ಏಪ್ರಿಲ್ 1ರಿಂದ ಜಿಯೋಗೆ ಹಣ ಪಾವತಿಸಬೇಕಾಗಿಲ್ಲ ! 99 ರೂ.ಗಳನ್ನು ಜಿಯೊದ ಮನಿ ಆ್ಯಪ್ ಮೂಲಕ ಪಾವತಿಸಿದರೆ 50 ರೂ. ಕ್ಯಾಶ್ ಬ್ಯಾಕ್ ಆಫರ್ ಪಡೆಯಬಹುದು. :ಉಚಿತ ಜಿಯೋ ಆಫರ್ ಇನ್ನಷ್ಟು ತಿಂಗಳು ಮುಂದುವರಿಕೆ : ಗ್ರಾಹಕರಿಗೆ ಸುಗ್ಗಿಯೋ ಸುಗ್ಗಿ ! :ಉಚಿತ ಜಿಯೋ ಆಫರ್ ಇನ್ನಷ್ಟು ತಿಂಗಳು ಮುಂದುವರಿಕೆ : ಗ್ರಾಹಕರಿಗೆ ಸುಗ್ಗಿಯೋ ಸುಗ್ಗಿ ! ನವದೆಹಲಿ(ಮಾ.24): ಪ್ರತಿಷ್ಠಿತ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ 6 ತಿಂಗಳ ಉಚಿತ ಆಫರ್ ನಂತರ ಏಪ್ರಿಲ್ 1ರಿಂದ ಹಿಂದೆ ಘೋಷಿಸಿದ್ದ 99ರೂ.ಗಳ ಜಿಯೋ ಪ್ರೈಮ್ ಮೆಂಬರ್'ಶಿಪ್ ರಿನಿವಲ್ ಮೆಂಬರ್'ಶಿಪ್ ಶುಲ್ಕವನ್ನು ಮತ್ತೆ ಗ್ರಾಹಕರಿಗೆ ನೀಡಲು ಮುಂದಾಗಿದೆ.99 ರೂ.ಗಳನ್ನು ಜಿಯೊದ ಮನಿ ಆ್ಯಪ್ ಮೂಲಕ ಪಾವತಿಸಿದರೆ 50 ರೂ. ಕ್ಯಾಶ್ ಬ್ಯಾಕ್ ಆಫರ್ ಪಡೆಯಬಹುದು. ತಿಂಗಳ ಆಫರ್ 303 ರೂ. ಪಾವತಿಸಿದರೆ ಪುನಃ 50 ರೂ. ಹಣ ನಿಮ್ಮ ಮೊಬೈಲ್ ಬ್ಯಾಲೆನ್ಸ್ ಖಾತೆಗೆ ವರ್ಗಾವಣೆಯಾಗುತ್ತದೆ. ಹೀಗೆ ಪಾವತಿಸಿದ 100 ರೂ.ಗಳನ್ನು ವಾಪಸ್ ಪಡೆಯಬಹುದು. ಜಿಯೋ ತನ್ನ ಗ್ರಾಹಕರಿಗೆ 6 ತಿಂಗಳು ಉಚಿತ ಆಫರ್ ನೀಡಿತ್ತು. ಮತ್ತೆ ಒಂದು ವರ್ಷಗಳ ಕಾಲ ಅತೀ ಕಡಿಮೆ ಬೆಲೆಗೆ ಹಲವು ಉಚಿತ ಆಫರ್'ಗಳನ್ನು ನೀಡಿದೆ.