ವಾಟ್ಸಾಪ್'ನಲ್ಲಿ ಆಪ್ತರು ನಿಮ್ಮನ್ನು ಬ್ಲಾಕ್ ಮಾಡಿದ್ದಾರಾ? ಹಾಗಾದ್ರೆ ಈ ರೀತಿ ನಿಮ್ಮನ್ನು ನೀವು ಅನ್'ಬ್ಲಾಕ್ ಮಾಡಿಕೊಳ್ಳಿ ವಾಟ್ಸಾಪ್'ನಲ್ಲಿ ಪದೇ ಪದೇ ಮೆಸೇಜ್ ಮಾಡಿ ತೊಂದರೆ ಕೊಡುವುದು, ಕೆಟ್ಟ ಸಂದೇಶಗಳನ್ನು ಕಳುಹಿಸಿ ಮನಸ್ಸಿಗೆ ನೋವುಂಟು ಮಾಡುವವರ ಕಾಟ ತಪ್ಪಿಸಲು ವಾಟ್ಸಾಪ್ ಬ್ಲಾಕ್ ಮಾಡುವ ಆಯ್ಕೆ ನೀಡಿದೆ. ಆದರೆ ಕೆಲವೊಮ್ಮೆ ಇಂತಹ ಮೆಸೇಜ್ ಕಳುಹಿಸದಿದ್ದರೂ ಕೆಲವರು ನಂಬರ್'ಗಳನ್ನು ಬ್ಕಾಕ್ ಮಾಡುತ್ತಾರೆ. ಇನ್ನು ನಮ್ಮ ಆಪ್ತರೇ ನಮ್ಮ ನಂಬರ್ ಬ್ಲಾಕ್ ಮಾಡಿದರೆ ನಿಜಕ್ಕೂ ಮನಸ್ಸಿಗೆ ನೋವಾಗುತ್ತದೆ. ಆದರೀಗ ನಿಮ್ಮ ನಂಬರ್ ಯಾರಾದರೂ ಬ್ಲಾಕ್ ಮಾಡಿದ್ದರೆ ಅದನ್ನು ನೀವೇ ಖುದ್ದಾಗಿ ಅನ್'ಬ್ಲಾಕ್ ಮಾಡುವ ಅವಕಾಶವಿದೆ ವಾಟ್ಸಾಪ್'ನಲ್ಲಿ ಪದೇ ಪದೇ ಮೆಸೇಜ್ ಮಾಡಿ ತೊಂದರೆ ಕೊಡುವುದು, ಕೆಟ್ಟ ಸಂದೇಶಗಳನ್ನು ಕಳುಹಿಸಿ ಮನಸ್ಸಿಗೆ ನೋವುಂಟು ಮಾಡುವವರ ಕಾಟ ತಪ್ಪಿಸಲು ವಾಟ್ಸಾಪ್ ಬ್ಲಾಕ್ ಮಾಡುವ ಆಯ್ಕೆ ನೀಡಿದೆ. ಆದರೆ ಕೆಲವೊಮ್ಮೆ ಇಂತಹ ಮೆಸೇಜ್ ಕಳುಹಿಸದಿದ್ದರೂ ಕೆಲವರು ನಂಬರ್'ಗಳನ್ನು ಬ್ಕಾಕ್ ಮಾಡುತ್ತಾರೆ. ಇನ್ನು ನಮ್ಮ ಆಪ್ತರೇ ನಮ್ಮ ನಂಬರ್ ಬ್ಲಾಕ್ ಮಾಡಿದರೆ ನಿಜಕ್ಕೂ ಮನಸ್ಸಿಗೆ ನೋವಾಗುತ್ತದೆ. ಆದರೀಗ ನಿಮ್ಮ ನಂಬರ್ ಯಾರಾದರೂ ಬ್ಲಾಕ್ ಮಾಡಿದ್ದರೆ ಅದನ್ನು ನೀವೇ ಖುದ್ದಾಗಿ ಅನ್'ಬ್ಲಾಕ್ ಮಾಡುವ ಅವಕಾಶವಿದೆ. ಅದು ಹೇಗಂತೀರಾ? ಇಲ್ಲಿದೆ ವಿಧಾನ ಅನ್'ಬ್ಲಾಕ್ ಮಾಡುವುದು ಹೇಗೆ? -ಎಲ್ಲಕ್ಕೂ ಮೊದಲು ನೀವು ನಿಮ್ಮ ವಾಟ್ಸಾಪ್ ಸೆಟ್ಟಿಂಗ್ಸ್'ನ್ನು ತೆರೆಯಿರಿ. -ಬಳಿಕ ನೀವು ನಿಮ್ಮ ವಾಟ್ಸಾಪ್ ಅಕೌಂಟ್ ಡಿಲೀಟ್ ಮಾಡುವ ಾಯ್ಕೆಯನ್ನೊತ್ತಿ ನಿಮ್ಮ ನಂಬರ್ ನಮೂದಿಸಿ. -ನಂಬರ್ ನಮೂದಿಸಿದ ಬಳಿಕ ಅಕೌಂಟ್ ಡಿಲೀಟ್ ಮಾಡಲು ಸಾಧ್ಯವಾಗುತ್ತದೆ. -ಅಕೌಂಟ್ ಡಿಲೀಟ್ ಆಗಿರುವುದನ್ನು ಖಚಿತಪಡಿಸಿಕೊಂಡು ವಾಟ್ಸಾಪ್ ಅನ್ ಇನ್ಸ್ಟಾಲ್ ಮಾಡಿ ಬಳಿಕ ನಿಮ್ಮ ಮೊಬೈಲ್'ನ್ನು ರೀ ಸ್ಟಾರ್ಟ್ ಮಾಡಿ. -ಬಳಿಕ ಗೂಗಲ್ ಪ್ಲೇ ಸ್ಟಾರ್'ನಿಂದ ವಾಟ್ಸಾಪ್ ಅಪ್ಲಿಕೇಷನ್'ನ್ನು ಡೌನ್'ಲೋಡ್ ಮಾಡಿಕೊಂಡು ಮತ್ತೆ ನಿಮ್ಮ ಖಾತೆ ತೆರೆಯಿರಿ. -ನಿಮ್ಮ ಖಾತೆಯನ್ನು ಮತ್ತೆ ತೆರೆಯುವಾಗ ನಂಬರ್ ನಮೂದಿಸಬೇಕಾಗುತ್ತದೆ. ಇದರಂತೆ ನಮೂದಿಸಿ ಮತ್ತೆ ವಾಟ್ಸಾಪ್ ಬಳಸಿ. ಈ ಮೂಲಕ ನಿಮ್ಮ ನಂಬರ್'ನ್ನು ಬ್ಲಾಕ್ ಮಾಡಿದವರ ಬ್ಲಾಕ್ ಲಿಸ್ಟ್'ನಿಂದ ತನ್ನಷ್ಟಕ್ಕೇ ಅನ್'ಬ್ಲಾಕ್ ಆಗುತ್ತದೆ. ಅಲ್ಲದೇ ನೀವು ಅವರಿಗೆ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ.