ಏರ್'ಟೆಲ್'ನಿಂದ ಜಿಯೋ'ಗಿಂತ ಉತ್ತಮ ಆಫರ್'ಗಳು ಪ್ರಕಟ: ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಶೀಘ್ರದಲ್ಲೇ ! ಜಿಯೋ'ಗೆ ಸೆಡ್ಡು ಹೊಡೆಯುವ ಸಲುವಾಗಿ ಭಾರತದಲ್ಲೇ ಅತೀ ಹೆಚ್ಚು ಚಂದದಾರರನ್ನು ಹೊಂದಿರುವ ಏರ್'ಟೆಲ್ ಅತ್ಯುತ್ತಮ ಆಫರ್'ಗಳನ್ನು ಪ್ರಕಟಿಸಿದೆ. ಮುಂಬೈ(ಸೆ.04):ಜಿಯೋ'ಗೆ ಸೆಡ್ಡು ಹೊಡೆಯುವ ಸಲುವಾಗಿ ಭಾರತದಲ್ಲೇ ಅತೀ ಹೆಚ್ಚು ಚಂದದಾರರನ್ನು ಹೊಂದಿರುವ ಏರ್'ಟೆಲ್ ಅತ್ಯುತ್ತಮ ಆಫರ್'ಗಳನ್ನು ಪ್ರಕಟಿಸಿದೆ. ಈ ಆಫರ್ ಪ್ರಿಪೇಯ್ಡ್ ಗ್ರಾಹಕರನ್ನು ಅನ್ವಯವಾಗಲಿದ್ದು, ರೂ. 8 ರಿಂದ 399 ವರೆಗೆ ಒಳಗೊಂಡಿರುತ್ತದೆ. 8 ರೂ. ಯೋಜನೆ: 56 ದಿನಗಳ'ವರೆಗೆ ಸ್ಥಳೀಯ ಹಾಗೂ ಎಸ್'ಟಿಡಿ ಕರೆಗಳು 40 ರೂ. ಯೋಜನೆ: 45 ರೂ. ಟಾಕ್'ಟೈಮ್, ಅನಿಯಮಿತ ವಾಯಿದೆ 60ರೂ.:58 ರೂ. ಟಾಕ್'ಟೈಮ್, ಅನಿಯಮಿತ ವಾಯಿದೆ ರೂ.5:7 ದಿನಗಳವರೆಗೆ 4ಜಿಬಿ 3ಜಿ/4ಜಿ ಡಾಟಾ, 4ಜಿಗೆ ಅಪ್ಗ್ರೇಡ್ ಮಾಡಿಕೊಂಡವರಿಗೆ ಹಾಗೂ ಒಮ್ಮೆ ರಿಚಾರ್ಜ್ ರೂ. 199:ಅನಿಯಮಿತ ಸ್ಥಳೀಯ ಕರೆ ಹಾಗೂ 1ಜಿಬಿ 2ಜಿ/3ಜಿ/4ಜಿ ಡಾಟಾ 28 ದಿನದವರೆಗೆ ರೂ. 399:ಅನಿಯಮಿತ ಸ್ಥಳೀಯ ಹಾಗೂ ಎಸ್'ಟಿಡಿ ಕರೆಗಳು ಹಾಗೂ 84ಜಿಬಿ ಡಾಟಾ 84 ದಿನಗಳವರೆಗೆ ಎಲ್ಲ ಹ್ಯಾಂಡ್'ಸೆಟ್'ಗಳಿಗೆ 2500 ರೂ.ಗೆ ಸ್ಮಾರ್ಟ್ ಫೋನ್: ವರದಿಗಳ ಪ್ರಕಾರ 1500 ರೂ.ಗಳ ಜಿಯೋ ಫೋನ್'ಗೆ ಪ್ರತಿಯಾಗಿ ಏರ್'ಟೆಲ್ 2500 ರೂ.ಗಳಿಗೆ ಸ್ಮಾರ್ಟ್'ಫೋನ್ ತಯಾರಿಸುತ್ತಿದ್ದು, ದೀಪಾವಳಿಗಿಂತ ಮುನ್ನ ಗ್ರಾಹಕರಿಗೆ ಸೇರಲಿದೆ.