ಫೇಸ್‌ಬುಕ್‌ನಿಂದ ಸ್ಮಾರ್ಟ್‌ಫೋನ್‌ ಆ್ಯಪ್‌ ಸ್ಯಾನ್‌ಫ್ರಾನ್ಸಿಸ್ಕೋ (ಅ.08);ಸ್ಮಾರ್ಟ್‌ಫೋನ್‌ ಬಳಕೆದಾರರಿಗಾಗಿ ಫೇಸ್‌ಬುಕ್‌ ಆ್ಯಪ್‌ ಅನ್ನು ಬಿಡುಗಡೆ ಮಾಡಿದೆ. ಇದರ ಮೂಲಕ ಸ್ಥಳೀಯವಾಗಿರುವಂಥ ಘಟನೆಗಳು, ಸ್ನೇಹಿತರ ಜತೆಗೆ ಹೆಚ್ಚಿನ ಮನರಂಜನೆ ಗಳಿಸಲು ಇದು ನೆರವಾಗಲಿದೆ. ಸ್ಯಾನ್‌ಫ್ರಾನ್ಸಿಸ್ಕೋ (ಅ.08);ಸ್ಮಾರ್ಟ್‌ಫೋನ್‌ ಬಳಕೆದಾರರಿಗಾಗಿ ಫೇಸ್‌ಬುಕ್‌ ಆ್ಯಪ್‌ ಅನ್ನು ಬಿಡುಗಡೆ ಮಾಡಿದೆ. ಇದರ ಮೂಲಕ ಸ್ಥಳೀಯವಾಗಿರುವಂಥ ಘಟನೆಗಳು, ಸ್ನೇಹಿತರ ಜತೆಗೆ ಹೆಚ್ಚಿನ ಮನರಂಜನೆ ಗಳಿಸಲು ಇದು ನೆರವಾಗಲಿದೆ. ಫೇಸ್‌ಬುಕ್‌ನ ಪ್ರಾಡಕ್ಟ್ ಮ್ಯಾನೇಜರ್‌ ಆದಿತ್ಯ ಕೂಲ್‌ವಾಲ್‌ ಈ ಮಾಹಿತಿ ನೀಡಿದ್ದಾರೆ. ಸಂಗೀತ ಕಾರ್ಯಕ್ರಮಗಳು ಸೇರಿದಂತೆ ಹಲವು ವಿವಿಧ ರೀತಿಯ ಕಾರ್ಯಕ್ರಮಗಳ ಆಯೋಜನೆ ಮಾಡಿ, ಅದಕ್ಕೆ ತೆರಳುವವರಿಗೆ ಮಾಹಿತಿ ನೀಡಲೂ ಇದರಿಂದ ಅನುಕೂಲವಾಗುತ್ತದೆ. ಕಾರ್ಯಕ್ರಮಗಳ ಪಟ್ಟಿಯನ್ನು ನೋಡಿದ ಕೂಡಲೇ, ಹೊಸತಾಗಿರುವಂಥ ಕಾರ್ಯಕ್ರಮಗಳು ಅಪ್‌ಡೇಟ್‌ ಆಗಿರುತ್ತವೆ. ಸ್ನೇಹಿತರ ಜತೆಗೆ ಅದನ್ನು ಶೇರ್‌ ಮಾಡಿಕೊಳ್ಳಲು ಅವಕಾಶವಿದೆ ಎಂದು ಕೂಲ್‌ವಾಲ್‌ ತಿಳಿಸಿದ್ದಾರೆ.