ಏರ್'ಟೆಲ್'ನಿಂದ ಮೂರು ತಿಂಗಳು ಅನ್'ಲಿಮಿಟೆಡ್ 4ಜಿ ಡೇಟಾ ಆಫರ್ ಬಂದಿದ್ದರೆ ಹುಷಾರ್..! ಬಹಳಷ್ಟು ಜನರು ಆಫರ್ ಅಂದಕೂಡಲೇ ಕಣ್ಣುಮುಚ್ಚಿಕೊಂಡು ಅಲ್ಲಿರುವ ಲಿಂಕ್ ಕ್ಲಿಕ್ ಮಾಡಿಬಿಡುತ್ತಾರೆ. ಹೀಗೆಯೇ, ://--. ಎಂಬ ಲಿಂಕ್ ಕ್ಲಿಕ್ ಮಾಡಿದರೆ ಏರ್'ಟೆಲ್'ನ ಅಧಿಕೃತ ವೆಬ್'ಸೈಟ್'ಗೆ ಹೋಗುವುದಿಲ್ಲ. ಬದಲಾಗಿ ಬೇರೆಯದೇ ತಾಣಕ್ಕೆ ಕರೆದೊಯ್ಯುತ್ತದೆ. ನವದೆಹಲಿ:ಇತ್ತೀಚೆಗೆ ಸಾಕಷ್ಟು ಮೊಬೈಲ್'ಗಳಿಗೆ ಏರ್'ಟೆಲ್ ಹೆಸರಿನಲ್ಲಿ ಹೊಸ ಆಫರ್'ವೊಂದು ಬರುತ್ತಿದೆ. ಮೂರು ತಿಂಗಳ ಕಾಲ ಏರ್'ಟೆಲ್'ನಿಂದ ಅನ್'ಲಿಮಿಟೆಡ್ 4ಜಿ ಡೇಟಾ ನೀಡಲಾಗುತ್ತದೆ ಎಂಬಂತಹ ಸಂದೇಶವೊಂದು ವಾಟ್ಸಾಪ್'ನಲ್ಲಿ ಹರಿದಾಡುತ್ತಿದೆ. ಆದರೆ, ಆ ಸಂದೇಶದಲ್ಲಿರುವ ಲಿಂಕ್ ಕ್ಲಿಕ್ ಮಾಡಿದರೆ ಬೇರೆಯದೇ ವೆಬ್'ಸೈಟ್'ಗೆ ಹೋಗುತ್ತದೆ. ಗಮನಿಸಿ, ಆ ಸಂದೇಶ ಈ ಕೆಳಕಂಡಂತಿರುತ್ತದೆ. " :- , 4G, 3G 3 . 3 4G, 3G . :- ://--./. / 300 3 . ,, . 123 . * *" ಬಹಳಷ್ಟು ಜನರು ಆಫರ್ ಅಂದಕೂಡಲೇ ಕಣ್ಣುಮುಚ್ಚಿಕೊಂಡು ಅಲ್ಲಿರುವ ಲಿಂಕ್ ಕ್ಲಿಕ್ ಮಾಡಿಬಿಡುತ್ತಾರೆ. ಹೀಗೆಯೇ, ://--. ಎಂಬ ಲಿಂಕ್ ಕ್ಲಿಕ್ ಮಾಡಿದರೆ ಏರ್'ಟೆಲ್'ನ ಅಧಿಕೃತ ವೆಬ್'ಸೈಟ್'ಗೆ ಹೋಗುವುದಿಲ್ಲ. ಬದಲಾಗಿ ಬೇರೆಯದೇ ತಾಣಕ್ಕೆ ಕರೆದೊಯ್ಯುತ್ತದೆ. ಅಲ್ಲಿ, ನಿಮ್ಮ ಹೆಸರು, ಮೊಬೈಲ್ ನಂಬರ್ ಮತ್ತು ರಾಜ್ಯ ವಿವರ ನೀಡುವಂತೆ ಕೇಳುತ್ತದೆ. ಬಳಿಕ ಆ ಆಫರ್ ಸಾಕಾರಗೊಳ್ಳಲು ನೀವು ಈ ಸಂದೇಶವನ್ನು ನಿಮ್ಮ 8 ವಾಟ್ಸಾಪ್ ಸ್ನೇಹಿತರಿಗೆ ಕಳುಹಿಸಬೇಕೆಂಬ ಕಂಡೀಷನ್ ಹಾಕುತ್ತದೆ. ಅಷ್ಟೇ ಅಲ್ಲ, ಆ ಲಿಂಕ್'ನಿಂದ ನಿಮ್ಮ ಮೊಬೈಲ್'ಗೆ ಮಾಲ್'ವೇರ್ ಸೇರಿಕೊಳ್ಳುವ ಸಾಧ್ಯತೆ ಇದೆ. ಈ ಮಾಲ್'ವೇರ್ ನಿಮ್ಮ ಮೊಬೈಲ್'ಗೆ ಒಂದಷ್ಟು ಆ್ಯಪ್'ಗಳನ್ನು ಡೌನ್'ಲೋಡ್ ಮಾಡುವಂತೆ ಮಾಡಬಹುದು. ನಿಮ್ಮ ಮೊಬೈಲ್'ನಲ್ಲಿರುವ ಡೇಟಾವನ್ನು ಕದಿಯಬಹುದು. ಹೀಗಾಗಿ, ಎಚ್ಚರದಿಂದಿರಿ ಎಂದು ತಿಳಿಸಬಯಸುತ್ತೇವೆ.