ನಿಮ್ಮ ವಾಟ್ಸಪ್'ನಲ್ಲಿ ಇನ್ನು ವಿಡಿಯೋ ಕಾಲಿಂಗ್ ಬಂದಿಲ್ವಾ..? ಹಾಗಿದ್ರೆ ಹೀಗೆ ಮಾಡಿ..! ಪ್ಲೇ ಸ್ಟೋರಿನಲ್ಲಿ ನೋಡಿದರು ವಾಟ್ಸಪ್ ವಿಡಿಯೋ ಕಾಲಿಂಗ್ ಲಭ್ಯವಿಲ್ಲ ಎನ್ನುವವರ ಸಂಖ್ಯೆ ಅಧಿಕವಾಗಿದೆ ಅವರಿಗಾಗಿಯೇ ಈ ಸುದ್ದಿ ಸದ್ಯ ಹಾಟ್ ಟಾಪಿಕ್ ಆಗಿರುವುದು ವಾಟ್ಸಪ್ ವಿಡಿಯೋ ಕಾಲಿಂಗ್. ಸ್ಕೇಪ್ ಮತ್ತು ಗೂಗಲ್ ಡಿಯೋ ಗೆ ಪ್ರತಿ ಸ್ಪರ್ಧಿಯಾಗಿ ವಾಟ್ಸಪ್ ನಲ್ಲಿ ವಿಡಿಯೋ ಕಾಲಿಂಗ್ ನೀಡಲು ಫೇಸ್ ಬುಕ್ ಚಿಂತನೆ ನಡೆಸಿತ್ತು. ಈ ಹಿನ್ನಲೆಯಲ್ಲಿ ಸದ್ಯ ಬೀಟಾ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ನಿನ್ನೆಯಿಂದ ಮಾದ್ಯಮಗಳಲ್ಲಿ ವಾಟ್ಸಪ್ ವಿಡಿಯೋ ಕಾಲಿಂಗ್ ಮಾಡಬಹುದು ಎಂಬ ಸುದ್ದಿ ಬರುತ್ತಿದೆ ಆದರೆ ನಮಗೆ ಇನ್ನು ಆಪ್ ಡೇಟ್ ಸಿಕ್ಕಿಲ್ಲ, ಪ್ಲೇ ಸ್ಟೋರಿನಲ್ಲಿ ನೋಡಿದರು ಯಾವುದೇ ಪ್ರಯೋಜನ ವಿಲ್ಲ ಎನ್ನುವವರ ಸಂಖ್ಯೆ ಅಧಿಕವಾಗಿದೆ ಅವರಿಗಾಗಿಯೇ ಈ ಸುದ್ದಿ. ನೀವು ಯಾರಿಗೆ ಕಾಲ್ ಮಾಡಲು ಬಯಸುವಿರೋ ಅವರ ಬಳಿಯೂ ವಿಡಿಯೋ ಕಾಲಿಂಗ್ ಇದ್ದರೆ ಆರಾಮವಾಗಿ ಮುಖ ಮುಖ ನೋಡಿ ಮಾತನಾಡಬಹುದು.