ಚಂದ್ರಯಾನ-3 ಇಳಿದ ಸ್ಥಳಕ್ಕೆ ಶಿವಶಕ್ತಿ ಹೆಸರಿಟ್ಟಿದ್ದರಲ್ಲಿ ತಪ್ಪೇನಿಲ್ಲ: ಇಸ್ರೋ ಮುಖ್ಯಸ್ಥ ಸೋಮನಾಥ್‌ ‘ಚಂದ್ರಯಾನ-3 ಯೋಜನೆಯ ಲ್ಯಾಂಡರ್‌ ಇಳಿದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ‘ಶಿವಶಕ್ತಿ’ ಎಂದು ನಾಮಕರಣ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದು ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್‌ ಹೇಳಿದ್ದಾರೆ. ತಿರುವನಂತಪುರ: ‘ಚಂದ್ರಯಾನ-3 ಯೋಜನೆಯ ಲ್ಯಾಂಡರ್‌ ಇಳಿದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ‘ಶಿವಶಕ್ತಿ’ ಎಂದು ನಾಮಕರಣ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದು ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್‌ ಹೇಳಿದ್ದಾರೆ. ಇಲ್ಲಿನ ಪೌರ್ಣಮಿ ಕಾವು ಭದ್ರಕಾಳಿ ದೇಗುಲಕ್ಕೆ ( ) ಭೇಟಿ ನೀಡಿ ಮಾತನಾಡಿದ ಅವರು,‘ಈ ಹೆಸರು ಇಡುವ ಹಿಂದಿನ ಮಹತ್ವವನ್ನು ಪ್ರಧಾನಿ ಅವರು ನಮಗೆ ವಿವರಿಸಿದ್ದಾರೆ. ಹಾಗಾಗಿ ಇದರಲ್ಲಿ ಯಾವುದೇ ತಪ್ಪಿಲ್ಲ. ಅಲ್ಲದೇ ಅವರು ಚಂದ್ರಯಾನ-2 ನೌಕೆ ( 2) ಬಿದ್ದ ಜಾಗಕ್ಕೆ ತಿರಂಗಾ ಪಾಯಿಂಟ್‌ ( ) ಎಂದು ಹೆಸರಿಟ್ಟಿದ್ದಾರೆ. ಇವರೆರಡೂ ಸಹ ಭಾರತದ ಹೆಸರುಗಳಾಗಿದೆ. ನಾವು ಏನು ಮಾಡುತ್ತಿದ್ದೇವೆ ಎಂಬುದರ ಮಹತ್ವ ನಮಗೆ ಅರಿವಿರಬೇಕು. ದೇಶದ ಪ್ರಧಾನಿಯಾಗಿ ಅವರು ಈ ಪ್ರದೇಶಗಳಿಗೆ ಹೆಸರಿಡುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು. -3 ಯಶಸ್ಸಿನ ಬಳಿಕ ಕೇರಳದ ಭದ್ರಕಾಳಿ ದೇಗುಲದಲ್ಲಿ ಇಸ್ರೋ ಅಧ್ಯಕ್ಷರ ಪ್ರಾರ್ಥನೆ: ಸೂರ್ಯ ಶಿಕಾರಿಗೆ ರೆಡಿ! ದೇಗುಲ ಭೇಟಿ ಬಗ್ಗೆ ಮಾತನಾಡಿದ ಅವರು,ನಾನು ಜ್ಞಾನವನ್ನು ಬಯಸುವವನು. ಹಾಗಾಗಿಯೇ ಚಂದ್ರನ ಅಧ್ಯಯನ ಮಾಡುತ್ತಿದ್ದೇನೆ. ಬಾಹ್ಯಾಕಾಶದ ಅಧ್ಯಯನ ( ) ಮಾಡುತ್ತೇನೆ. ಇದರೊಂದಿಗೆ ಆಧ್ಯಾತ್ಮವನ್ನು ಅರಿಯುವುದು ಸಹ ನನ್ನ ಪಯಣವೇ ಆಗಿದೆ. ಹೀಗೆ ಆಂತರಿಕವಾಗಿ ವಿಕಸಿತನಾಗಲು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವೆ, ಧಾರ್ಮಿಕ ಗ್ರಂಥಗಳನ್ನು ಓದುವೆ. ನಮ್ಮ ಬಗ್ಗೆ ತಿಳಿದುಕೊಳ್ಳಲು ಇದರ ಅಧ್ಯಯನ ಅಗತ್ಯವಾಗಿದೆ. ಈ ಎರಡು ವಿಷಯಗಳು ವಿಭಿನ್ನವಾದದ್ದು. ಇದನ್ನು ಬೆರೆಸುವ ಅವಶ್ಯಕತೆ ಇಲ್ಲ ಎಂದು ಹೇಳಿದರು. ಇಸ್ರೋ ಆಧ್ಯಕ್ಷ ಸೋಮನಾಥ್‌ ಬೆನ್ನುತಟ್ಟಿ ಶ್ಲಾಘಿಸಿದ ಪ್ರಧಾನಿ ಮೋದಿ