'ಜಿಯೋಫೈಯ್ ಜಿಯೋ ಸ್ಟಾರ್ಟರ್ ಕಿಟ್' ಲಾಂಚ್: ಸಿಗಲಿದೆ ತೆರಿಗೆ ತಜ್ಞರ ಸಲಹೆ ಮತ್ತು ಆಕರ್ಷಕ ಆಫರ್'ಗಳು! ಗುರುವಾರದಂದು ರಿಲಾಯನ್ಸ್ ಜಿಯೋ 'ಜಿಯೋಫಾಯ್ ಜಿಯೋ ' ಸ್ಟಾರ್ಟ್ ಕಿಟ್ ಬಿಡುಗಡೆ ಮಾಡಿದೆ. ಇದರಿಂದ ವ್ಯಾಪಾರಿಗಳಿಗೆ ಫೈಲ್ ಮಾಡುವ ಸೇವೆ ಸಿಗಲಿದೆ. ಮುಂಬೈ(ಜು.07):ಗುರುವಾರದಂದು ರಿಲಾಯನ್ಸ್ ಜಿಯೋ 'ಜಿಯೋಫಾಯ್ ಜಿಯೋ ' ಸ್ಟಾರ್ಟ್ ಕಿಟ್ ಬಿಡುಗಡೆ ಮಾಡಿದೆ. ಇದರಿಂದ ವ್ಯಾಪಾರಿಗಳಿಗೆ ಫೈಲ್ ಮಾಡುವ ಸೇವೆ ಸಿಗಲಿದೆ. ಕಂಪೆನಿಯ ವೆಬ್'ಸೈಟ್'ನಲ್ಲಿ ನೀಡಿರುವ ಮಾಹಿತಿ ಅನ್ವಯ, ರಿಲಾಯನ್ಟ್ ಜಿಯೋ ಮೂಲಕ ಬಿಡುಗಡೆಯಾದ ಸ್ಟಾರ್ಟರ್ ಕಿಟ್'ನ ಬೆಲೆ 1,999 ರೂ ನಿಗದಿಪಡಿಸಿದೆ ಎಂದು ತಿಳಿದು ಬಂದಿದೆ. ಇದರಲ್ಲಿ ಒಂದು ಬಿಲಿಂಗ್ ಆ್ಯಪ್ ಹಾಗೂ ಫೈಲಿಂಗ್'ಗಾಗಿ ಜಿಯೋನ ಸಾಫ್ಟ್'ವೇರ್'ನೊಂದಿಗೆ ಒಂದು ವರ್ಷ ಅನಿಯಮಿತ ಕರೆ ಹಾಗೂ 24 ಜಿಬಿ ಡೇಟಾ ಕೂಡಾ ನೀಡಲಾಗುತ್ತದೆ. ಈ ಆಫರ್'ನೊಂದಿಗೆ ಜಿಯೋ ಕಂಪೆನಿ 'ಜಿಯೋ 'ಯಲ್ಲಿ ತೆರಿಗೆ ವೃತ್ತಿಪರರ ಸೇವೆಯನ್ನೂ ನೀಡಲಿದೆ. ಇದರಿಂದ ವ್ಯವಸಾಯಕ್ಕಾಗಿ ತೆರಿಗೆ ಪಾವತಿ ಪೈಲ್ ಮಾಡಲು ಅಧಿಕೇತವಾಗುವ ಸಾಧ್ಯತೆಗಳಿವೆ.