ಈ 4 ಆ್ಯಪ್ ಕೂಡಲೇ ಡಿಲೀಟ್ ಮಾಡಿ; ಕೇಂದ್ರ ಸರಕಾರದಿಂದ ಸೂಚನೆ ಇವು ದೇಶದ ಭದ್ರತೆಗೂ ಒಳ್ಳೆಯದಲ್ಲ. ಈಗಲೇ ಈ ಆ್ಯಪ್'​ಗಳನ್ನ ಡಿಲೀಟ್ ಮಾಡಿ ಎಂದು ಕೇಂದ್ರ ಗೃಹ ಸಚಿವಾಲಯ ಎಚ್ಚರಿಕೆ ಕೊಟ್ಟಿದೆ. ನವದೆಹಲಿ(ಡಿ. 15):ಮೊಬೈಲ್​ನಲ್ಲಿ ಕೆಲವು ಆ್ಯಪ್'​ಗಳ ಮೂಲಕ ಹ್ಯಾಕರ್ಸ್'​ಗಳು ನಿಮ್ಮ ಖಾತೆಯ ಮಾಹಿತಿಗಳನ್ನ ಕದಿಯಬಹುದು. ಇಂಥದ್ದೊಂದು ಎಚ್ಚರಿಕೆ ಸಂದೇಶ ರವಾನಿಸಿರೋದು ಕೇಂದ್ರ ಗೃಹ ಸಚಿವಾಲಯ. ಇಂಥ ನಾಲ್ಕು ಅಪಾಯಕಾರಿ ಆ್ಯಪ್'ಗಳನ್ನು ಸಚಿವಾಲಯವು ಪಟ್ಟಿ ಮಾಡಿದೆ. ಆ ನಾಲ್ಕು ಆ್ಯಪ್'​ಗಳನ್ನ ನಿಮ್ಮ ಮೊಬೈಲ್​ನಿಂದ ಈಗಲೇ ಡಿಲೀಟ್ ಮಾಡಿಬಿಡಿ. ಯಾವುದು ಈ ಆ್ಯಪ್'ಗಳು?1) - ವಿಡಿಯೋ ಆ್ಯಪ್2) - ಎಂಟರ್ಟೈನ್ಮೆಂಟ್ ಆ್ಯಪ್3) - ಗೇಮ್ ಆ್ಯಪ್4) - ಸಂಗೀತದ ಆ್ಯಪ್ ಏನು ಅಪಾಯ ಮಾಡುತ್ತವೆ?ಈ ಆ್ಯಪ್'​ಗಳು ನಿಮ್ಮ ಸ್ಮಾರ್ಟ್'ಫೋನ್'​ನಲ್ಲಿದ್ದರೆ, ಅವುಗಳ ಮೂಲಕ ನಿಮ್ಮ ಬ್ಯಾಂಕ್ ಖಾತೆಯೂ ಸೇರಿದಂತೆ, ನಿಮ್ಮ ಖಾಸಗಿ ವಿಚಾರಗಳನ್ನು ಕದಿಯುವುದು ಹ್ಯಾಕರ್ಸ್​'ಗಳಿಗೆ ಸುಲಭವಾಗಲಿದೆ. ಹೀಗೆ ಆ್ಯಪ್'​ಗಳ ಮೂಲಕ ಮಾಹಿತಿ ಕದಿಯುತ್ತಿರುವ ಕುತಂತ್ರ ನಡೆಸುತ್ತಿರುವುದು ಪಾಕಿಸ್ತಾನದ ಐಎಸ್'​ಐ. ಹೀಗಾಗಿ ಇವು ದೇಶದ ಭದ್ರತೆಗೂ ಒಳ್ಳೆಯದಲ್ಲ. ಈಗಲೇ ಈ ಆ್ಯಪ್'​ಗಳನ್ನ ಡಿಲೀಟ್ ಮಾಡಿ ಎಂದು ಕೇಂದ್ರ ಗೃಹ ಸಚಿವಾಲಯ ಎಚ್ಚರಿಕೆ ಕೊಟ್ಟಿದೆ.