ಏಪ್ರಿಲ್ ಬಳಿಕ ಜಿಯೋಗೆ 5 ಕೋಟಿ ಗ್ರಾಹಕರು ಗುಡ್‌ಬೈ? ಏನಿರಬಹುದು ಕಾರಣ ? ಪ್ರಸ್ತುತ ಜಿಯೊ ನೆಟ್‌ವರ್ಕ್ ಬಳಸುತ್ತಿರುವ ಗ್ರಾಹಕರು ಸಹ ಜಿಯೊ ಪ್ರೈಮ್‌ಗೆ ಸದಸ್ಯತ್ವ ಪಡೆದುಕೊಳ್ಳಬೇಕಿದ್ದು, ಇದಕ್ಕೆ ಎನ್‌ರೋಲ್ ಮಾಡಿಕೊಳ್ಳಲು ಮಾ.31 ಕೊನೆಯ ದಿನವಾಗಿರಲಿದೆ. ಮುಂಬೈ(ಫೆ.28):ಮಾರುಕಟ್ಟೆಗೆ ಲಗ್ಗೆ ಇಡುವ ವೇಳೆ ಆಕರ್ಷಕ ‘ವೆಲ್‌ಕಮ್ ಆರ್’ ಮತ್ತು ಹೊಸ ವರ್ಷದ ಉಚಿತ ಕರೆ ಮತ್ತು ಡಾಟಾ ಆರ್‌ಗಳ ಮೂಲಕ 6 ತಿಂಗಳೊಳಗೆ ರಿಲಾಯನ್ಸ್ ಜಿಯೊ 10ಕೋಟಿಗೂ ಹೆಚ್ಚು ಗ್ರಾಹಕರನ್ನು ತನ್ನದಾಗಿಸಿಕೊಂಡಿದೆ. ಆದರೆ, ಗ್ರಾಹಕರಿಗೆ ಜಿಯೊ ನೆಟ್‌ವರ್ಕ್ ನೀಡಿದ್ದ ಉಚಿತ ಡಾಟಾ ಮತ್ತು ಕರೆಗಳ ಆರ್ ಏಪ್ರಿಲ್ 1ರಿಂದ ರದ್ದುಗೊಳ್ಳಲಿದ್ದು, ಇದರಿಂದ ಜಿಯೊ 5 ಕೋಟಿ ಗ್ರಾಹಕರನ್ನು ಕಳೆದುಕೊಳ್ಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರಸ್ತುತ ಜಿಯೊ ನೆಟ್‌ವರ್ಕ್ ಬಳಸುತ್ತಿರುವ ಗ್ರಾಹಕರು ಸಹ ಜಿಯೊ ಪ್ರೈಮ್‌ಗೆ ಸದಸ್ಯತ್ವ ಪಡೆದುಕೊಳ್ಳಬೇಕಿದ್ದು, ಇದಕ್ಕೆ ಎನ್‌ರೋಲ್ ಮಾಡಿಕೊಳ್ಳಲು ಮಾ.31 ಕೊನೆಯ ದಿನವಾಗಿರಲಿದೆ. ಆದರೆ ಈ ವೇಳೆಗೆ ಜಿಯೋ ಕರೆ ಗುಣಮಟ್ಟ ಸುಧಾರಿಸದೇ ಇದ್ದಲ್ಲಿ ಜಿಯೋಗೆ ಗುಡ್‌ಬೈ ಹೇಳುವುದಾಗಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಶೇ.50ರಷ್ಟು ಜನ ತಿಳಿಸಿದ್ದಾರೆ.