ಇವು 2017ರ 25 ಅತೀ ಅಪಾಯಕಾರಿ ಪಾಸ್ವರ್ಡ್'ಗಳು ದಿನದಿಂದ ದಿನಕ್ಕೆ ಆನ್’ಲೈನ್ ಸೇವೆಗಳನ್ನು ನೆಚ್ಚಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದೇ ರೀತಿ ಸೈಬರ್ ಅಪರಾಧಗಳು, ವಿಶೇಷವಾಗಿ ಆರ್ಥಿಕ ಸ್ವರೂಪದ ಅಪರಾಧಗಳು ಹೆಚ್ಚಾಗುತ್ತಿದೆ. ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ () ನಡೆಸಿರುವ ಅಧ್ಯಯನದ ಪ್ರಕಾರ ಭಾರತದಲ್ಲಿ 2017ರಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ಸೈಬರ್ ಅಪರಾಧ ನಡೆಯುತ್ತಿದೆ. ಕಳೆದ ವರ್ಷ ಅದರ ಪ್ರಮಾಣ 12 ನಿಮಿಷವಾಗಿತ್ತು. ದಿನದಿಂದ ದಿನಕ್ಕೆ ಆನ್’ಲೈನ್ ಸೇವೆಗಳನ್ನು ನೆಚ್ಚಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದೇ ರೀತಿ ಸೈಬರ್ ಅಪರಾಧಗಳು, ವಿಶೇಷವಾಗಿ ಆರ್ಥಿಕ ಸ್ವರೂಪದ ಅಪರಾಧಗಳು ಹೆಚ್ಚಾಗುತ್ತಿದೆ. ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ () ನಡೆಸಿರುವ ಅಧ್ಯಯನದ ಪ್ರಕಾರ ಭಾರತದಲ್ಲಿ 2017ರಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ಸೈಬರ್ ಅಪರಾಧ ನಡೆಯುತ್ತಿದೆ. ಕಳೆದ ವರ್ಷ ಅದರ ಪ್ರಮಾಣ 12 ನಿಮಿಷವಾಗಿತ್ತು. ಸೈಬರ್ ಅಪರಾಧಗಳಿಗೆ ನೆಟಿಜನ್’ಗಳು ನೀಡುವ ದುರ್ಬಲ ಪಾಸ್ವರ್ಡ್’ಗಳು ಒಂದು ಮುಖ್ಯ ಕಾರಣವಾಗಿದೆ. ಜನರು ಸುಲಭವಾಗಿ ನೆನಪಿನಲ್ಲಿಡಬಹುದಾದ ಪಾಸ್ವರ್ಡ್’ಗಳನ್ನೇ ಆಯ್ಕೆ ಮಾಡಿಕೊಳ್ಳುವ ಪ್ರವೃತ್ತಿಯು ಅಪರಾಧಗಳಿಗೆ ಎಡೆಮಾಡಿಕೊಡುತ್ತದೆ. ಆದುದರಿಂದ ಇಂಟರ್ನೆಟ್ ವ್ಯವಾಹರಗಳಲ್ಲಿ ಗರಿಷ್ಠ ಸುರಕ್ಷತೆ ಕಾಪಾಡಲು ಪ್ರಬಲವಾದ ಪಾಸ್ವರ್ಡ್’ಗಳನ್ನು ಬಳಸುವುದು ಅತ್ಯಗತ್ಯವಾಗಿದೆ. ಕಳೆದ ವರ್ಷ ಮಾಹಿತಿ ಕಳವಿನಿಂದಾಗಿ ಬಹಿರಂಗವಾದ ಸುಮಾರು 10 ಮಿಲಿಯನ್ ಪಾಸ್ವರ್ಡ್’ಗಳನ್ನು ‘ದಿ ಪಾಸ್ವರ್ಡ್ ಮ್ಯಾನೇಜ್’ಮೆಂಟ್ ಸರ್ವಿಸ್ ಕೀಪರ್ ಸೆಕ್ಯುರಿಟಿ’ ಕಂಪನಿಯು ಅಧ್ಯಯನ ಮಾಡಿ, ಅವುಗಳಲ್ಲಿ ಅತೀ ಸಾಮಾನ್ಯ 25 ಪಾಸ್ವರ್ಡ್’ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅವುಗಳು ಹೀಗಿವೆ: 123456 123456789 12345678 111111 1234567890 1234567 123123 987654321 123321 666666 18atcskd2w 7777777 1q2w3e4r 654321 555555 3rjs1la7qe 1q2w3e4r5t 123qwe 1q2w3e