ಜಿಯೋ 500 ರೂ. ಮೊಬೈಲ್'ನಲ್ಲಿ ಎಲ್ಲ ಮೊಬೈಲ್'ನಂತೆ ಪ್ರಮುಖವಾದ ಒಂದು ಸೌಲಭ್ಯವಿಲ್ಲ ಈ ಫೋನ್ ಆಗಸ್ಟ್ 24ರಂದು ಬುಕ್ಕಿಂಗ್'ಗೆ ಲಭ್ಯವಾಗಲಿದ್ದು, ಸಾರ್ವಜನಿಕರಿಗೆ ಸೆಪ್ಟೆಂಬರ್'ನಲ್ಲಿ ಲಭ್ಯವಾಗಲಿದೆ. ಮುಂಬೈ(ಜು.25):ಕಳೆದ ವಾರವಷ್ಟೆ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅತೀ ಕಡಿಮೆ ದರದ 500 ರೂ.ಗಳ ಮೊಬೈಲ್ ಫೋನ್'ಅನ್ನು ಬಿಡುಗಡೆ ಮಾಡಿತು. ಆದರೆ ಕಂಪನಿಯೇ ಸ್ಪಷ್ಟಪಡಿಸಿದಂತೆ ಈ ಮೊಬೈಲ್ 2 ಸಿಮ್'ಗಳಿಗೆ ಬೆಂಬಲ ನೀಡುವುದಿಲ್ಲ. ಕೇವಲ ಒಂದು ಸಿಮ್ ಮಾತ್ರ ಉಪಯೋಗಿಸಿಕೊಳ್ಳಬಹುದು. ಈ ಫೋನ್ ಆಗಸ್ಟ್ 24ರಂದು ಬುಕ್ಕಿಂಗ್'ಗೆ ಲಭ್ಯವಾಗಲಿದ್ದು, ಸಾರ್ವಜನಿಕರಿಗೆ ಸೆಪ್ಟೆಂಬರ್'ನಲ್ಲಿ ಲಭ್ಯವಾಗಲಿದೆ. ಫೀಚರ್'ಗಳು ಸ್ಕ್ರೀನ್: 2.4 ಇಂಚ್ ಸಂಪರ್ಕ: 4ಎಲ್'ಟಿಇ ಬ್ಯಾಂಡ್ ಹಾಗೂ 3,5,40 ಒಎಸ್: ಕೆಎಐ ಒಎಸ್ ರಾಮ್: 512 ಎಂಬಿ ಫ್ಲ್ಯಾಶ್: 4ಜಿಬಿ ಎಸ್'ಡಿ ಕಾರ್ಡ್: 128 ಜಿಬಿ ಸಿಮ್: ಒಂದು ಸಿಮ್ ಮಾತ್ರ ಫ್ರೆಂಟ್ ಕ್ಯಾಮೆರಾ: ವಿಜಿಎ ರೇರ್ ಕ್ಯಾಮರಾ: 2 ಎಂಪಿ ಬ್ಯಾಟರಿ: - 3.7V 2000 ಬ್ಲೂಟೂತ್: 4.1+ಬಿಎಲ್'ಇ ಎಫ್'ಎಂ: ಇಂಟಿಗ್ರೇಟೆಡ್ ಆಡಿಯೋ: 2030 ಅಥವಾ ಸಮಾನವಾದ ಲೌಡ್ ಮೋನೊ ಸ್ಪೀಕರ್ ವೊವೈಫೈ'ಗಾಗಿ ವೈಫೈ ಸಪೋರ್ಟ್ ಹಾಗೂ ಡಾಟಾ ಆಫ್'ಲೋಡ್ ಜಿಪಿಎಸ್ ಸಪೋರ್ಟ್ (, , , , , , , , , , , , , , ) ಹಾಗೂ ವಿಡಿಯೋ ಕಾಲಿಂಗ್ ಭಾರತೀಯ 14 ಭಾಷೆಗಳನ್ನು ಬೆಂಬಲ ನೀಡುತ್ತದೆ