣಮಟ್ಟವನ್ನು ಹೆಚ್ಚಿಸಿಕೊಂಡಿದ್ದು, ಮುಂದಿನ ವರ್ಷ ಆ್ಯಪಲ್ ಸಂಸ್ಥೆಯ ಬಿಡಿಭಾಗಗಳ ತಯಾರಿಕೆಗೆ ಮುಂದಾಬಹುದೆನ್ನಲಾಗಿದೆ.