ಜಿಯೋಗೆ ಸಡ್ಡು : 2500 ರು.ಗೆ ಏರ್'ಟೆಲ್'ನಿಂದ 4G ಸ್ಮಾರ್ಟ್ ಫೋನ್ ರಿಲಯನ್ಸ್ ಜಿಯೋ ಕೊಡುಗೆಗಳಿಗೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ, ದೀಪಾವಳಿ ಹಬ್ಬದ ವೇಳೆಗೆ ಭಾರ್ತಿ ಏರ್‌ಟೆಲ್ ತನ್ನ ಗ್ರಾಹಕರಿಗೆ 2500 ರು.ಗೆ 4ಜಿ ಸ್ಮಾರ್ಟ್‌'ಫೋನ್ ಒದಗಿಸುವ ಬಗ್ಗೆ ಫೋನ್ ಉತ್ಪಾದಕರ ಜೊತೆ ಮಾತುಕತೆಯಲ್ಲಿ ನಿರತವಾಗಿದೆ ನವದೆಹಲಿ(ಆ.23):ರಿಲಯನ್ಸ್ ಜಿಯೋ ಕೊಡುಗೆಗಳಿಗೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ, ದೀಪಾವಳಿ ಹಬ್ಬದ ವೇಳೆಗೆ ಭಾರ್ತಿ ಏರ್‌ಟೆಲ್ ತನ್ನ ಗ್ರಾಹಕರಿಗೆ 2500 ರು.ಗೆ 4ಜಿ ಸ್ಮಾರ್ಟ್‌'ಫೋನ್ ಒದಗಿಸುವ ಬಗ್ಗೆ ಫೋನ್ ಉತ್ಪಾದಕರ ಜೊತೆ ಮಾತುಕತೆಯಲ್ಲಿ ನಿರತವಾಗಿದೆ. ಮಾತುಕತೆ ಬಹುತೇಕ ಲಫಪ್ರದ ಹಂತದಲ್ಲಿದ್ದು, ಯೋಜನೆಯ ಪ್ರಕಾರ ಕಡಿಮೆ ಬೆಲೆಯ ಮೊಬೈಲ್ ಫೋನ್‌'ನೊಂದಿಗೆ ಬೃಹತ್ ಮೊತ್ತದ ಡಾಟಾ ಮತ್ತು ಉಚಿತ ಕರೆ ಸಮಯವನ್ನೂ ಒದಗಿಸುವ ಚಿಂತನೆಯಿದೆ. ದೊಡ್ಡ ಸ್ಕ್ರೀನ್, ಉತ್ತಮ ಕ್ಯಾಮೆರಾ, ಉತ್ತಮ ಬ್ಯಾಟರಿ ಸಾಮರ್ಥ್ಯವೂ ಈ ಮೊಬೈಲ್‌ನಲ್ಲಿ ಇರಲಿದೆ ಎನ್ನಲಾಗಿದೆ.