ಜಯೊ, ಪೇಟಿಎಂಗೆ ಕೇಂದ್ರದ ನೋಟಿಸ್ ವಾಣಿಜ್ಯಉದ್ದೇಶಕ್ಕಾಗಿಪ್ರಧಾನಿಹೆಸರುಮತ್ತುಚಿತ್ರಬಳಕೆತಡೆಯುವ,ಲಾಂಛನಮತ್ತುಹೆಸರುಗಳ(ಅನುಚಿತಬಳಕೆತಡೆ)ಕಾಯ್ದೆ1950ರಅನ್ವಯನೋಟಿಸ್ನೀಡಲಾಗಿದೆ. ನವದೆಹಲಿ(ಫೆ.10):ತಮ್ಮ ಜಾಹೀರಾತುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊ ಬಳಸಿಕೊಂಡಿದ್ದುದಕ್ಕಾಗಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೊ ಮತ್ತು ಪೇಟಿಎಂ ಸಂಸ್ಥೆಗಳಿಗೆ ಸರ್ಕಾರ ನೋಟಿಸ್ ಜಾರಿಗೊಳಿಸಿದೆ. ರಾಷ್ಟ್ರಪತಿ, ಪ್ರಧಾನಿ ಮತ್ತು ಐತಿಹಾಸಿಕ ವ್ಯಕ್ತಿಗಳ ಘನತೆಯನ್ನು ಕಾಪಾಡುವ ಗ್ರಾಹಕ ವ್ಯವಹಾರಗಳ ಸಚಿವಾಲಯದಿಂದ ನೋಟಿಸ್ ಜಾರಿಯಾಗಿದೆ. ವಾಣಿಜ್ಯ ಉದ್ದೇಶಕ್ಕಾಗಿ ಪ್ರಧಾನಿ ಹೆಸರು ಮತ್ತು ಚಿತ್ರ ಬಳಕೆ ತಡೆಯುವ, ಲಾಂಛನ ಮತ್ತು ಹೆಸರುಗಳ (ಅನುಚಿತ ಬಳಕೆ ತಡೆ) ಕಾಯ್ದೆ 1950ರ ಅನ್ವಯ ನೋಟಿಸ್ ನೀಡಲಾಗಿದೆ. ಎರಡೂ ಕಂಪೆನಿಗಳಿಗೆ ನೋಟಿಸ್ ಕಳುಹಿಸಿದ್ದೇವೆ. ಇನ್ನಷ್ಟೇ ಪ್ರತಿಕ್ರಿಯೆ ಲಭ್ಯವಾಗಬೇಕಾಗಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಹೇಮ್ ಪಾಂಡೆ ಹೇಳಿದ್ದಾರೆ.